ಸಾರ್ವಜನಿಕರಿಗೆ ಬಿಗ್ ಶಾಕ್..! ʼಹಾಲಿನ ದರ ಪ್ರತಿ ಲೀಟರ್ʼಗೆ 2 ರೂಪಾಯಿ ಹೆಚ್ಚಳ

ರಾಷ್ಟ್ರೀಯ

ಗಾಂಧೀನಗರ: ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಅಮೂಲ್ ತನ್ನ ಹಾಲಿನ ದರವನ್ನು 2 ರೂ. ಏರಿಕೆ ಮಾಡಿದೆ. ಅಮೂಲ್ ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳ ಮೂಲಕ ಭಾರತದಲ್ಲಿ ಹೆಸರುವಾಸಿಯಾಗಿದ್ದು, ಇದೀಗ ಹಾಲಿನ ದರವನ್ನು ಮಾತ್ರ ಮಾರ್ಚ್ 1 ರಿಂದ 2 ರೂ. ಏರಿಕೆಗೆ ಮುಂದಾಗಿದೆ..ಅಹಮದಾಬಾದ್ ಮತ್ತು ಸೌರಾಷ್ಟ್ರ ಮಾರುಕಟ್ಟೆಯಲ್ಲಿ ಪ್ರಸ್ತುತ ಅಮೂಲ್ ಗೋಲ್ಡ್ ಹಾಲಿನ ದರ ಅರ್ಧ ಲೀ. 30 ರೂ., ಅಮೂಲ್ ತಾಜಾ 24 ರೂ. ಮತ್ತು ಅಮೂಲ್ ಶಕ್ತಿ 27 ರೂ. ಇದೆ. ಇದೀಗ ಇರುವ ಬೆಲೆಯಲ್ಲಿ 2 ರೂ. ಏರಿಕೆ ಆಗುತ್ತಿದ್ದು, ಈ ಮೂಲಕ MRP ದರದಲ್ಲಿ 4% ಏರಿಕೆ ಆಗಿದೆ ಎಂದು ಅಮೂಲ್ ಸಂಸ್ಥೆ ಸ್ಪಷ್ಟಪಡಿಸಿದೆ.

Leave a Reply

Your email address will not be published.