Home District ನಾಳೆ ಬಿಬಿಎಂಪಿ ಬಜೆಟ್ ಮಂಡನೆ; ಆಡಳಿತಾಧಿಕಾರಿ ಗೌರವ ಗುಪ್ತಾರಿಂದ ನೈಜ ಲೆಕ್ಕಾಚಾರಕ್ಕೆ ತಕ್ಕಂತಹಾ ವಾಸ್ತವಿಕ ಬಜೆಟ್...

ನಾಳೆ ಬಿಬಿಎಂಪಿ ಬಜೆಟ್ ಮಂಡನೆ; ಆಡಳಿತಾಧಿಕಾರಿ ಗೌರವ ಗುಪ್ತಾರಿಂದ ನೈಜ ಲೆಕ್ಕಾಚಾರಕ್ಕೆ ತಕ್ಕಂತಹಾ ವಾಸ್ತವಿಕ ಬಜೆಟ್ ನಿರೀಕ್ಷೆ

441
0

ವರದಿ: ಥಾಮಸ್ ಪುಷ್ಪರಾಜ್

ಬೆಂಗಳೂರು: ಆಡಳಿತಾಧಿಕಾರಿಗಳ ಅಧಿಕಾರವಿರುವ ಬಿಬಿಎಂಪಿಯಲ್ಲಿ ನಾಳೆ 2021-22ನೇ ಸಾಲಿನ ಬಜೆಟ್ ಮಂಡನೆಯಾಗಲಿದೆ. ಆಡಳಿತಾಧಿಕಾರಿ ಗೌರವ್ ಗುಪ್ತ ಬಜೆಟ್ ಮಂಡಿಸಲಿದ್ದು, ಆದಾಯದ ನೈಜ ಲೆಕ್ಕಾಚಾರಕ್ಕೆ ಅನುಗುಣವಾಗಿ ವಾಸ್ತವಿಕ ಬಜೆಟ್ ಮಂಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಚುನಾಯಿತರ ಅವಧಿಯಲ್ಲಿ,ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಎನ್ನುವಂತೆ ನೈಜಾಂಶವನ್ನು ಮರೆ ಮಾಚಿ ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಬಜೆಟ್ ಮಂಡಿಸುವ ಪರಿಪಾಠವಿತ್ತು.ಆದ್ರೆ ಅದಕ್ಕೆ ಬಿನ್ನವಾದ ಹಾಗೂ ನೈಜತೆಯ ನೆಲೆಗಟ್ಟಿನಲ್ಲಿ ಬಜೆಟ್ ಮಂಡಿಸುವ ನಿರೀಕ್ಷೆ ಹುಟ್ಟು ಹಾಕಿದೆ ಆಡಳಿತಾಧಿಕಾರಿ ಗಳ ಅಧಿಕಾರವಧಿ..ನಾಳೆಯ ಬಜೆಟ್ ನಿರೀಕ್ಷೆಯೂ ಬಹುತೇಕ ಹಾಗೆಯೇ ಇದೆ.
ಅವಾಸ್ತವನ್ನು ಬಿಟ್ಟು,ಬಿಬಿಎಂಪಿಯ ಆಸ್ತಿ ತೆರಿಗೆ, ಇತರೆ ವರಮಾನ, ರಾಜ್ಯ ಸರಕಾರ ಮತ್ತು ಕೇಂದ್ರದಿಂದ ನೀಡಲಿರುವ ಅನುದಾನವನ್ನು ಆಧರಿಸಿ ಬಜೆಟ್ ಮಂಡಿಸಲು ನಾಳೆ ತಯಾರಿ ಮಾಡಿಕೊಳ್ಳಲಾಗಿದೆ. 2021-22ನೇ ಸಾಲಿನ ಆಯವ್ಯಯದ ಗಾತ್ರವು 8,000 ಕೋಟಿ ರೂ.ಗಳಿಗೆ ಸೀಮಿತವಾಗಿರಲಿದೆ. 2020-21ರ ಬಿಜೆಪಿ ಮಂಡಿಸಿದ 11715.15 ಕೋಟಿ ಬಜೆಟ್ ಗೆ ಹೋಲಿಸಿದರೆ, ಈ ಬಾರಿ 3715 ಕೋಟಿ ರೂ. ಕಡಿಮೆ ವೆಚ್ಚದ ಆಯವ್ಯಯ ಇದಾಗಲಿದೆ.
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಬಾರಿಯೂ ಬಿಜೆಪಿ 2020-21ನೇ ಸಾಲಿನ ಆಯವ್ಯಯವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಮಂಡಿಸಿತ್ತುಸೀಮಿತ ಸಂಖ್ಯೆಯ ಅಧಿಕಾರಗಳನ್ನೊಳಗೊಂಡ ಸಭೆಯಲ್ಲಿ ನಾಳೆ ಗೌರವ ಗುಪ್ತಾ ಬಜೆಟ್ ಮಂಡಿಸಲಿದ್ದಾರೆ. ಆಸ್ತಿ ತೆರಿಗೆ, ಕಟ್ಟಡ ನಕ್ಷೆ ಮಂಜೂರಾತಿ, ಒಸಿ, ಸಿಸಿ, ಜಾಹೀರಾತು, ಬಾಡಿಗೆಯಿಂದ ವಾರ್ಷಿಕ 4 ಸಾವಿರ ಕೋಟಿ ರೂ, ರಾಜ್ಯ ಮತ್ತು ಕೇಂದ್ರ ಸರಕಾರದ ನಾನಾ ಮೂಲಗಳಿಂದ ಹೆಚ್ಚಿನ ಅನುದಾನ ನಿರೀಕ್ಷಿಸಿ 8000 ಕೋಟಿ ರೂ. ಗಾತ್ರದ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದೆ.
ನಾಳೆ ಆಡಳಿತಾಧಿಕಾರಿ ಗೌರವ ಗುಪ್ತಾ ಮಂಡಿಸಲಿರುವ ಬಜೆಟ್ ಏನೆಲ್ಲಾ ಅಂಶಗಳನ್ನು ಒಳಗೊಂಡಿದೆ.ಬೆಂಗಳೂರಿನ ಅಭಿವೃದ್ಧಿ,ಬೆಳವಣಿಗೆ ಹಾಗೂ ಜನರ ಆಶೋತ್ತರಗಳನ್ನು ಈಡೇರಿಸಬಲ್ಲಂಥ ಯಾವೆಲ್ಲಾ ಸಂಗತಿಗಳನ್ನು ಬಜೆಟ್ ಒಳಗೊಂಡಿರುತ್ತದೆ ಎನ್ನುವ ಕುತೂಹಲ ಪ್ರತಿಯೋರ್ವರಲ್ಲೂ ಮೂಡಿದೆ.

shyam bapat

VIAbbmp
SOURCEbbmp
Previous articleಯುವತಿಯ ದೂರಿನಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರಾ ಜಾರಕೀಹೊಳಿ? ಲಕ್ಷ್ಮಿಪ್ರಸಾದ್ ರಿಂದ ಕಾನೂನಾತ್ಮಕ ವಿಶ್ಲೇಷಣೆ
Next articleಕರ್ನಾಟಕದ “ಕೇಮ್ಕಾ” ಕೆ.ಮಥಾಯ್ ವೃತ್ತಿ ಬದುಕು ಇದೀಗ “ದಿ ಪ್ರೈಸ್ ಆಫ್ ಟ್ರುಥ್” ಪುಸ್ತಕವಾಗಿ ಶೀಘ್ರವೇ ಅನಾವರಣ

LEAVE A REPLY

Please enter your comment!
Please enter your name here