
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬಗ್ಗೆ ಅಸಮಾಧಾನ: ನಿರ್ಮಾಪಕ ಭಾ.ಮಾ.ಹರೀಶ್ ರಾಜೀನಾಮೆ
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬಗ್ಗೆ ನಿರ್ಮಾಪಕ ಬಾ.ಮಾ ಹರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಫಿಲಂ ಚೇಂಬರ್ ಚುನಾವಣೆ ನಡೆಯದ ಹಿನ್ನೆಲೆ, ಲಿಖಿತ ಪತ್ರದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾವಶ್ಯಕವಾಗಿ ಫಿಲಂ ಚೇಂಬರ್ ಚುನಾವಣೆಯನ್ನು ಮುಂದೂಡಿಕೆ ಮಾಡಿದ್ದು, ಇದು ಸರ್ಕಾರದ ಆದೇಶ ಉಲ್ಲಂಘನೆಯಾಗಿದೆ. ಬೇರೆ ಸಂಘ ಸಂಘಟನೆಗಳ ಚುನಾವಣೆ ನಿರಂತರವಾಗಿ ನಡೆಯುತ್ತಿದ್ದು, ಆದರೆ ಫಿಲಂ ಚೇಂಬರ್ ಚುನಾವಣೆ ನಡೆಯದಿದ್ದಕ್ಕೆ ಕಾರ್ಯ ಸಮಿತಿ ಸದಸ್ಯರಾಗಿರುವ ಹರೀಶ್ ತೀವ್ರ ಬೇಸರ ಹೊರ ಹಾಕಿದ್ದಾರೆ. ಅಲ್ಲದೇ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.