BBMP ಮೀಸಲಾತಿ ಪಟ್ಟಿಯಲ್ಲಿ ನಿಯಮ ಉಲ್ಲಂಘನೆ ಆರೋಪ: ಸ್ಪಷ್ಟನೆ ನೀಡಲಿರುವ ಸಚಿವ ಅಶೋಕ್

ಬೆಂಗಳೂರು

ಬೆಂಗಳೂರು: ಬಿಬಿಎಂಪಿ ಮೀಸಲಾತಿ ಪಟ್ಟಿಯಲ್ಲಿ ನಿಯಮ‌ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಎದುರಾಗಿದೆ. ಬೆಂಗಳೂರಿನಲ್ಲಿ ಅಶೋಕ ಇಂದು ಪತ್ರಿಕಾಗೋಷ್ಠಿಯ ಮೂಲಕ ಸ್ಪಷ್ಟನೆ ನೀಡಲಿದ್ದಾರೆ. ಮೀಸಲು ಕರಡು ಪಟ್ಟಿಗೆ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯ ನಾಯಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ. 2011ರ ಜನಸಂಖ್ಯೆ, ವಾರ್ಡ್ ಹಂಚಿಕೆ ಇತ್ಯಾದಿ ಅಂಶಗಳನ್ನು ಆಧರಿಸಿದರೆ ಕೇವಲ 56 ಕಡೆ ಮಾತ್ರ‌ ಮೀಸಲು ನಿಗದಿ ಸರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರ ಮಾತ್ರವಲ್ಲ ಬಿಜೆಪಿಯ ಪ್ರಭಾವಿ ಸಚಿವರಿಗೆ ವಿರುದ್ಧವಾಗಿರುವ ಕ್ಷೇತ್ರದಲ್ಲೂ ಮಹಿಳಾ ಮೀಸಲು ಪ್ರಮಾಣ ಹೆಚ್ಚಳ ಮಾಡಿರುವುದು ಈ ಆಕ್ರೋಶಕ್ಕೆ ಕಾರಣವಾಗಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಮೀಸಲಾತಿ ಸಮರ್ಪಕವಾಗಿ ಆಗಿಲ್ಲ‌ ಎಂಬ ದೂರು ವ್ಯಕ್ತವಾಗಿದೆ. ಈ ಮೀಸಲು ಕರಡಿಗೆ ಆಕ್ಷೇಪ ಸೂಚಿಸುವುದಕ್ಕೂ ಅರ್ಜಿ ಆಹ್ವಾನಿಸಲಾಗಿದ್ದು, ಶೇ.30 ರಷ್ಟು ಬದಲಾಗುವ ಸಾಧ್ಯತೆ ಇದೆ.

Leave a Reply

Your email address will not be published.