ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ್ದ ಪಾಪಿ ಪತ್ನಿ ಅರೆಸ್ಟ್

ಜಿಲ್ಲೆ

ಮಂಡ್ಯ: ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯ ಕೊಲೆ ಮಾಡಿ ಅಮಾಯಕಿಯಂತೆ ನಟಿಸುತ್ತಿದ್ದ ಚಾಲಕಿಯನ್ನು ಕೊನೆಗೂ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಈಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ತಲಕಾಡು ಫೈಲ್‍ನ ನಿವಾಸಿ ಗೌರಿ ಕೊಲೆ ಮಾಡಿದ ಆರೋಪಿ. ಈಕೆ ತನ್ನ ಪತಿ ಸುಂದರ್‌ ರಾಜ್‍ನನ್ನು ಇದೇ ತಿಂಗಳ 2ರಂದು ಕೆಆರ್‌ಎಸ್ ಹೊರವಲಯದಲ್ಲಿರುವ ಹುಲಿಕೆರೆಯ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ್ದಳು. ಆದರೆ ಪೊಲೀಸರು ಸುಂದರ್‌ ರಾಜ್ ಕೊಲೆಯ ವಿಷಯವನ್ನು ತಿಳಿಸಿದಾಗ ದೊಡ್ಡ ಹೈಡ್ರಾಮಾವನ್ನೇ ಮಾಡಿದ್ದಳು.

ಅಷ್ಟೇ ಅಲ್ಲದೇ ಮಾಧ್ಯಮಗಳ ಮುಂದೆ ಆಕೆ, ನನ್ನ ಗಂಡ ನಿನ್ನೆ ಮನೆಗೆ ಬಂದಿದ್ದ. ಅದಾದ ನಂತರ ಮನೆಗೆ ಬಂದಿಲ್ಲ. ಇದೀಗ ನನ್ನ ಗಂಡನನ್ನು ಯಾರೋ ಕೊಲೆ ಮಾಡಿದ್ದಾರೆ. ಆತನನ್ನು ಯಾರು ಕೊಲೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ನನ್ನ ಗಂಡನಿಗೆ ಯಾರು ಶತ್ರುಗಳು ಇರಲಿಲ್ಲ ಎಂದು ಕಣ್ಣೀರು ಹಾಕಿದ್ದಳು.

ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆ ವೇಳೆ ಗೌರಿಯ ಪ್ರಿಯಕರ ಪರಮೇಶ್‍ಚಾರಿಯನ್ನು ವಿಚಾರಣೆ ನಡೆಸುತ್ತಾರೆ. ಆ ಬಳಿಕ ಇವರಿಗೆ ಸುಂದರ್ ರಾಜ್‍ನನ್ನು ಕೊಲೆ ಮಾಡಿರುವುದು ಅಮಾಯಕಿಯಂತೆ ನಟಿಸುತ್ತಿರುವ ಪತ್ನಿ ಗೌರಿ ಎಂದು ತಿಳಿದುಬಂದಿದೆ.

ಅಷ್ಟೇ ಅಲ್ಲದೇ ಸುಂದರ್‌ ರಾಜ್ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ನನಗೆ ನೆಮ್ಮದಿಯೇ ಇಲ್ಲ ಎಂದು ಗೌರಿ ಪ್ರಿಯಕರನ ಬಳಿ  ಹೇಳಿಕೊಂಡಿದ್ದಳು. ಇದಾದ ನಂತರ ಆತನನ್ನು ಕೊಲೆ ಮಾಡಬೇಕೆಂದು ಸಹ ಆಕೆ ಹೇಳಿದ್ದಳು. ನಂತರ ನನ್ನ ಸ್ನೇಹಿತರಾದ ಚೇತನ್, ತೇಜಸ್, ಶ್ರೀನಿವಾಸ ಎಂಬುವರ ಜೊತೆ ಸುಂದರ್‌ ರಾಜ್‍ನನ್ನು ಪಾರ್ಟಿ ಮಾಡೋಕೆ ಹುಲಿಕೆರೆಯ ಬಳಿ ಕರೆದುಕೊಂಡು ಹೋಗಿ, ಅಲ್ಲಿ ಆತನಿಗೆ ಚೆನ್ನಾಗಿ ಕುಡಿಸಿ ಆತನಿಗೆ ಮನಬಂದ ಹಾಗೆ ಹೊಡೆದು ಕೊಲೆ ಮಾಡಿರುವುದಾಗಿ ಪರಮೇಶ್‍ ಚಾರಿ ತಪ್ಪು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಗೌರಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published.