ಬೆಂಗಳೂರಿಗರೇ ಎಚ್ಚರ.. ಪಾರ್ಕಿಂಗ್ ಸ್ಥಳದಲ್ಲಿ ನಿಮ್ಮ ಕಾರುಗಳನ್ನು ನಿಲ್ಲಿಸುವ ಮುನ್ನ ಈ ಸ್ಟೋರಿ ನೋಡಿ

ಬೆಂಗಳೂರು

ಬೆಂಗಳೂರು: ಹಾಡಹಗಲೇ ದುಬಾರಿ ಕಾರು ಕಳವು ಮಾಡಿಕೊಂಡು ಹೋಗುತ್ತಿದ್ದ ಕಳ್ಳನನ್ನು ಬೆಂಗಳೂರಿನ ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ನಿವಾಸಿ ಶೂಟರ್ ಸಲ್ಮಾನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯು ಯಡಿಯೂರು ಸರ್ಕಲ್‍ಬಳಿಯ ಮನೆಯೊಂದರ ಪಾರ್ಕಿಂಗ್ ಸ್ಥಳದಲ್ಲಿದ್ದ ನಿಲ್ಲಿಸಿದ್ದ 3 ಐಷಾರಾಮಿ ಕಾರುಗಳು ಹಾಗೂ ಅಲ್ಲೆ ಹೋಲ್ಡರ್‍ನಲ್ಲಿ ಇಟ್ಟಿದ್ದ ಕಾರಿನ ಕೀಯನ್ನು ಗಮನಿಸಿ ಸೆಕ್ಯೂರಿಟಿ ಗಾರ್ಡ್ ಟೀ ಕುಡಿಯಲು ಹೋದ ಸಮಯ ನೋಡಿ ಹೊಂಚುಹಾಕಿ ಕಾರು ಸಮೇತ ಎಸ್ಕೇಪ್ ಆಗಿದ್ದಾನೆ.

ಸುದ್ದಿ ತಿಳಿದ ಬಸವನಗುಡಿ ಪೊಲೀಸರು ಎಲ್ಲೆಡೆ ಮಾಹಿತಿ ನೀಡಿ ಆರೋಪಿ ಕಾರನ್ನು ಬೆನ್ನಟ್ಟಿದರು. ಕಾರು ಹೆಚ್‍ಬಿಆರ್ ಲೇಔಟ್ ಬಳಿ ಹೊಗುತ್ತಿದ್ದಾಗ ಕೆಜಿ ಹಳ್ಳಿ ಠಾಣೆ ಪೊಲೀಸರ ನೆರವಿನಿಂದ ತಡೆದು ಆರೋಪಿಯನ್ನು ಬಂಧಿಸಿ ಕಾರನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಸಲ್ಮಾನ್ ಕಳೆದ 20 ದಿನಗಳ ಹಿಂದೆಯಷ್ಟೆ ಜೈಲಿನಿಂದ ಹೊರಗೆ ಬಂದಿದ್ದನು. ಈತನ ವಿರುದ್ದ ಎಷ್ಟು ಪ್ರಕರಣಗಳಿವೆ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

Leave a Reply

Your email address will not be published.