ಬೆಂಗಳೂರಿಗೆ ಬಂದಿಳಿದ ಒಟ್ಟು 31 ವಿದ್ಯಾರ್ಥಿಗಳು: ಹೂ ನೀಡಿ ಸ್ವಾಗತಿಸಿದ ನೋಡಲ್ ಅಧಿಕಾರಿ

ಬೆಂಗಳೂರು

ಬೆಂಗಳೂರು : ಉಕ್ರೇನ್ ನಲ್ಲಿದ್ದ ಮತ್ತಷ್ಟು ವಿದ್ಯಾರ್ಥಿಗಳು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ತಡರಾತ್ರಿ 18 ವಿದ್ಯಾರ್ಥಿಗಳು ದೆಹಲಿ ಯಿಂದ ನಗರಕ್ಕೆ ವಾಪಸ್ ಆಗಿದ್ದು, ನೋಡಲ್ ಅಧಿಕಾರಿ, ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಇದುವರೆಗೆ ಒಟ್ಟಾರೆ 31 ವಿದ್ಯಾರ್ಥಿಗಳು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಈಗಾಗಲೇ ಬಂದ ವಿದ್ಯಾರ್ಥಿಗಳಿಗೆ ಇತರ ಗೆಳೆಯರ ಜೊತೆಗೆ ಸಂಪರ್ಕದಲ್ಲಿ ಇರುವಂತೆ ಸೂಚಿಸಲಾಗಿದ್ದು, ಯಾರೆಲ್ಲಾ ಉಕ್ರೇನ್ ನಲ್ಲಿ ಉಳಿದಿದ್ದಾರೆ ಅವರ ಎಲ್ಲಾ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ದಾಖಲಿಸಲು ಮನವಿ ಮಾಡಲಾಗಿದೆ. ಪಶ್ಚಿಮ ಭಾಗದಿಂದ ಸದ್ಯ ವಿದ್ಯಾರ್ಥಿಗಳ ರೆಸ್ಕ್ಯೂ ಆಗಿದ್ದು, ಪೂರ್ವ ಭಾಗದಿಂದ ಇನ್ನೂ ಯಾರನ್ನೂ ರೆಸ್ಕ್ಯೂ ಮಾಡಿಲ್ಲ. ಅಲ್ಲಿ ಉಳಿದಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

Leave a Reply

Your email address will not be published.