
ಕೈ ತೋರಿಸಿದ ಎಂಬ ಕಾರಣಕ್ಕೆ ಬೈಕ್ ಸವಾರನಿಂದ ಕಾರು ಚಾಲಕನ ಮೇಲೆ ಹಲ್ಲೆ..!
ಬೆಂಗಳೂರು: ಕಾರು ಚಾಲಕ ಕೈ ತೋರಿಸಿದ ಎಂಬ ಕಾರಣಕ್ಕೆ ದ್ವಿಚಕ್ರ ವಾಹನ ಸವಾರನಿಂದ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿ ರುವ ಘಟನೆ ಕೆಆರ್ ಪುರದ ಹೂಡಿ ಕೆರೆಯ ಬಳಿ ನಡೆದಿದೆ. ಕಾರು ಚಾಲಕ ಆನಂದ್ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸ ಲಾಗಿದೆ. ಆನಂದ್ ಅವರು ಗರುಡಾಚಾರ್ಯಪಾಳ್ಯದ ಖಾಸಗೀ ಕಂಪನಿಯ ಉದ್ಯೋಗಿಯಾಗಿದ್ದು,
ಹೂಡಿಯಿಂದ ಕೆಆರ್ ಪುರನತ್ತ ಪ್ರಯಾಣಿಸುತ್ತಿದ್ದ ವೇಳೆ ಕಾರನ್ನು ಓವರ್ ಟೇಕ್ ಮಾಡುತ್ತಿದ್ದ ದ್ವಿಚಕ್ರ ವಾಹನ ಮುಂಬದಿಯಿಂದ ಕ್ಯಾಂಟರ್ ಬರುತ್ತಿದೆ ಎಂದು ಕೈ ಸನ್ನೆ ಮಾಡಿದ್ದಕ್ಕಾಗಿ ಹಲ್ಲೆ ನಡೆಸಲಾಗಿದೆ. ದ್ವಿಚಕ್ರ ವಾಹನದ ಕೀ ಯಿಂದ ಮುಖ ಹಾಗೂ ತಲೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡಿ ಆರೋಪಿ ಪರಾರಿಯಾದ್ದಾನೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಕೆಆರ್ ಪುರ ಪೊಲೀಸರು ಕಾರ್ ಹಾಗೂ ಬೈಕ್ ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.