Home Health ಕೊರೊನಾ ತಾಂಡವ ; ಬೆಂಗಳೂರು ದಕ್ಷಿಣದಲ್ಲಿ ಅಪಾಯದ ಗಂಟೆ…. ಏನಿರಬಹುದು ಕಾರಣಗಳು?

ಕೊರೊನಾ ತಾಂಡವ ; ಬೆಂಗಳೂರು ದಕ್ಷಿಣದಲ್ಲಿ ಅಪಾಯದ ಗಂಟೆ…. ಏನಿರಬಹುದು ಕಾರಣಗಳು?

574
0
SHARE

ಬೆಂಗಳೂರು. ಕೊರೊನಾ ವೈರಸ್ ಬೆಂಗಳೂರು ದಕ್ಷಿಣದಲ್ಲಿ ಅಪಾಯದ ಗಂಟೆ ಬಾರಿಸುತ್ತಿದೆ. ರಾಜ್ಯದಲ್ಲಿ ವರದಿಯಾಗುತ್ತಿರುವ ಕೊರೊನಾ ಪಾಸಿಟಿವ್‌ ಪ್ರಕರಣಗಳಲ್ಲಿ ಶೇ 28 ರಷ್ಟು ರಾಜಧಾನಿಯಲ್ಲೇ ವರದಿಯಾಗುತ್ತಿವೆ. ಇದಕ್ಕಿಂತ ಆಘಾತಕಾರಿ ಸಂಗತಿಯೆಂದರೆ ಒಟ್ಟು ಬೆಂಗಳೂರಿನಲ್ಲಿ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ದಕ್ಷಿಣ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ.

ಕನಕಪುರ ರಸ್ತೆ ಮತ್ತು ಮೈಸೂರು ರಸ್ತೆ ಮೂಲಕ ರಾಮನಗರ, ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳನ್ನು ಬೆಸೆದುಕೊಂಡಿರುವ ಬೆಂಗಳೂರು ದಕ್ಷಿಣ ಇತರೆ ವಲಯಗಳಿಗೆ ಹೋಲಿಸಿದರೆ ದೊಡ್ಡ ಪ್ರದೇಶವಾದರೂ ಕಡಿಮೆ ಮಂದಿ ನೆಲೆಸಿದ್ದಾರೆ. ಶೇ 20ರಷ್ಟು ಪ್ರದೇಶ ಮಾತ್ರ ಒತ್ತೊತ್ತಾಗಿವೆ. ಕೆ.ಆರ್‌.ಮಾರುಕಟ್ಟೆ, ಚಿಕ್ಕಪೇಟೆ, ಸಾರಕ್ಕಿ ಮಾರುಕಟ್ಟೆ, ಬನಶಂಕರಿಯ ಕೆಲವು ಪ್ರದೇಶಗಳು ಒತ್ತೊತ್ತಾಗಿರುವುದು ಬಿಟ್ಟರೆ ಉಳಿದ ಪ್ರದೇಶಗಳು ವಿಶಾಲವಾಗಿಯೇ ಇವೆ. ಆದರೂ, ವಿಶಾಲ ಪ್ರದೇಶಗಳಲ್ಲೇ ಕೊರೊನಾ ಸೋಂಕು ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಹನುಮಂತನಗರ, ಶ್ರೀನಗರ, ಕಾಮಾಕ್ಯ, ಹೊಸಕೆರೆಹಳ್ಳಿ, ಕುಮಾರಸ್ವಾಮಿ ಬಡಾವಣೆ , ಕನಕಪುರ ರಸ್ತೆ, ಸುಬ್ರಮಣ್ಯಪುರ, ಆರ್‌.ಆರ್‌.ನಗರ, ವಿಜಯನಗರ, ವಿದ್ಯಾಪೀಠ ಪ್ರದೇಶಗಳಿಗೂ ಕೊರೊನಾ ಸೋಕು ವಿಸ್ತರಿಸುತ್ತಿರುವುದರಿಂದ ದಕ್ಷಿಣದ ಯಾವ ಏರಿಯಾದ ಜನರೂ ಮೈ ಮರೆಯುವಂತಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಏನಿರಬಹುದು ಕಾರಣಗಳು?

* ಕನಕಪುರ ರಸ್ತೆ ಮತ್ತು ಮೈಸೂರು ರಸ್ತೆಗಳ ಮೂಲಕ ಅಕ್ಕಪಕ್ಕದ ನಾಲ್ಕು ಜಿಲ್ಲೆಗಳ ಜನರ ನಿರಂತರ ಸಂಪರ್ಕ ಮತ್ತು ಒಡನಾಟ.

* ವಿದೇಶದಿಂದ ಬಂದವರಲ್ಲಿ ಬಹಳಷ್ಟು ಮಂದಿ ಬೆಂಗಳೂರು ದಕ್ಷಿಣಕ್ಕೆ ಸೇರಿದವರು.

* ಮುಂಬೈ, ಗುಜರಾತ್‌, ರಾಜಸ್ಥಾನಕ್ಕೆ ನಿರಂತರವಾಗಿ ಓಡಾಡಿದ ಚಿಕ್ಕಪೇಟೆಯ ಸುತ್ತಮುತ್ತಲ ವ್ಯಾಪಾರಿಗಳು

* ತಮಿಳುನಾಡಿಗೂ ಬೆಂಗಳೂರು ದಕ್ಷಿಣಕ್ಕೂ ಇರುವ ನಂಟು

* ಮುಂಬೈನಿಂದ ಮೈಸೂರು, ಮಂಡ್ಯ, ಕನಕಪುರ, ರಾಮನಗರಕ್ಕೆ ಬಂದವರು ಬೆಂಗಳೂರಿನ ಜತೆ ಬೆಸೆದುಕೊಂಡಿದ್ದು

* ಇವಲ್ಲದೆ ಇನ್ನೂ ಗುರುತಿಸಬೇಕಾದ ಹಲವು ಕಾರಣಗಳು ಇರಬಹುದು

.

LEAVE A REPLY

Please enter your comment!
Please enter your name here