ಬಿಗ್ ಬಾಸ್ ಮನೆಯೊಳಗೆ ಮೊದಲ ದಿನವೇ ಕಣ್ಣೀರು ಹಾಕಿದ ಸ್ಪರ್ಧಿಗಳು

ಚಲನಚಿತ್ರ

ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಈ ಭಾರಿ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಆಗಸ್ಟ್ 6ರಂದು ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ಸಿಕ್ಕಿದ್ದು, ಹಿರಿತೆರೆ, ಕಿರುತೆರೆ ಹಾಗೂ ಸೊಷಿಯಲ್ ಮೀಡಿಯಾ ಸ್ಟಾರ್ ಗಳು ದೊಡ್ಮನೆ ಒಳಗೆ ಎಂಟ್ರಿಕೊಟ್ಟಿದ್ದಾರೆ.ಮೊದಲ ದಿನವೇ ಅಸಲಿ ಆಟ ಶುರವಾಗಿದ್ದು ಮನೆಯೊಳಗೆ ಸದಸ್ಯರು ಕಣ್ಣೀರು ಹಾಕಿದ್ದಾರೆ.

ಪ್ರತಿಯೊಬ್ಬರು ಬದುಕಿನಲ್ಲೂ ಕಷ್ಟಗಳು ಇದ್ದೆ ಇರುತ್ತವೆ. ಅವುಗಳ ಬಗ್ಗೆ ಹೇಳಿಕೊಂಡು ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ. ಎಲ್ಲ ಸ್ಪರ್ಧಿಗಳ ಬದುಕಿನ ಕಷ್ಟ ಒಂದೊಂದು ರೀತಿ ಇದೆ. ಚೈತ್ರಾ ಹಳ್ಳಿಕೇರಿ ಅವರಿಗೆ ಗಂಡನ ಮನೆಯವರಿಂದಲೇ ಮೋಸ, ಸೋಮಣ್ಣ ಮಾಚಿಮಾಡ ಅವರಿಗೆ ಸಂಸಾರದಲ್ಲಿ ಬಿರುಕು, ಸ್ಫೂರ್ತಿ ಗೌಡ ಅವರಿಗೆ ಅಮ್ಮನ ಸಾವಿನಿಂದ ಅಂಟಿಕೊಂಡ ಕಳಂಕ, ತಂದೆಯ ಪ್ರೀತಿ ಸಿಕ್ಕಿಲ್ಲ ಎಂಬುದು ಸಾನ್ಯಾ ಐಯ್ಯರ್​ ಕೊರಗು.. ಹೀಗೆ ಎಲ್ಲ ಸ್ಪರ್ಧಿಗಳು ಒಂದೊಂದು ರೀತಿಯ ನೋವು ತೋಡಿಕೊಂಡಿದ್ದಾರೆ.

ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್​ ಗೌಡ, ಸ್ಫೂರ್ತಿ ಗೌಡ, ನಂದು-ಜಶ್ವಂತ್​, ಚೈತ್ರಾ ಹಳ್ಳಿಕೇರಿ, ಅಕ್ಷತಾ ಕುಕ್ಕಿ, ಅರ್ಜುನ್​ ರಮೇಶ್​, ಕಿರಣ್​ ಯೋಗೇಶ್ವರ್​, ಲೋಕೇಶ್​, ಸೋಮಣ್ಣ ಮಾಚಿಮಾಡ, ರಾಕೇಶ್​ ಅಡಿಗ, ಸಾನ್ಯಾ ಐಯ್ಯರ್, ಉದಯ್​ ಸೂರ್ಯ, ರೂಪೇಶ್​ ಶೆಟ್ಟಿ, ಜಯಶ್ರೀ ಆರಾಧ್ಯ ಅವರು ಬಿಗ್​ ಬಾಸ್​ ಮನೆಗೆ ಎಂಟ್ರಿಕೊಟ್ಟಿದ್ದಾರೆ.

Leave a Reply

Your email address will not be published.