Home KARNATAKA ಆಸ್ವತ್ರೆಗೆ ಸಾಗಿಸುವ ವೇಳೆ ಟಿಟಿಯಲ್ಲೇ ಮಹಿಳೆ ಸಾವು; ಕಾರಣ ಏನು ಗೊತ್ತಾ?

ಆಸ್ವತ್ರೆಗೆ ಸಾಗಿಸುವ ವೇಳೆ ಟಿಟಿಯಲ್ಲೇ ಮಹಿಳೆ ಸಾವು; ಕಾರಣ ಏನು ಗೊತ್ತಾ?

125
0
SHARE

ಬೆಂಗಳೂರು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂಥ  ಪರಿಸ್ಥಿತಿಯಲ್ಲಿ ಸೋಂಕಿತರನ್ನು ಟಿಟಿ ವಾಹನಗಳಲ್ಲಿ ಕೋವಿಡ್ ಆಸ್ಪತ್ರೆಗಳಿಗೆ ರವಾನಿಸುವ ಮೂಲಕ ಬಿಬಿಎಂಪಿ ನಿರ್ಲಕ್ಷ್ಯ ತೋರುತ್ತಿದೆ.

ಈ ಟಿಟಿ ವಾಹನಗಳಲ್ಲಿ ವೆಂಟಿಲೇಟರ್ ವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿ ಇಲ್ಲದೇ ಸೋಂಕಿತರನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ.

ನೆನ್ನೆ ಇದೇ ರೀತಿ ಟಿಟಿಯಲ್ಲಿ ಸೋಂಕಿತೆಯೊಬ್ಬರನ್ನು ಬೆಂಗಳೂರಿನಿಂದ ದೇವನಹಳ್ಳಿಯ ಆಕಾಶ್ ಆಸ್ವತ್ರೆಗೆ ಸಾಗಿಸುವ ವೇಳೆ ತೀವ್ರ ಉಸಿರಾಟದ ತೊಂದರೆಯಿಂದ ಟಿಟಿಯಲ್ಲೆ ಸಾವನ್ನಪ್ಪಿದ್ದಾರೆ. ಮಹಿಳೆ ಸಾವನ್ನಪುತ್ತಿದ್ದಂತೆ ಟಿಟಿ ಚಾಲಕ, ಆಕೆಯ ಮೃತದೇಹವನ್ನು ಆಸ್ವತ್ರೆಯಲ್ಲಿ ಹಾಕಿ ಹೋಗಿದ್ದಾರೆ. ಸದ್ಯ ಸೋಂಕಿತೆಯ ಶವ ಆಕಾಶ್ ಆಸ್ವತ್ರೆಯ ಶವಾಗಾರದಲ್ಲಿದೆ.

LEAVE A REPLY

Please enter your comment!
Please enter your name here