ಬೆಂಗಳೂರು. ಬೆಂಗಳೂರಿನಲ್ಲಿ ಭೀಕರ ಅಪಘಾತವಾಗಿದೆ. ವ್ಹೀಲಿಂಗ್ ಮಾಡುವಾಗ ಎರಡು ಬೈಕ್ಗಳ ಮುಖಾಮುಖಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಏರ್ ಪೋರ್ಟ್ ರಸ್ತೆಯ ಜಿಕೆವಿಕೆ ಬಳಿ ವ್ಹೀಲಿಂಗ್ ಮಾಡುತ್ತಿದ್ದಾಗ ಈ ಅಪಘಾತವಾಗಿದೆ. ಮೃತರನ್ನು ನಾಗವಾರ ಸಮೀಪದ ಗೋವಿಂದಪುರದ ನಿವಾಸಿಗಳಾದ ಮಹಮ್ಮದ್ ಆದಿ ಆಯಾನ್,, ಮಾಜ್ ಅಹಮ್ಮದ್ ಖಾನ್, ಸಯ್ಯದ್ ರಿಯಾಜ್ ಎಂದು ಗುರುತಿಸಲಾಗಿದೆ.
ಅಪಘಾತದಿಂದಾಗಿ ಎರಡು ಬೈಕ್ ಗಳು ಪೀಸ್ ಪೀಸ್ ಆಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಳಿಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.