Home Elections 2019 BDA ನಲ್ಲಿ ಕಾಸು ಕೊಟ್ಟು ಸೈಟ್ ತಗೊಂಡವರಿಗೆ ಶಾಕ್..!? ಮನೆ ಕಟ್ಟೋಕೆ BBMP ಪರ್ಮಿಷನ್ ಸಿಗೋದೆ...

BDA ನಲ್ಲಿ ಕಾಸು ಕೊಟ್ಟು ಸೈಟ್ ತಗೊಂಡವರಿಗೆ ಶಾಕ್..!? ಮನೆ ಕಟ್ಟೋಕೆ BBMP ಪರ್ಮಿಷನ್ ಸಿಗೋದೆ ಡೌಟ್..!?

661
0
SHARE

ಬೆಂಗಳೂರಿನಲ್ಲಿ ಮನೆ ಕಟ್ಬೇಕು ಅಂತಾ ಕನಸು ಕಾಣ್ತಾ ಇದ್ದೀರಾ.. ಹಾಗಾದ್ರೆ ಅಪ್ಪಿ ತಪ್ಪಿ ಬಿಡಿಎ ಸೈಟ್ ಮಾತ್ರ ಖರೀದಿ ಮಾಡಬೇಡಿ.. ಒಂದು ವೇಳೆ ನೀವು ಬಿಡಿಎನಲ್ಲಿ ಸೈಟು ಹೊಂದಿದ್ರೆ, ಆದ್ರಲ್ಲಿ ಮನೆ ಕಟ್ಟೋಕೆ ಬಿಬಿಎಂಪಿ ಅಂತೂ ಪರ್ಮಿಷನ್ನೇ ಕೊಡಲ್ಲ.ಬೆಂಗಳೂರಿನಲ್ಲೊಂದು ಮನೆ ಕಟ್ಬೇಕು ಅನ್ನೋದು ಪ್ರತಿಯೊಬ್ಬರ ಕನಸು, ಹಾಗೋ ಹೀಗೋ ಕೂಡಿಟ್ಟ ಅಲ್ಪ ಸ್ವಲ್ಪ ಕಾಸಲ್ಲಿ ಒಂದು ಸೈಟ್ ತಗೊಳೋಣ ಅಂತಾ ಪ್ಲಾನ್ ಮಾಡಿರ್ತಾರೆ.

ಅದಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನೇ ನೆಚ್ಚಿಕೊಂಡಿರ್ತಾರೆ. ಆದ್ರೆ ಬಿಡಿಎ ಕಾನೂನು ಬಾಹಿರವಾಗಿ ಸೈಟ್ ಹಂಚಿಕೆ ಮಾಡಿದ್ರೆ, ಏನು ಆಗುತ್ತೆ ಹೇಳಿ..ಹೌದು, ಬಿಡಿಎ ಸುಮಾರು ನಾಲ್ಕು ಲೇಔಟ್ ಗಳನ್ನು ನಿರ್ಮಾಣ ಮಾಡಿದೆ.. ಇದರಲ್ಲಿ ಜನರು ಸುಮಾರು 15 ಸಾವಿರ ಸೈಟುಗಳನ್ನು ಖರೀದಿ ಮಾಡಿದ್ದಾರೆ.. ಬನಶಂಕರಿ, ವಿಶ್ವೇಶ್ವರಯ್ಯ, ಕೆಂಪೇಗೌಡ ಲೇಔಟ್ ಸೇರಿದಂತೆ ಹಲವು ಭಾಗಗಳಲ್ಲಿ ಸೈಟು ವಿತರಿಸಲಾಗಿದೆ..

ಕಾಸು ಕೊಟ್ಟು ವರ್ಷಗಳೇ ಉರುಳಿ ಹೋದ್ರು, ಮನೆ ಕಟ್ಟೋಕೆ ಮಾತ್ರ ಬಿಬಿಎಂಪಿ ಪರ್ಮಿಷನ್ ಕೊಡ್ತಾ ಇಲ್ಲ.. ಅದಕ್ಕೆ ಕಾರಣ ಬಿಡಿಎ ಮಾಡಿದ ಎಡವಟ್ಟು.ಕೆರೆ ಮತ್ತು ರಾಜಕಾಲುವೆ ಅಂಚಿನಲ್ಲಿ ಸೈಟ್ ನಿರ್ಮಿಸಿರೋದು 15 ಸಾವಿರಕ್ಕೂ ಹೆಚ್ಚು ಜನರನ್ನು ಸಂಕಷ್ಟಕ್ಕೆ ದೂಡಿದೆ. ನಮ್ಗೆ ಬೇರೆ ಜಾಗದಲ್ಲಿ ಸೈಟು ಕೊಡಿ ಅನ್ನೋ ಜನರ ಕೂಗು ಅರಣ್ಯರೋದನವಾಗಿದೆ.

ಸರ್ಕಾರಿ ಸಂಸ್ಥೆಯಾದ ಬಿಡಿಎಗೆ ಕಾನೂನಿನ ಬಗ್ಗೆ ಮಾಹಿತಿ ಇರಲಿಲ್ವಾ.. ತಮ್ಮ ತಪ್ಪಿಂದ ಸಹಸ್ರಾರು ಜನ ಬೀದಿಗೆ ಬೀಳ್ತಾರೆ ಎಂಬ ಅರಿವು ಇರಲಿಲ್ವಾ, ಈ ಗೋಜಲಿಗೆ ಉತ್ತರಿಸಬೇಕಾದ ಸಂಸ್ಥೆಯ ಆಯುಕ್ತ ರಾಕೇಶ್ ಸಿಂಗ್ ಮೌನಕ್ಕೆ ಶರಣಾಗಿದ್ದಾರೆ.. ಲಕ್ಷ ಲಕ್ಷ ಕಟ್ಟಿದವರು ಮಾತ್ರ, ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಾ ಇದ್ದಾರೆ..

LEAVE A REPLY

Please enter your comment!
Please enter your name here