Home District ಆರಂಭಕ್ಕೆ ಮುನ್ನವೇ ಬಿಬಿಎಂಪಿಯ “ಮನೆ ಬಾಗಿಲಿಗೆ ಶಾಲೆ” ಗೆ ಅಪಸ್ವರ; ಹೆಚ್ಚುವರಿ ಹೊರೆಗೆ ಸಾರ್ವಜನಿಕರ ಬೇಸರ

ಆರಂಭಕ್ಕೆ ಮುನ್ನವೇ ಬಿಬಿಎಂಪಿಯ “ಮನೆ ಬಾಗಿಲಿಗೆ ಶಾಲೆ” ಗೆ ಅಪಸ್ವರ; ಹೆಚ್ಚುವರಿ ಹೊರೆಗೆ ಸಾರ್ವಜನಿಕರ ಬೇಸರ

454
0

-ಥಾಮಸ್ ಪುಷ್ಪರಾಜ್

ಗುಜರಿ ಸೇರಬೇಕಾಗಿದ್ದ ಬಿಎಂಟಿಸಿ ಬಸ್ ಗಳಿಗೆ ಬಣ್ಣ ಬಳಿದು ರಸ್ತೆಗಿಳಿಸುವ ಆಲೋಚನೆಯನ್ನೇನೋ ಬಿಬಿಎಂಪಿ ಮಾಡಿದೆ.ಆದ್ರೆ ಬಿಬಿಎಂಪಿಯ ಈ ನಿರ್ದಾರಕ್ಕೆ ಆಕ್ಷೇಪ-ಆಕ್ರೋಶ ವ್ಯಕ್ತವಾಗಲಾರಂಭಿಸಿದೆ.ದುರಸ್ತಿ ಇಲ್ಲದೆ ಹಾಳು ಸುರಿಯುತ್ತಿರುವ ಶಾಲಾ ಕಟ್ಟಡ ಗಳನ್ನು ದುರಸ್ತಿ ಮಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಯೋಗ್ಯತೆ ಇಲ್ಲದ ಬಿಬಿಎಂಪಿ ಹೊರಾಂಗಣ ಶಾಲೆಯಂಥ ಕಾನ್ಸೆಪ್ಟ್ ಮಾಡ್ಲಿಕ್ಕೆ ಹೊರಟಿರುವುದು ಅದಕ್ಕೆ ಲಕ್ಷಾಂತರ ಖರ್ಚು ಮಾಡ್ತಿರುವುದು ಅವೈಜ್ಞಾನಿಕ ಅಷ್ಟೇ ಅಲ್ಲ ಮೂರ್ಖತನದ ಪರಮಾವಧಿ ಎನ್ನುವ ಆರೋಪ ಕೇಳಿಬರುತ್ತಿದೆ.

“ಮನೆ ಬಾಗಿಲಿಗೆ ಶಾಲೆ”..ಇದು ಬಿಬಿಎಂಪಿ ಡಕೋಟಾ ಬಸ್ ಗಳನ್ನು ರಿಪೇರಿ ಮಾಡಿ ಶುರುಮಾಡುತ್ತಿರುವ ಹೊಸ ಶೈಕ್ಷಣಿಕ ಕಾನ್ಸೆಪ್ಟ್.ಬಿಎಂಟಿಸಿಯ ಗುಜರಿ ಬಸ್ ಗಳಿಗೆ ಹೊಸ ಕಾಯಕಲ್ಪ ನೀಡಿ ಆ ಬಸ್ ಗಳನ್ನೇ ಸಂಚಾರಿ ಶಾಲೆಗಳನ್ನಾಗಿ ರೂಪಾಂತರಿ ಸಿ ಮಕ್ಕಳಿಗೆ ಶಿಕ್ಷಣ ನೀಡುವುದು ಇದರ ಉದ್ದೇಶ.ಪ್ರತಿಯೊಂದು ಬಸ್ ಗೆ 5 ಲಕ್ಷ ಹಣ ಖರ್ಚು ಮಾಡಲಾಗಿದೆ ಎನ್ನುವ ಮಾತುಗಳಿವೆ.ಸಂಚಾರಿ ಶಾಲೆಯ ರೂಪದಲ್ಲಿ ಬಸ್ ಗಳನ್ನು ಬಳಸಿಕೊಳ್ತಿರುವ ಪರಿಕಲ್ಪನೆಯೇನೋ ಒಳ್ಳೇದು..ಆದ್ರೆ ಬಿಬಿಎಂಪಿಗೆ ನಿಜಕ್ಕೂ ಈ ಕಾನ್ಸೆಪ್ಟ್ ನ ಅಗತ್ಯವಿತ್ತೇ ಎನ್ನುವುದು ಸಾರ್ವಜನಿಕವಾಗಿ ಉದ್ಭವವಾಗಿರುವ ಪ್ರಶ್ನೆ.

