Home District BJP ತೆಕ್ಕೆಗೆ JDS ಶಾಸಕ..!? BJP ನ ಕಟ್ಟಿ ಹಾಕಲು ಸ್ವತಃ ಫೀಲ್ಡಿಗಿಳಿದ HDK? ತಮ್ಮ...

BJP ತೆಕ್ಕೆಗೆ JDS ಶಾಸಕ..!? BJP ನ ಕಟ್ಟಿ ಹಾಕಲು ಸ್ವತಃ ಫೀಲ್ಡಿಗಿಳಿದ HDK? ತಮ್ಮ ಬತ್ತಳಿಕೆಯಲ್ಲಿದ್ದ ಒಂದೊಂದೆ ಅಸ್ತ್ರ ಬಳಕೆ ಮಾಡುಲು HDK ಸಜ್ಜು?

628
0
SHARE

ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಯಡಿಯೂರಪ್ಪ ಡೀಲ್ ಮಾಡಿರುವ ಆಡಿಯೋ ಸಿಎಂ ಬಿಡುಗಡೆ ಮಾಡಿದ್ದಾರೆ.ಈ ಮೂಲಕ ಬಿಜೆಪಿ ಆಪರೇಷನ್ ಕಮಲಕ್ಕೆ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ ಆಪರೇಷನ್ ಕಮಲದ ಭೀತಿ ಮೈತ್ರಿ ಸರ್ಕಾರಕ್ಕೆ ಇನ್ನು ಕಡಿಮೆಯಾಗಿಲ್ಲ.ಆದರಲ್ಲೂ ಕೆ ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣ ಗೌಡ ದೋಸ್ತಿ ಸರ್ಕಾರಕ್ಕೆ ಕೈ ಕೊಡಲು ಮುಂದಾಗಿದ್ರು.ಕಳೆದ ಐದು ದಿನದ ಹಿಂದೆಯೇ ಜೆಡಿಎಸ್ ಶಾಸಕ ನಾರಾಯಣಗೌಡ ಮುಂಬೈನಲ್ಲಿ ಅತೃಪ್ತ ಕಾಂಗ್ರೆಸ್ ಶಾಸಕರ ಗೂಡು ಸೇರಿದ್ದರು.ನಾರಾಯಣಗೌಡ ಬಿಜೆಪಿ ತೆಕ್ಕೆಗೆ ಒಳಗಾಗಲು ಪ್ರಬಲ ಕಾರಣ ಇದೆ.

ಆ ಎಕ್ಸ್ ಕ್ಲೂಸಿವ್ ಮಾಹಿತಿ ಪ್ರಜಾಟಿವಿಗೆ ಸಿಕ್ಕಿದೆ.ಬಿಜೆಪಿ ಕಟ್ಟಿಹಾಕಲು ಫೀಲ್ಡಿಗಿಳಿದ ಸಿಎಂ ಕುಮಾರಸ್ವಾಮಿ.ಪ್ರತಿದಿನ ಒಂದೊಂದು ಸಿಡಿ ಬಿಡುಗಡೆ ಮಾಡಲು ತೀರ್ಮಾನ.ಈ ಮೂಲಕ ಆಪರೇಷನ್ ಕಮಲ ಬಹಿರಂಗ ಪಡಿಸುವ ಯತ್ನ.ರಾಜ್ಯ ಜನತೆ ಎದುರು ಬಿಜೆಪಿ ತಲೆ ತಗ್ಗಿಸುವಂತೆ ಮಾಡಲು ಪ್ಲ್ಯಾನ್.ಹೆಚ್‌ಡಿಕೆ ಮಾಸ್ಟರ್ ಸ್ಟ್ರೋಕ್‌ನಿಂದ ಥಂಡಾ ಹೊಡೆದ ಕಮಲ ಪಕ್ಷ.

ದಳಪತಿ ಬಳಿ ಇದೆ ಮತ್ತೊಂದು ಸ್ಫೋಟಕ ಸಿಡಿ?ಕೆ.ಆರ್. ಪೇಟೆ ನಾರಾಯಣಗೌಡಗೆ ಆಫರ್ ನೀಡಿದ ಮಾಹಿತಿ.ಜೆಡಿಎಸ್ ