Home KARNATAKA ಗುರು ರಾಘವೇಂದ್ರ ಬ್ಯಾಂಕ್ ಹಗರಣ: ಮಾಜಿ ಸಿಐಒ ಆತ್ಮಹತ್ಯೆ, ತನಿಖೆ ಚುರುಕು

ಗುರು ರಾಘವೇಂದ್ರ ಬ್ಯಾಂಕ್ ಹಗರಣ: ಮಾಜಿ ಸಿಐಒ ಆತ್ಮಹತ್ಯೆ, ತನಿಖೆ ಚುರುಕು

345
0
SHARE

ಬೆಂಗಳೂರು: ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನ ಮಾಜಿ ಸಿಐಒ ಮಣೂರು ವಾಸುದೇವಮಯ್ಯ ಆತ್ಮಹತ್ಯೆ ಪ್ರಕರಣದ ತನಿಖೆ‌ ಮುಂದುವರೆದಿದೆ. ಸದ್ಯ ಮೃತದೇಹ ಆಸ್ಪತ್ರೆಯಲ್ಲಿದ್ದು, ಎಫ್ಎಸ್ಎಲ್ ವರದಿಯ ಬಳಿಕ ಮೃತದೇಹ ಕೋವಿಡ್ ಟೆಸ್ಟ್​ಗೆ ಒಳಪಡಿಸಿ‌ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ. ನಿನ್ನೆ ಸಂಜೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರ ಹಳ್ಳಿಯ ಪೂರ್ಣಪ್ರಜ್ಞ ಲೇಔಟ್ ಬಳಿ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಇನ್ನು ಅನುಮಾನಾಸ್ಪದವಾಗಿ ಕಾರು ನಿಂತಿದ್ದನ್ನ ನೋಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.

ಈಗಾಗಲೇ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತಹತ್ಯೆಗೆ ಶರಣಾಗುವ ಮುಂಚೆ ಕಾರಿನಲ್ಲಿ 12 ಪುಟಗಳ ಡೆತ್​ನೋಟ್ ಬರೆದಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕೆಲ ಕಡತಗಳು ಕಾರಿನ ಡಿಕ್ಕಿಯಲ್ಲಿ ಪತ್ತೆಯಾಗಿವೆ. ಇನ್ನು ಡೆತ್​ನೋಟ್ ಆಧಾರದ‌ ಮೇರೆಗೆ ಪೊಲೀಸರು ತನಿಖೆ‌ ಮುಂದುವರೆಸಿದ್ದಾರೆ. . ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಪ್ರಕರಣವನ್ನ  ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಿಐಡಿಗೆ‌ ಹಸ್ತಾಂತರ ಮಾಡಿದರು. ತನಿಖೆಗೆ ಹೆದರಿ ಸಾವನ್ನಪ್ಪಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಹೀಗಾಗಿ ಪೊಲೀಸರು ಎಲ್ಲ ಆಯಾಮದಲ್ಲಿ ತನಿಖೆ ಮುಂದುವರೆಸಿದ್ದಾರೆ. ಇಂದು ಸಿಐಡಿ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here