Home District BJP ಗೇಮ್ ಪ್ಲಾನ್ ಚೇಂಜ್..? ರಾಜ್ಯ ರಾಜಕಾರಣ ಬಿಗ್ ಟ್ವಿಸ್ಟ್..? ಬಳಿಕ ತಕ್ಷಣ ಸರ್ಕಾರ ರಚಿಸುವ...

BJP ಗೇಮ್ ಪ್ಲಾನ್ ಚೇಂಜ್..? ರಾಜ್ಯ ರಾಜಕಾರಣ ಬಿಗ್ ಟ್ವಿಸ್ಟ್..? ಬಳಿಕ ತಕ್ಷಣ ಸರ್ಕಾರ ರಚಿಸುವ ಉದ್ದೇಶ ಬಿಜೆಪಿಗಿಲ್ಲ..?

1597
0
SHARE

ಆಪರೇಷನ್ ಕಮಲಕ್ಕೆ ಕೈ ಹಾಕಿರುವ ಬಿಜೆಪಿ ನಾಯಕರ ಮಾಸ್ಟರ್ ಪ್ಲಾನ್ ಈ ಬಾರಿ ಬೇರೆಯದ್ದೇ ಆಗಿದೆ..ರಾಜ್ಯ ರಾಜಕಾರಣ ಬಿಗ್ ಟ್ವಿಸ್ಟ್ ಪಡೆದುಕೊಳ್ಳುವುದು ಖಚಿತವಾಗಿದೆ..ಮೈತ್ರಿ ಪಕ್ಷಗಳ ಶಾಸಕರಿಂದ ರಾಜೀನಾಮೆ ಕೊಡಿಸಲು ಮುಂದಾಗಿರುವ ಬಿಜೆಪಿ, ತಕ್ಷಣ ಸರ್ಕಾರ ರಚಿಸುವ ಉದ್ದೇಶವನ್ನೇ ಹೊಂದಿಲ್ಲ..

ಸದ್ಯಕ್ಕೆ ಮೈತ್ರಿ ಸರ್ಕಾರ ಕೆಡವುದೊಂದೇ ಬಿಜೆಪಿ ನಾಯಕರ ಗುರಿ..ಈ ಬಾರಿಯ ಬಜೆಟ್ ಅಧಿವೇಶನಕ್ಕೂ ಮುನ್ನ ಮೈತ್ರಿ ಸರ್ಕಾರ ಬೀಳಿಸಬೇಕೆಂಬುದೇ ಬಿಜೆಪಿ ನಾಯಕರ ಉದ್ದೇಶ..10ಕ್ಕೂ ಹೆಚ್ಚು ಶಾಸಕರ ರಾಜೀನಾಮೆ ಕೊಡಿಸಿ ಸರ್ಕಾರ ಅಲ್ಪಮತಕ್ಕೆ ಕುಸಿಯುವಂತೆ ಮಾಡುವುದು ಸದ್ಯದ ಪ್ಲಾನ್..ಲೋಕಸಭೆ ಚುನಾವಣೆವರೆಗೆ ರಾಜ್ಯಪಾಲರ ಆಡಳಿತ ಇರುವಂತೆ ಬಿಜೆಪಿ ಪ್ಲಾನ್ ಮಾಡಿದೆ..

ಅದಕ್ಕೆ ಜನವರಿ 19 ಅಥವಾ 20ಕ್ಕೆ ಡೇಟ್ ಫಿಕ್ಸ್ ಆಗಿದೆ ಎನ್ನಲಾಗಿದೆ.. ಲೋಕಸಭೆ ಚುನಾವಣೆವರೆಗೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದರೆ, ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿಯುತ್ತಾರೆ..ಇದ್ರಿಂದ ಕರ್ನಾಟಕದಲ್ಲಿ ಬಿಜೆಪಿಗೆ ಬಾರಿ ಹಿನ್ನಡೆಯಾಗಲಿದೆ..ಒಂದು ಕಡೆ ರಾಜ್ಯದಲ್ಲಿ ಸರ್ಕಾರವೂ ಮತ್ತೆ ಭದ್ರವಾಗುತ್ತದೆ..

ಹೀಗಾಗಿ ಇದೇ ಸರಿಯಾದ ಸಮಯ ಅಂತ ಬಿಜೆಪಿ ನಾಯಕರು ಮುಹೂರ್ತ ಫಿಕ್ಸ್ ಮಾಡಿದ್ದಾರೆ..ಹೀಗಾಗಿ ಸದ್ಯ ಸರ್ಕಾರ ರಚನೆ ಉದ್ದೇಶ ಬಿಜೆಪಿ ನಾಯಕರಿಗಿಲ್ಲ..ರಾಜ್ಯಪಾಲರ ಆಡಳಿತ ಬಂದು ಆರು ತಿಂಗಳ ಬಳಿಕ ನಿಧಾನವಾಗಿ ಸರ್ಕಾರ ರಚನೆ ಮಾಡುವುದೇ ಕರ್ನಾಟಕದ ಮಟ್ಟಿಗೆ ಬಿಜೆಪಿಯ ಅಂತಿಮ ಗುರಿ..ಕಾರಣ ಸರ್ಕಾರ ರಚಿಸಿ ಮತ್ತೆ ಬಹುಮತ ಸಾಬೀತು ಮಾಡುವುದು ಅಷ್ಟು ಸುಲಭವಲ್ಲ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಿದೆ..

LEAVE A REPLY

Please enter your comment!
Please enter your name here