Bhavana Ramanna.. ಬಿಜೆಪಿಗೆ ಹೋಗಿದ್ರಿ..ಮತ್ಯಾಕೆ ಇಲ್ಲಿ ಬಂದ್ರಿ: ಪ್ರತಿಭಟನೆಯಲ್ಲಿ ನಟಿ ಭಾವನಾಗೆ ತರಾಟೆ

ಬೆಂಗಳೂರು

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಾಯ ಕರು ಕೈಗೊಂಡ ಪ್ರತಿಭಟನೆಗೆ ಬಂದ ನಟಿ ಭಾವನಾರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ನಟಿಗೆ ಕೈ ಕಾರ್ಯ ಕರ್ತೆಯೊಬ್ಬರು ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಜೆಪಿಗೆ ಹೋಗಿದ್ರಿ ಈಗ ಬಂದಿದ್ದೀರಾ..? ಮುಂದೆ ಬಂದು ಕೂರೋದಕ್ಕೆ ಹೋಗ್ತೀರಾ ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಈ ವೇಳೆ ಗಲಿಬಿಲಿಯಾಗಿ ಸಮಾಧಾನ ಮಾಡಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಮುಂದೆ ಕೂರಲು ನಟಿಗೆ ಕಾರ್ಯಕರ್ತೆ ಅವಕಾಶ ಕೊಡಲಿಲ್ಲ. ಬಳಿಕ ಹಿಂದೆ ಹೋಗಿ ಸ್ವಲ್ಪ ಹೊತ್ತು ಕುಳಿತರು. ಅಲ್ಲಿಂದ ಎದ್ದು ಸೈಡಲ್ಲಿ ನಿಂತರು. ಆದರೆ ಹಿರಿಯ ನಾಯಕರು ಯಾವುದಕ್ಕೂ ತುಟಿ ಬಿಚ್ಚಲಿಲ್ಲ. ಈ ಮೂಲಕ ಭಾವನಾ ಬೆಂಬಲಕ್ಕೆ ಯಾವ ನಾಯಕರು ನಿಲ್ಲದೇ ಇರುವುದು ಗಮನಾರ್ಹವಾಗಿತ್ತು.

Leave a Reply

Your email address will not be published.