Home District BBMP ಗಣೇಶ ಹಬ್ಬದಲ್ಲೂ ದುಡ್ಡು ಮಾಡಲು ಪ್ಲಾನ್..?! ಗಣೇಶ ಕೂರಿಸಬೇಕಂದ್ರೆ ಕೊಡಬೇಕು ಬಾಡಿಗೆ..!!

BBMP ಗಣೇಶ ಹಬ್ಬದಲ್ಲೂ ದುಡ್ಡು ಮಾಡಲು ಪ್ಲಾನ್..?! ಗಣೇಶ ಕೂರಿಸಬೇಕಂದ್ರೆ ಕೊಡಬೇಕು ಬಾಡಿಗೆ..!!

558
0
SHARE

ಬೆಂಗಳೂರಿನ ರಸ್ತೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಅಂದು ಕೊಂಡಿದ್ದೀರಾ ? ಹಾಗಾದ್ರೆ, ಬಾಡಿಗೆ ಕಟ್ಟಲು ರೆಡಿಯಾಗಿದೆ. ಏಕೆಂದ್ರೆ, ಈ ಸಾಲಿನಿಂದ ರಸ್ತೆ ಮೇಲೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಬಾಡಿಗೆ ಹಣ ಕಟ್ಟಬೇಕು.ಈ ಹೊಸ ನಿಯಮವನ್ನು ಬಿಬಿಎಂಪಿ ಜಾರಿಗೆ ತಂದಿದೆ.

ಪಾಲಿಕೆಯ ಈ ನಿರ್ಧಾರ ಈಗ ವಿವಾದಕ್ಕೆ ಗ್ರಾಸವಾಗಿದೆ.ಬರಿದಾಗಿರೋ ಬೊಕ್ಕಸವನ್ನು ತುಂಬಿಸಿಕೊಳ್ಳಲು ಪಾಲಿಕೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಹಣ ವಸೂಲಿ ಮಾಡುತ್ತಿರೋದು ಸರಿಯಲ್ಲ ಎಂದ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಕೇವಲ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬಾಡಿಗೆ ವಸೂಲಿಗೆ ಮುಂದಾಗಿರೋ ಪಾಲಿಕೆ ಇತರೆ ಧರ್ಮದ ಜನರು ನಡೆಸೋ ಕಾರ್ಯಕ್ರಮಗಳಿಗೂ ಬಾಡಿಗೆ ವಸೂಲಿ ಮಾಡುತ್ತಾ ಎಂದು ಬೆಂಗಳೂರಿಗರು ಪ್ರಶ್ನಿಸುತ್ತಿದ್ದಾರೆ. ಕೂಡ ಈ ವಿವಾದಾತ್ಮಕ ನಿರ್ಧಾರದಿಂದ ಪಾಲಿಕೆ ಹಿಂದೆ ಸರಿಯಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಶುಲ್ಕ ಪಾವತಿ ವಿಧಿಸೋದನ್ನು ಮೇಯರ್ ಸಂಪತ್ ರಾಜ್ ಸಮರ್ಥಿಸಿಕೊಂಡಿದ್ದಾರೆ.ಮೊದಲಿನಿಂದಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಬೇಕು.

ಒಂದು ಅಡಿಗೆ ಹತ್ತು ರೂಪಾಯಿ ಹಣ ನೀಡಬೇಕು.ಯಾವುದೇ ಕಾರ್ಯಕ್ರಮಕ್ಕೂ ಪೆಂಡಾಲ್ ಹಾಕಿದ್ರೆ ಹಣ ಕಟ್ಟಬೇಕು.ಒಂದು ವೇಳೆ ಅನುಮತಿ ಪಡೆಯದಿದ್ರೆ ಗಣೇಶ ಮೂರ್ತಿಯನ್ನು ಮಾಡ್ತೀವಿ ಎಂದು ಸಂಪತ್ ರಾಜ್ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here