
ಬೆಂಗಳೂರಿನ ಹಲವೆಡೆ ಇಂದು & ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ :ಬೆಸ್ಕಾಂ
ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಸ್ಕಾಂ ಸಿಬ್ಬಂದಿಗಳು ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ, ಇಂದು ಮತ್ತು ನಾಳೆ ಪವರ್ ಕಟ್ ಇರಲಿದೆ.
ಅದರಂತೆ ವಿಶ್ವಪ್ರಿಯ ಲೇಔಟ್, ಬಂಡೆ ಪಾಳ್ಯ, ಸಿಂಗಸಂದ್ರ, ಜಿ.ಬಿ.ಪಾಳ್ಯ, ಕೂಡ್ಲು ಗೇಟ್, ಎಇಸಿಎಸ್ ಲೇಔಟ್ ಎ ಮತ್ತು ಬಿ ಬ್ಲಾಕ್, ಹೊಂಗಸಂದ್ರ, ಓಂಶಕ್ತಿ ಲೇಔಟ್, ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶ, ಮುನೇಶ್ವರ ಲೇಔಟ್ ಸೇರಿದಂತೆ ಹಲವು ನಗರಗಳಲ್ಲಿ ಇಂದಿನಿಂದ ಎರಡು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.