Home Latest  ಪೆಟ್ರೋಲ್ ದರ ಏರಿಕೆ; ಗ್ರಾಹಕರು ಕಂಗಾಲು

 ಪೆಟ್ರೋಲ್ ದರ ಏರಿಕೆ; ಗ್ರಾಹಕರು ಕಂಗಾಲು

106
0
SHARE

ನವದೆಹಲಿ.ಸತತ 14 ದಿನಗಳಿಂದ ಪೆಟ್ರೋಲ್​ ದರ ಏರಿಕೆ ಆಗುತ್ತಲೇ ಇದೆ. ಸರಾಸರಿ 7ರಿಂದ 8 ರೂ ಪೆಟ್ರೋಲ್​ ದರ ಏರಿಕೆ ಆಗಿದೆ. ಪೆಟ್ರೋಲ್​ – ಡೀಸೆಲ್​ ಬೆಲೆ ಏರಿಕೆ ನಿಲ್ಲುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಹರಿಸಿದಂತೆಯೂ ಕಾಣಿಸುತ್ತಿಲ್ಲ. ಇದನ್ನು ಕೇಂದ್ರ ಸರ್ಕಾರ ನಿಯಂತ್ರಿಸಬೇಕಿದೆ. ಕೊರೊನಾ ಹಿನ್ನೆಲೆಯಲ್ಲಿ ಕಂಪನಿಗಳ ಮೇಲೆ ವಿಧಿಸಿರುವ ಸುಂಕವನ್ನ ತೆರವುಗೊಳಿಸಿದರೆ ಗ್ರಾಹಕರ ಮೇಲಿನ ಹೊರೆ ಕೊಂಚವಾದರೂ ತಗ್ಗಬಹುದು.

ಭಾರತ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆಗುತ್ತಿರುವ ಕಚ್ಚಾತೈಲ ಬೆಲೆ ಏರಿಕೆ ಹಾಗೂ ಕೇಂದ್ರ- ರಾಜ್ಯಗಳ ತೆರಿಗೆ ಭಾರದಿಂದಾಗಿ ಬೆಲೆ ಏರಿಕೆ ಕಾಣುತ್ತಿದೆ. ಇದುವರೆಗೂ ಎಲ್ಲ ಸೇರಿ ಲೀಟರ್​ಗೆ ಸರಾಸರಿ 7 ರೂ ಗಿಂತ ಹೆಚ್ಚು ಏರಿಕೆಯಾಗಿದೆ. ಇವತ್ತು ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​​ಗೆ 56 ಪೈಸೆ ಏರಿಕೆ ಕಾಣುವ ಮೂಲಕ 78.37 ರೂ ಗೆ ಹೆಚ್ಚಳವಾಗಿದೆ. ಇನ್ನು ಡೀಸೆಲ್​ ಬೆಲೆಯಲ್ಲೂ 63 ಪೈಸೆ ಏರಿಕೆ ಕಂಡು, 77.06 ಕ್ಕೆ ತಲುಪಿದೆ. ಇನ್ನು ಬೆಂಗಳೂರಿನಲ್ಲಿ ನಿನ್ನೆ 80.33 ಇದ್ದದ್ದು 80.90 ರೂ ಆಸುಪಾಸಿಗೆ ಜಿಗಿತ ಕಂಡಿದೆ. ಡೀಸೆಲ್​ ಬೆಲೆಯೂ ಅಷ್ಟೇ 73.30 ಪೈಸೆ ಆಸುಪಾಸಿಗೆ ಏರಿಕೆ ಕಂಡಿದೆ.

LEAVE A REPLY

Please enter your comment!
Please enter your name here