
LPG ಗ್ರಾಹಕರಿಗೆ ಮತ್ತೆ ಬಿಗ್ ಶಾಕ್..! ಗ್ಯಾಸ್ ಸಿಲಿಂಡರ್ ದರ ಹೆಚ್ಚಳ
ನವದೆಹಲಿ: ದೆಹಲಿಯಲ್ಲಿ ಇಂದಿನಿಂದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ (19 ಕೆಜಿಯ ಸಿಲಿಂಡರ್) ಬೆಲೆಯನ್ನು 105 ರೂ.ಗಳಷ್ಟು ಹೆಚ್ಚಿ ಸಲಾಗಿದೆ. ಇಂದಿನಿಂದ ದೆಹಲಿಯಲ್ಲಿ 19 ಕೆ.ಜಿಯ ಸಿಲಿಂಡರ್ ಬೆಲೆ 2,012 ರೂ. ಆಗಿರಲಿದೆ.5 ಕೆಜಿ ಸಿಲಿಂಡರ್ ಬೆಲೆ 27 ರೂ.ನಷ್ಟು ಏರಿಕೆಯಾಗಿದೆ. ಹಾಗಾಗಿ 5 ಕೆಜಿ ಸಿಲಿಂಡರ್ ಬೆಲೆ 569 ರೂ. ಇರಲಿದೆ. ಆದರೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ನಲ್ಲಿ ಯಾವುದೇ ಹೆಚ್ಚಳವಿಲ್ಲ. ಎಲ್ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾಸಿಕವಾಗಿ ಪರಿಷ್ಕರಿ ಸಲಾಗುತ್ತದೆ. ಇನ್ನೂ ನ್ಯಾಷನಲ್ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಫೆಬ್ರವರಿ 1 ರಿಂದ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 91.50 ರೂ.ಗಳಷ್ಟು ಕಡಿತಗೊಳಿಸಿದ್ದವು.