Home Crime BBMPಯಲ್ಲಿ ಸಸ್ಪೆಂಡ್ ಆಗಿದ್ದ ಅಧಿಕಾರಿ ದರ್ಬಾರ್..!? BBMP ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಭಾರೀ ಗೋಲ್ಮಾಲ್..!!?

BBMPಯಲ್ಲಿ ಸಸ್ಪೆಂಡ್ ಆಗಿದ್ದ ಅಧಿಕಾರಿ ದರ್ಬಾರ್..!? BBMP ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಭಾರೀ ಗೋಲ್ಮಾಲ್..!!?

387
0
SHARE

ಸಿಲಿಕಾನ್ ಸಿಟಿಯಲ್ಲಿ ನಡೆದಿರೋ ವೈಟ್ ಟ್ಯಾಪಿಂಗ್ ಕಾಮಗಾರಿ, ಅದೆಷ್ಟೋ ಜನ ಇಂಜಿನಿಯರ್ಗಳಿಗೆ ವರದಾನವಾಗಿದೆ.. ವೈಟ್‌ಟ್ಯಾಪಿಂಗ್ ಕಾಮಗಾರಿ ಹೆಸರಲ್ಲಿ ಬ್ಲ್ಯಾಕ್ ಮನಿ ಮಾಡಿಕೊಂಡು ಜನರ ತೆರಿಗೆ ಹಣವನ್ನ ಲೂಟಿ ಮಾಡಿರೋದು ಒಂದೊಂದಾಗಿ ಹೊರಬರ್ತಿದೆ.. ಪಾಲಿಕೆಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ನಡಸೋಕೆ, ಮದ್ಯವರ್ತಿಗಳಾಗಿ ಕೆಲಸ ಮಾಡಿದ ಈ ಇಂಜಿನಿಯರ್ ಸಾಮಾನ್ಯನಲ್ಲ…

ಒಂದೇ ಕಾಮಗಾರಿ ಮಾಡಿ, ಇಡೀ ಪಾಲಿಕೆಯಲ್ಲಿ ಕಿಂಗ್ ಮೇಕರ್ ಆಗಿದ್ದಾರೆ.. ಅವರ್ಯಾರು ಅಲ್ಲ.. ಒನ್ ಆಂಡ್ ಓನ್ಲಿ ಕೆ.ಟಿ.ನಾಗರಾಜ್.. ಹೌದು.. ಪಾಲಿಕೆಯಲ್ಲಿ ಈವರೆಗೂ ನಡೆದಿರೋ ಕೋಟ್ಯಾಂತರ ರೂ ಸಾರ್ವಜನಿಕರ ತೆರಿಗೆ ಹಣ, ಕಂಡ ಕಂಡವರ ಜೇಬು ಸೇರೋದಕ್ಕೆ ಈ ಪುಣ್ಯಾತ್ಮನ ಪಾಲು ಕಿಲೋಮೀಟರ್ ನಷ್ಟಿದೆ…

ಹಿಂದಿನ ಸರ್ಕಾರ ಇದ್ದಾಗ, ಎರಡು ಪ್ರತಿಷ್ಠಿತ ಕಂಪನಿಗೆ ವೈಟ್‌ಟ್ಯಾಪಿಂಗ್ ಕಾಮಗಾರಿ ಕೊಡಿಸೋದ್ರಲ್ಲಿ, ಕೆ.ಟಿ ನಾಗರಾಜ್ ಬಹಳ ಶ್ರಮ ವಹಿಸಿದ್ರು.. ಕೆಲವರ ಪಾಲಿಗಂತು ಕೆ.ಟಿ ನಾಗರಾಜ್ ಚಿನ್ನದ ಮೊಟ್ಟೆ ಇಡೋ ಕೋಳಿ ಕೊಡಿಸಿದ್ರು ಅಂದ್ರೆ ತಪ್ಪಾಗಲಾರ್ದು.. ಮೇಜರ್ ರೋಡ್ ವರ್ಕ್ಸ್ ಚೀಫ್ ಇಂಜಿನಿಯರ್ ಆಗಿರೋ, ಕೆ.ಟಿ ನಾಗರಾಜ್…

ಮಧುಕಾನ್ ಹಾಗೂ ಎನ್.ಸಿ.ಸಿ ಅನ್ನೋ ಎರಡು ಪ್ರತಿಷ್ಠಿತ ಕಂಪನಿಗೆ ವೈಟ್ ಟ್ಯಾಪಿಂಗ್ ಕಾಮಗಾರಿ ಟೆಂಡರ್ ಕೊಡಿಸೋದ್ರಲ್ಲಿ ಸಫಲರಾಗಿದ್ದಾರೆ.. ಅದರಲ್ಲೂ ಮಧುಕಾನ್ ಸಂಸ್ಥೆಯಂತು ಬ್ಲಾಕ್ ಲಿಸ್ಟಲ್ಲಿರೋದು ಗೊತ್ತಿದ್ರೂ ಕೂಡ, ಆ ಸಂಸ್ಥೆಗೆ ಟೆಂಡರ್ ಕೊಡಿಸಿದ್ದಾರೆ.. ಇದಕ್ಕೆ ತಾವೊಬ್ಬರೆ ಅಲ್ಲದೆ ದೊಡ್ಡ ಮಟ್ಟದಲ್ಲೂ ಹೈಟೆಕ್ ಡೀಲ್ ಮಾಡಿಸಿ, ಎಲ್ಲರನ್ನೂ ಲಕ್ಷ್ಮೀ ಪುತ್ರರನ್ನಾಗಿ ಮಾಡಿಸಿದ್ದಾರೆ…

ನಗರದ ಪ್ರಮುಖ ರಸ್ತೆಗಳು, ಅಂಡರ್ ಪಾಸ್ ಸೇರಿದಂತೆ 29ಪ್ರಮುಖ ರಸ್ತೆಗಳ ಕಾಮಗಾರಿಗೆ, ಬರೋಬ್ಬರಿ ಒಂದುಸಾವಿರದ 59ಕೋಟಿ ತೆರಿಗೆ ಹಣ ರಸ್ತೆಗೆ ಹಾಕೋ ನೆಪದಲ್ಲಿ ಜೇಬು ಸೇರಿಸಿದ್ದಾರೆ.. ಮುವತ್ತು ವರ್ಷ ಬಾಳಿಕೆ ಬರಬೇಕಾದ ರಸ್ತೆಗಳು ಹಾಳಾಗಿದ್ದು, ಕ್ರಾಕ್ ಬಿಟ್ಟು ಗುಂಡಿಗಳೂ ಆಗಿರೋ ಕೀರ್ತಿ ಇವರಿಗೆ ಸಲ್ಲುತ್ತೆ…

LEAVE A REPLY

Please enter your comment!
Please enter your name here