Home KARNATAKA ಇಂದಿನಿಂದ ಬಿಬಿಎಂಪಿಯಲ್ಲಿ “ಗೌರವ್ ಗುಪ್ತಾ-ರಾಕೇಶ್ ಸಿಂಗ್” ಜೋಡೆತ್ತುಗಳ ದರ್ಬಾರ್ ಶುರು..

ಇಂದಿನಿಂದ ಬಿಬಿಎಂಪಿಯಲ್ಲಿ “ಗೌರವ್ ಗುಪ್ತಾ-ರಾಕೇಶ್ ಸಿಂಗ್” ಜೋಡೆತ್ತುಗಳ ದರ್ಬಾರ್ ಶುರು..

424
0

-ಥಾಮಸ್ ಪುಷ್ಪರಾಜ್

ಬಿಬಿಎಂಪಿ ನೂತನ ಆಯುಕ್ತರಾಗಿ ಗೌರವ್ ಗುಪ್ತಾ ನೇಮಕಗೊಂಡಿದ್ದಾರೆ.ಇಷ್ಟು ದಿನ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಹುದ್ದೆಗೆ ಹಿರಿಯ ಐಎಎಸ್ ರಾಕೇಶ್ ಸಿಂಗ್  ನೇಮಕಗೊಂಡಿದ್ದಾರೆ. ಈ ಮೂಲಕ ಅನೇಕ ವರ್ಷಗಳ ನಂತರ ಬಿಬಿಎಂಪಿಯ ಎರಡು ಆಯಕಟ್ಟಿನ ಹುದ್ದೆಗಳಲ್ಲಿ ಉತ್ತರ ಭಾರತೀಯ ಮೂಲದ ಇಬ್ಬರು ಅಧಿಕಾರಿಗಳ ದರ್ಬಾರ್ ಶುರುವಾದಂತಾಗಿದೆ.
ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಕೆಲಸ ಮಾಡ್ತಿದ್ದ ಗೌರವ್ ಗುಪ್ತಾ ನೂತನ ಆಯುಕ್ತರಾಗಿ ಇಂದು ಅದಿಕಾರ ಸ್ವೀಕರಿಸಿದರು.ಅವರ ಸ್ಥಾನಕ್ಕೆ ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ನಿಯುಕ್ತಿಗೊಂಡಿದ್ದಾರೆ. ಇಬ್ಬರೂ ಅಧಿಕಾರ ವಹಿಸಿಕೊಂಡರು.

ಹಾಗೆ ನೋಡಿದ್ರೆ ಗೌರವ್ ಗುಪ್ತಾ ಬಿಬಿಎಂಪಿಗೆ ಹೊಸದೇನಲ್ಲ.ಅನೇಕ ವರ್ಷಗಳ ಹಿಂದೆ ಇಲ್ಲಿ ಕೆಲಸ ಮಾಡಿ ಹೋದವ್ರು.ಅಲ್ಲದೇ ಇಲ್ಲಿನ ಸಾಕಷ್ಟು ಆಗುಹೋಗುಗಳ ಪರಿಚಯವಿದೆ. ಆಡಳಿತಾಧಿಕಾರಿಯಾಗಿ ಬಂದ್ಮೇಲೆ ಇನ್ನಷ್ಟನ್ನು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದಾಗಿ ಅಧಿಕಾರ ಸ್ವೀಕರಿಸಿದ ಮೇಲೆ ನುಡಿದರು.

ಹಾಗೆಯೇ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಕೇಶ್ ಸಿಂಗ್ ಕೂಡ ಬಿಬಿಎಂಪಿ ಎನ್ನುವ ಲೋಕಲ್ ಹಾಗೂ ಮಿನಿ ಗವರ್ನಮೆಂಟ್ ನ ಆಡಳಿತ ನಿಭಾವಣೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ.ಆಯುಕ್ತರೊಂದಿಗೆ ಸೇರಿಕೊಂಡು ಉತ್ತಮ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುವ ಭರವಸೆ ನೀಡಿದರು.

ಹುದ್ದೆ ಹಾಗೂ ಅನುಭವದಲ್ಲಿ ಸಾಕಷ್ಟು ಜೇಷ್ಠ್ಯತೆ ಹೊಂದಿರುವ ಗೌರವ್ ಗುಪ್ತಾ ಹಾಗೂ ರಾಕೇಶ್ ಸಿಂಗ್ ಅವರ ದರ್ಬಾರ್ ಇಂದಿನಿಂದ ಬಿಬಿಎಂಪಿಯಲ್ಲಿ ಆರಂಭವಾಗಿದೆ.ಜೋಡೆತ್ತುಗಳಾಗಿ ಕೆಲಸ ಮಾಡುವ ಮಾತನ್ನಾಡಿರುವ ಇವರ ದರ್ಬಾರ್ ನಲ್ಲಿ ಬಿಬಿಎಂಪಿ ಯಾವ ರೀತಿ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.

Previous articleಸಂತ್ರಸ್ಥೆ ಪರ ವಕೀಲ ಜಗದೀಶ್ ಗೆ ಅವಾಜ್ ಹಾಕಿದ ಪುನೀತ್ ಕೆರೆಹಳ್ಳಿ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
Next articleಆರಂಭಕ್ಕೆ ಮುನ್ನವೇ ಬಿಬಿಎಂಪಿಯ “ಮನೆ ಬಾಗಿಲಿಗೆ ಶಾಲೆ” ಗೆ ಅಪಸ್ವರ; ಹೆಚ್ಚುವರಿ ಹೊರೆಗೆ ಸಾರ್ವಜನಿಕರ ಬೇಸರ

LEAVE A REPLY

Please enter your comment!
Please enter your name here