ವಾರಕ್ಕೂ ಮೊದಲೇ ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಪ್ರೇಮ್ ಕಹಾನಿ

ಚಲನಚಿತ್ರ

ಬಿಗ್ ಬಾಸ್ ಮನೆಯಲ್ಲಿ ಅನೇಕ ಪ್ರೀತಿಗಳು ಹುಟ್ಟಿಕೊಂಡಿವೆ. ಸಾಕಷ್ಟು ಪ್ರೀತಿಗಳು ಇಲ್ಲಿಯೇ ಮುಕ್ತಯವಾಗಿದ್ದು ಇನ್ನೂ ಕೆಲ ಪ್ರೀತಿಗಳು ಮದುವೆಯವರೆಗೂ ಹೋಗಿವೆ. ಇದೀಗ ಕನ್ನಡದಲ್ಲಿ ಬಿಗ್ ಬಾಸ್ ಓಟಿಟಿ ಆರಂಭವಾಗಿದ್ದು 16 ಸ್ಪರ್ಧಿಗಳು ಮನೆಯೊಳಗೆ ಎಂಟ್ರಿಕೊಟ್ಟಿದ್ದಾರೆ. ಬಿಗ್ ಬಾಸ್ ಆರಂಭವಾಗಿ ವಾರ ಕಳೆಯೋದ್ರೊಳಗೆ ದೊಡ್ಮನೆ ಒಳಗೆ ಹೊಸ ಪ್ರೇಮ ಪ್ರಕರಣವೊಂದು ಶುರುವಾಗಿದೆ.

‘ಬಿಗ್ ಬಾಸ್​’ ಮನೆಯಲ್ಲಿ ರಾಕೇಶ್ ಹಾಗೂ ಸ್ಫೂರ್ತಿ ಹೆಚ್ಚಿನ ಸಮಯ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ‘ನಿಮಗೆ ಯಾರ ಮೇಲಾದರೂ ಲವ್ ಆದರೆ ಹೇಳ್ತೀರಾ?’ ಎಂದು ಸ್ಫೂರ್ತಿಗೆ ರಾಕೇಶ್ ಪ್ರಶ್ನೆ ಮಾಡಿದ್ದಾರೆ. ‘ನಾನಾಗಿ ಯಾರಿಗೂ ಪ್ರಪೋಸ್ ಮಾಡಲ್ಲ. ಹುಡುಗನೇ ನನ್ನ ಬಳಿ ಬಂದು ಪ್ರೀತಿ ಹೇಳಿಕೊಳ್ಳಬೇಕು. ಆ ರೀತಿ ಮಾಡ್ತೀನಿ’ ಎಂದರು ಸ್ಫೂರ್ತಿ ಹೇಳಿದ್ದಾರೆ.

‘ನೀನು ಟಿಪಿಕಲ್ ಹುಡುಗಿ ತರ ಆಡ್ತೀರಲ್ಲ. ಲವ್ ಆದ್ರೆ ಲವ್ ಆಗಿದೆ ಎಂದು ಹೇಳಿಕೊಳ್ಳಬೇಕು. ಅಟ್ಲೀಸ್ಟ್​ ಇಷ್ಟ ಇದೆ ಎಂದ್ರೆ ಇಷ್ಟ ಇದೆ ಅಂತ ಹೇಳಿ’ ಎಂದರು ರಾಕೇಶ್. ‘ಇಲ್ಲಿ ಯಾರೂ ಇಷ್ಟ ಆಗಿಲ್ಲ. ಮನೆ ಹೊರಗೆ ಹೋಗಿ ಯಾರಾದರೂ ಇಷ್ಟ ಆದರೆ, ಇಷ್ಟ ಆಗಿದೆ ಅಂತ ಹೇಳ್ತೀನಿ’ ಎಂದರು.

Leave a Reply

Your email address will not be published.