Home District ಸೋಷಿಯಲ್ ಮೀಡಿಯಾ ಬಳಕೆ‌ ಮಾಡೋ ಯುವತಿಯರೇ ಹುಷಾರ್…. ಬ್ಯೂಟಿಫುಲ್ ಮಾಡೆಲ್ಸ್ ಶೂಟ್ ಔಟ್ ಹೆಸ್ರಲ್ಲಿ ಯುವತಿಯರ...

ಸೋಷಿಯಲ್ ಮೀಡಿಯಾ ಬಳಕೆ‌ ಮಾಡೋ ಯುವತಿಯರೇ ಹುಷಾರ್…. ಬ್ಯೂಟಿಫುಲ್ ಮಾಡೆಲ್ಸ್ ಶೂಟ್ ಔಟ್ ಹೆಸ್ರಲ್ಲಿ ಯುವತಿಯರ ಮಾನ ಹರಾಜು

787
0
SHARE

ಕೊಡಗು. ಸುಂದರವಾದ ಯುವತಿಯರನ್ನೇ ಟಾರ್ಗೆಟ್ ಮಾಡ್ತೀರೋ ಟೀಂ ಒಂದು, ಕೊಡಗಿನ ಯುವತಿಯರ ಹೆಸ್ರಲ್ಲಿ ಮಾಡಬಾರದ ಕೆಲಸಕ್ಕೆ ಕೈ ಹಾಕಿದೆ.ಇದೀಗ ಜಿಲ್ಲೆಯ ಜನ್ರು ಆ ಅಕೌಂಟ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರೊಫೈಲ್ ಮಾತ್ರ ಅಟ್ರ್ಯಾಕ್ಷನ್ ಅಕೌಂಟ್ ಚೆಕ್ ಮಾಡಿದ್ರೆ ಸುಂದರ ಹುಡಗಿಯರ ಅರೆ ಬೆತ್ತಲೆ ಪೋಟೋಗಳು ಕಾಣುತ್ತಿವೆ. ಕೂರ್ಗ್ ಬ್ಯೂಟಿಫುಲ್ ಮಾಡೆಲ್ಸ್ ಶೂಟ್ ಔಟ್ ಹೆಸ್ರಲ್ಲಿ ಕೊಡಗಿನ ಯುವತಿಯರ ಮಾನ ಹರಾಜು ಮಾಡಲಾಗ್ತಿರೋ ಪೇಸ್ಬುಕ್ ಪೇಜ್ ದೊಡ್ಡ ಅವಾಂತರ ಸೃಷ್ಟಿಸಿದೆ.

ಕೊಡಗು ಜಿಲ್ಲೆ ಅಂದ್ರೆ ಪ್ರವಾಸಿಗರ ಹಾಟ್ ಟ್ಯೂರಿಸ್ಟ್ ಸ್ಪಾಟ್. ಹೀಗಾಗಿ ಪೇಸ್ಬುಕ್ ಪೇಜ್ ನಲ್ಲಿ ಕೂರ್ಗ್ ಅಂತಾ ಸರ್ಚ್ ಮಾಡಿದ್ರೆ ಕೂರ್ಗ್ ಯುವತಿಯರ ಹೆಸ್ರಲ್ಲಿ ಅರೆ ನಗ್ನ ಪೋಟೋಗಳೇ ಸಿಗ್ತಿವೆ. ಹೀಗಾಗಿ ಕೊಡಗಿಗೆ ಭೇಟಿ ನೀಡೋ ಟ್ಯೂರಿಸ್ಟ್ ಗಳನ್ನ ಟಾರ್ಗೆಟ್ ಮಾಡಿ ಆನ್ ಲೈನ್ ನಲ್ಲಿ ಜನ್ರುನ್ನ ಮರುಳು ಮಾಡೋ ಟೀಂ ಒಂದು ಜಿಲ್ಲೆಯಲ್ಲಿಗ ಸಕ್ರೀಯವಾಗಿದೆ. ಹೀಗಾಗಿ ಕೊಡಗಿನ ಯುವತಿಯರ ಹೆಸ್ರಲ್ಲಿ ಮಾನ ಹರಾಜು ಹಾಕ್ತೀರೋ ಟೀಂ ವಿರುದ್ಧ ಇಲ್ಲಿನ ಜನ್ರು ತಿರುಗಿ ಬಿದ್ದಿದ್ದಾರೆ.

ಇನ್ನ ,ಯುವತಿಯರ ಅರೆನಗ್ನ ಪೋಟೋಗಳನ್ನ ವೆಬ್ ಸೈಟ್ ಗೆ ಅಪ್ ಲೋಡ್ ಮಾಡ್ತೀರೋದಕ್ಕೆ ಕೊಡಗು ರಕ್ಷಣಾ ವೇದಿಕೆ ಮಹಿಳಾ ಘಟಕದ ಸೈಬರ್ ಕ್ರೈಮ್ ಪೊಲೀಸ್ರ ಕದ ತಟ್ಟಿದೆ. ಇನ್ನ ಮುಖಪುಟದಲ್ಲಿ ಬಳಸಲಾಗಿರೋ ಯುವತಿಗೂ ಕೂಡ ಇದು ತಿಳಿದಿಲ್ಲ ವಂತೆ. ಹೀಗಾಗಿ ಕೂರ್ಗ್ ಬ್ಯೂಟಿಫುಲ್ ಮಾಡೆಲ್ಸ್ ಪೋಟೊ ಶೂಟ್ ಔಟ್ ಹೆಸ್ರಲ್ಲಿ ಯುವತಿಯರ ಅರೆನಗ್ನ ಪೋಟೋ ಗಳನ್ನ ಅಪ್ ಲೊಡ್ ಮಾಡಿ ಆನ್ ಲೈನ್ ವೈಶ್ಯಾವಾಟಿಕೆ ನಡೆಸ್ತಿರೊ ಬಗ್ಗೆಯೂ ಕೂಡ ಆರೋಪ ಇದೆ. ಹೀಗಾಗಿ ಕೊರೊನಾ ಟೈಂ ನಲ್ಲಿ ಮನೆಯಲ್ಲಿರೋ ,ಸೋಷಿಯಲ್ ಮೀಡಿಯಾ ಬಳಕೆ‌ ಮಾಡೋ ಹೆಣ್ಣು ಮಕ್ಕಳು ಇಂತವ್ರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಿದೆ.

ಒಟ್ಟಿನಲ್ಲಿ, ಫೇಸ್ ಬುಕ್ ನಲ್ಲಿ ಅರೆನಗ್ನ ಪೋಟೊ ಬಳಸಿ ಹೈಟೆಕ್ ವೈಶ್ಯಾವಾಟಿಕೆ ದಂಧೆ ಮಾಡ್ತಿರೋ ಬಗ್ಗೆ ಇದೀಗ ಸೈಬರ್ ಪೊಲೀಸ್ರಿಗೆ ದೂರೊಂದು ಸಲ್ಲಿಕೆಯಾಗಿದೆ. ಇನ್ನಾದ್ರೂ ಇಂತವುಗಳ ವಿರುದ್ಧ ಹೆಣ್ಣು ಮಕ್ಕಳು ಎಚ್ಚರಿಕೆಯಿಂದ ಇರಬೇಕಿದೆ.

 

LEAVE A REPLY

Please enter your comment!
Please enter your name here