ಹೇಳಿಕೊಳ್ಳೊಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲೇ ಸಾಕಷ್ಟು ಶಾಲೆಗಳಿವೆ.ಆದ್ರೆ ಬಹುತೇಕ ಶಾಲೆಗಳ ಸ್ಥಿತಿ ನೋಡಿದ್ರೆ “ಅಯ್ಯೋ ಎನಿಸು ತ್ತದೆ.ಹಾಳು ಸುರಿಯುತ್ತಿರುವ ಈ ಕಟ್ಟಡಗಳ ದುರಸ್ತಿಗಾಗೇ ಕೋಟ್ಯಾಂತರ ಖರ್ಚು ಮಾಡ್ತಿದೆ.ಇದರಲ್ಲಿ ಒಂದಷ್ಟಾದ್ರೂ ಸದ್ಭಳ ಕೆಯಾಗಿದಿದ್ರೆ ಇವತ್ತು ಬಿಬಿಎಂಪಿ ಶಾಲೆಗಳ ಸ್ಥಿತಿ ಎಷ್ಟೋ ಸಹನೀಯವಾಗಿರುತ್ತದೆ.ಇದು ಕಟ್ಟಡಗಳ ಸ್ತಿತಿಯಾದ್ರೆ ಶಾಲಾ-ಕಾಲೇಜುಗಳಲ್ಲಿ ನೀಡಲಾಗುತ್ತಿರುವ ಶಿಕ್ಷಣದ ಬಗ್ಗೆ ಮಾತನಾಡದಿರೋದೇ ಒಳ್ಳೇದು..ಗುಣಮಟ್ಟದ ಶಿಕ್ಷಣ ನೀಡಿದ್ದೇ ಆಗಿದ್ರೆ ಶಾಲೆಗಳು ಮಾದರಿಯಾಗಿ ಇವತ್ತು ಶೈಕ್ಷಣಿಕ ಹಾಜರಾತಿ ಸುಧಾರಣೆಯಾಗ್ತಿತ್ತು.

ಪರಿಸ್ತಿತಿ ಹೀಗಿರುವಾಗ ಬಿಬಿಎಂಪಿ ಶಾಲೆಗಳ ಭೌತಿಕ ಹಾಗು ಶೈಕ್ಷಣಿಕ ಸ್ವರೂಪ ಬದಲಾಯಿಸೋದನ್ನು ಬಿಟ್ಟು ಸಂಚಾರಿ ಶಾಲೆಯನ್ನು ಆರಂಭಿಸಿ ಹೆಚ್ಚುವರಿ ನಷ್ಟಕ್ಕೆ ಮುಂದಾಗ್ತಿರುವುದು ಎಷ್ಟು ಸರಿ..ವಿಶೇಷ ಆಯುಕ್ತ ರವೀಂದ್ರ ಅವರಿಗೆ ಅದ್ಯಾವ ಮಹಾನುಭಾವ ಈ ಐಡ್ಯಾ ಕೊಟ್ಟನೋ ಗೊತ್ತಿಲ್ಲ ಎಂದು ಶಿಕ್ಷಣ ಇಲಾಖೆ ಶಿಕ್ಷಕರೇ ಬೈಯ್ದುಕೊಳ್ಳುತ್ತಿದ್ದಾರಂತೆ.

ಶೈಕ್ಷಣಿಕವಾಗಿ ಜರೂರಾಗಿದ್ದರೆ ಸಂಚಾರಿ ಶಾಲೆ ಪರಿಕಲ್ಪನೆ ಆರಂಭಿಸಿದಿದ್ರೆ ಆಕ್ಷೇಪ ಇರುತ್ತಿರಲಿಲ್ಲ.ಆದ್ರೆ ಬಿಬಿಎಂಪಿ ಶಾಲೆಗಳಲ್ಲೇ ವ್ಯವಸ್ಥೆ ಸರಿ ಇಲ್ಲದಿರುವಾಗ ಅದನ್ನು ಸರಿಪಡಿಸುವುದನ್ನು ಬಿಟ್ಟು ಬೇರೊಂದು ಪರಿಕಲ್ಪನೆಗೆ ತಲೆ ಕೆಡಿಸಿಕೊಳ್ಳುವುದು ದುಂದುವೆಚ್ಚವಲ್ಲದೇ ಇನ್ನೇನು..ಸಾರ್ವಜನಿಕವಾಗಿ ಕೇಳಿಬರುತ್ತಿರುವ ಈ ವಾದವನ್ನು ಮೇಲ್ನೋಟಕ್ಕೆ ಒಪ್ಪಲೇಬೇಕಾಗ್ತದೆ.

Previous articleಇಂದಿನಿಂದ ಬಿಬಿಎಂಪಿಯಲ್ಲಿ “ಗೌರವ್ ಗುಪ್ತಾ-ರಾಕೇಶ್ ಸಿಂಗ್” ಜೋಡೆತ್ತುಗಳ ದರ್ಬಾರ್ ಶುರು..
Next articleಮುಖ್ಯಮಂತ್ರಿಗಳ ಆದೇಶವಿಲ್ಲದೇ ಕೆ.ಎಸ್.ಈಶ್ವರಪ್ಪ ತಮ್ಮ ನಿಲುವನ್ನು ಕೈಗೊಂಡಿರುವುದು ಸರ್ಕಾರಕ್ಕೆ ಶೋಭೆ ತರುವಂತಹಾ ಕೆಲಸವಲ್ಲ: ಬಿ.ಸಿ.ಪಾಟಿಲ್ ಆರೋಪ

LEAVE A REPLY

Please enter your comment!
Please enter your name here