Home District BJP ಗೆ ಹೋಗುವ ಮುನ್ಸೂಚನೆ ಕೊಟ್ಟ A.ಮಂಜು..!? “ಬಿಜೆಪಿಗೆ ಹೋಗ್ತೇನೆ ಅಂತಾ ಹೇಳಿಲ್ಲ. ಆದರೆ ರಾಜಕೀಯ...

BJP ಗೆ ಹೋಗುವ ಮುನ್ಸೂಚನೆ ಕೊಟ್ಟ A.ಮಂಜು..!? “ಬಿಜೆಪಿಗೆ ಹೋಗ್ತೇನೆ ಅಂತಾ ಹೇಳಿಲ್ಲ. ಆದರೆ ರಾಜಕೀಯ ನಿಂತ ನೀರಲ್ಲ”

421
0
SHARE

ಲೋಕಸಭಾ ಚುನಾವಣೆಗೆ ದೇವೇಗೌಡರು ಹಾಸನ ಕ್ಷೇತ್ರದಿಂದ ನಿಂತರೆ ಬೆಂಬಲಿಸುತ್ತೇನೆ, ಆದ್ರೆ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನ ಅಭ್ಯರ್ಥಿಯಾಗಿಸಿದರೆ ಸಹಕಾರ ನೀಡೋದಿಲ್ಲ ಅಂತಾ ಮಾಜಿ ಸಚಿವ ಎ ಮಂಜು ಪುನರುಚ್ಚಾರಿಸಿದ್ದಾರೆ.

ಕೊಡಗು ಜಿಲ್ಲೆ ಸೋಮವಾರಪೇಟೆಯಲ್ಲಿ ಮಾತನಾಡಿದ ಎ ಮಂಜು, ನಾನು ದೇವೇಗೌಡರ ಕುಟುಂಬದ ರಾಜಕೀಯ ವಿರೋಧಿಯಷ್ಟೇ, ವೈಯಕ್ತಿಕ ವಿರೋಧಿಯಲ್ಲ ಅಂದ್ರು. ನಾನು ಇಲ್ಲಿವರೆಗೂ ಬಿಜೆಪಿಗೆ ಹೋಗ್ತೇನೆ ಅಂತಾ ಎಲ್ಲೂ ಹೇಳಿಲ್ಲ.

ಆದರೆ ರಾಜಕೀಯ ನಿಂತ ನೀರಲ್ಲ ಅನ್ನೋ ಮೂಲಕ ಒಂದು ವೇಳೆ ಟಿಕೇಟ್ ಪ್ರಜ್ವಲ್ ಗೆ ಟಿಕೇಟ್ ನೀಡಿದ್ರೆ ಬಿಜೆಪಿಗೆ ಹೋಗೋದಾಗಿ ಪರೋಕ್ಷವಾಗಿ ಹೇಳಿದ್ರು. ಇನ್ನೂ ಭವಾನಿ ರೇವಣ್ಣ, ಸರ್ಕಾರಿ ಕಾರನ್ನ ವ್ಯಾಪ್ತಿ ಮೀರಿ ಬಳಸಿಕೊಂಡಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಎ ಮಂಜು, ತಿಳಿವಳಿಕೆ ಹೇಳೋದರಿಂದ ಬರೋದಿಲ್ಲ,

ಪಾಲಿಸೋದರಿಂದ ಬರುತ್ತೆ ಅಂತಾ ದೇವೇಗೌಡರ ಕುಟುಂಬಕ್ಕೆ ಟಾಂಗ್ ನೀಡಿದ್ರು. ಅಲ್ಲದೇ ಇದು ಮುಖ್ಯಮಂತ್ರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಜುಗರಿಗೆ ತರೋ ವಿಚಾರ ಅಂತಾ ಮೈತ್ರಿ ಸರ್ಕಾರದ ಪಾಲುದಾರ ಪಕ್ಷವನ್ನ ಕುಟುಕಿದರು..

LEAVE A REPLY

Please enter your comment!
Please enter your name here