ಬೆಂಗಳೂರಿಗೂ ಬಂತಾ ಮಂಕಿಪಾಕ್ಸ್..?ಆಫ್ರಿಕನ್ ನಿಂದ ಬಂದಿದ್ದ ವ್ಯಕ್ತಿಗೆ ಸೋಂಕು

ಬೆಂಗಳೂರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಸೋಂಕಿನ ಭೀತಿ ಶುರುವಾಗಿದೆ. ಆಫ್ರಿಕಾ ಮೂಲದ ಪ್ರಜೆಯಲ್ಲಿ ಸೋಂಕಿನ ಶಂಕಿತ ಲಕ್ಷಣ ಕಂಡಬಂದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮಂಗನ ಕಾಯಿಲೆ ಅಥವಾ ಮಂಕಿಪಾಕ್ಸ್ ಗೆ ತುತ್ತಾಗಿರುವ ಶಂಕಿತ ಆಫ್ರಿಕನ್ ಪ್ರಜೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕಿಸ ಲಾಗಿದ್ದು, ಅವರ ಮಾದರಿಗಳನ್ನು ಸಂಜೆ ಪುಣೆಯ ಎನ್‌ಐವಿಗೆ ಪರೀಕ್ಷೆಗೆ ಕಳುಹಿಸಲಾಗಿದೆ.

ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ಆಫ್ರಿಕನ್ ಪ್ರಜೆ ಜುಲೈ 4ರಂದು ಇಥಿಯೋಪಿಯಾದಿಂದ ಬಂದಿದ್ದರು. ಅವರು ಡಯಾಲಿಸಿಸ್ ಮತ್ತು ಪೂರ್ವ-ಕಸಿ ಮೌಲ್ಯಮಾಪನಕ್ಕೆ ಒಳಗಾಗುತ್ತಿದ್ದರು. ಇವರ ಚರ್ಮದ ಮೇಲೆ ದದ್ದುಗಳು ಸೇರಿದಂತೆ ಮಂಕಿಪಾಕ್ಸ್‌ನ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಅವರ ರಕ್ತ ಮತ್ತು ಚರ್ಮದ ಗಾಯಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.