
ಬೆಂಗಳೂರಿನಲ್ಲಿ ಯಾವುದೇ ಮಂಕಿ ಫಾಕ್ಸ್ ಪ್ರಕರಣ ದಾಖಲಾಗಿಲ್ಲ: BBMP ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು: ಬೆಂಗಳೂರಿನಲ್ಲಿ ಯಾವುದೇ ಮಂಕಿ ಫಾಕ್ಸ್ ಪ್ರಕರಣ ದಾಖಲಾಗಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಧ್ಯ ನಗರದಲ್ಲಿ ಮಂಕಿ ಫಾಕ್ಸ್ ಪ್ರಕರಣ ದಾಖಲಾಗಿಲ್ಲ. ಪ್ರಕರಣ ದಾಖಲಾದರೆ ಚಿಕಿತ್ಸೆ ಕುರಿತಂತೆ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರದ ಸೂಚನೆ ಪ್ರಕಾರ ನಾವು ಕ್ರಮ ಕೈಗೊಳ್ತೀವಿ. ಸಧ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ನಗರದಲ್ಲಿರುವ ಅನಧಿಕೃತ ಫ್ಲೆಕ್ಸ್ ವಿಚಾರವಾಗಿ ಮಾತನಾಡಿದ ಅವರು, ಪ್ರತಿ ದಿನ ಸಾವಿರಾರು ಫ್ಲೆಕ್ಸ್ ಗಳನ್ನ ತೆರವು ಮಾಡ್ತಾ ಇದ್ದು, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ. ಇದುವರೆಗೂ ಯಾರ ಮೇಲೂ ಎಫ್ ಐಆರ್ ದಾಖಲು ಮಾಡಿಲ್ಲ. ಆದರೆ ಇನ್ಮುಂದೆ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.