ಲಾರಿ ಹಾಗೂ 2 ಬೈಕ್ ಗಳ ನಡುವೆ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ

ಅಪರಾಧ ಜಿಲ್ಲೆ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಹಕ್ರೆಕೊಪ್ಪ ಕ್ರಾಸ್​ ಬಳಿ ಲಾರಿ ಹಾಗೂ 2 ಬೈಕ್​ಗಳು ಡಿಕ್ಕಿಯಾಗಿದೆ. ಪರಿಣಾಮ ಬೈಕ್​ನಲ್ಲಿ ಓರ್ವ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಬೈಕ್ ಸವಾರ ಪಕ್ಕದಲ್ಲಿನ ಹಳ್ಳಕ್ಕೆ ಬಿದ್ದಿದ್ದಾನೆ ಆತನನ್ನ ತಕ್ಷಣವೇ ಸಾಗರ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಘಟನೆಯಲ್ಲಿ ಇನ್ನಿಬ್ಬರ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗುತ್ತಿದೆ.ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ದಾರಿಯಲ್ಲಿ ಸಿಗಂದೂರು ಕಾಲೇಜು ಸಮೀಪ ಘಟನೆ ನಡೆದಿದೆ.

ಸ್ಥಳಕ್ಕೆ ಸಾಗರ ಪೊಲೀಸರು ಬಂದಿದ್ದು ಪರಿಶೀಲನೆ ನಡೆಸ್ತಿದ್ಧಾರೆ. ಲಾರಿ ನಿಯಂತ್ರಣ ತಪ್ಪಿ ತಿರುವಿನಲ್ಲಿ ಫಲ್ಸರ್ ಹಾಗೂ ಬುಲೆಟ್ ಬೈಕ್​ಗಳಿಗೆ ಡಿಕ್ಕಿ ಹೊಡೆದಿದೆ.ಸದ್ಯ ಮೃತರು  ಪಡವಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯವರೆಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಬುಲೆಟ್​ ನಲ್ಲಿದ್ದ ಪಡವಗೋಡು ತೂಜೆಡ್ಡು ಗ್ರಾಮದ ನಿವಾಸಿ ಪ್ರೇಮಾನಂದ ಗೌಡರು, ಸಾವನ್ನಪ್ಪಿದ್ದಾರೆ. ಅವರ ಪತ್ನಿ ಸೀರಿಯಸ್​ ಆಗಿದ್ದಾರೆ. ಇನ್ನೂ ಫಲ್ಸರ್​ನಲ್ಲಿದ್ದ ಇಬ್ಬರು ಸಹ ಸೀರಿಯಸ್​ ಆಗಿದ್ದು ಸಾಗರ ಆಸ್ಪತ್ರೆಯಿಂದ ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಬ್ಬರ ಕಂಡೀಷನ್​ ಕೂಡ ಸೀರಿಯಸ್ ಆಗಿದೆ.

Leave a Reply

Your email address will not be published.