ಹುಷಾರ್.. ಅತಿಯಾದರೆ ಉಪ್ಪಿಗಿಂತ ವಿಷ ಬೇರೊಂದಿಲ್ಲ..!

ಲೈಫ್ ಸ್ಟೈಲ್

ಅತಿಯಾದರೆ ಅಮೃತವೂ ವಿಷವೇ. ಹೌದು ಯಾವುದೇ ವಸ್ತುವನ್ನು ಅತಿಯಾಗಿ ಸೇವಿಸಿದರೆ ಅದರ ಅನಾನುಕೂಲಗಳನ್ನು ಕೂಡಾ ಎದುರಿಸಲೇಬೇಕು. ಕೆಲವೊಮ್ಮೆ ಇದರಿಂದ  ಆರೋಗ್ಯವೂ ಹದಗೆಡಬಹುದು. ಈ ಮಾತು ಉಪ್ಪಿನ ವಿಷಯದಲ್ಲೂ ನೆನಪಿನಲ್ಲಿಟ್ಟು ಕೊಳ್ಳಬೇಕು. ತಿನ್ನುವ ಆಹಾರದಲ್ಲಿ ಉಪ್ಪು ಕಡಿಮೆಯಿದ್ದರೂ ತಿನ್ನುವುದು ಕಷ್ಟ, ಹೆಚ್ಚಿದ್ದರೂ ಸಾಧ್ಯವಿಲ್ಲ. ಹೀಗಿರುವಾಗ, ನಾವು ಬಳಸುವ ಉಪ್ಪಿನ ಪ್ರಮಾಣವನ್ನು ಸಾಮಾನ್ಯವಾಗಿರಬೇಕು. ಏಕೆಂದರೆ ಇದನ್ನು ಹೆಚ್ಚು ತಿನ್ನುವುದರಿಂದ ಅನೇಕ ಅಪಾಯಗಳಿಗೆ ಕಾರನವಾಗಬಹುದು.

ಅತಿಯಾದ ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ :
ಒಬ್ಬ ವ್ಯಕ್ತಿಯು ಹೆಚ್ಚು ಉಪ್ಪನ್ನು ಸೇವಿಸಿದರೆ, ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಉಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಕಂಡುಬರುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಮೂಳೆಗಳು ದುರ್ಬಲವಾಗುತ್ತವೆ : 
ಹೆಚ್ಚು ಉಪ್ಪನ್ನು ತಿನ್ನುವುದೆಂದರೆ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ. ಉಪ್ಪಿನ ಮಿತಿ ಮೀರಿದ ಬಳಕೆ ಮೂಳೆಗಳು ದುರ್ಬಲಗೊಳ್ಳಲು ಕಾರಣವಾಗುತ್ತದೆ. ಇದರೊಂದಿಗೆ, ಕೀಲು ನೋವಿನ ಸಮಸ್ಯೆ ಬಾಧಿಸಲು ಆರಂಭವಾಗುತ್ತದೆ.

ಕೂದಲು ಉದುರಲು ಆರಂಭವಾಗುತ್ತದೆ :
ಕೂದಲು ದುರ್ಬಲಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಹೆಚ್ಚು ಉಪ್ಪನ್ನು ಸೇವಿಸುತ್ತಿದ್ದರೆ  ಆ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ.  ಹೀಗೆ ಮಾಡಿದರೆ, ಕೂದಲು ಉದುರುವಿಕೆಯ  ಸಮಸ್ಯೆ ಕಾಡುವುದಿಲ್ಲ. ಆದ್ದರಿಂದ ಸೀಮಿತ ಪ್ರಮಾಣದಲ್ಲಿ ಉಪ್ಪನ್ನು ಸೇವಿಸಲು ಪ್ರಯತ್ನಿಸಿ.

ಕಿಡ್ನಿ ಸ್ಟೋನ್ ಅಪಾಯ ಹೆಚ್ಚುತ್ತದೆ :
ಹೆಚ್ಚು ಉಪ್ಪು ತಿಂದರೆ ಮೂತ್ರಪಿಂಡದ ಕಲ್ಲುಗಳ  ಅಪಾಯ ಹೆಚ್ಚಾಗುತ್ತದೆ.  ಹೆಚ್ಚು ಉಪ್ಪನ್ನು ತಿನ್ನುವುದರಿಂದ ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣವು ಹೆಚ್ಚಾಗುತ್ತದೆ. ಇದರಿಂದಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಕೂಡಾ ಹೆಚಾಗುತ್ತದೆ. ಅತಿಯಾಗಿ ಉಪ್ಪು ಸೇವಿಸಿದರೆ ದೇಹದ ಬೊಜ್ಜಿನ ಪ್ರಮಾಣವನ್ನು ಕೂಡಾ ಹೆಚ್ಚಿಸುತ್ತದೆ.

Leave a Reply

Your email address will not be published.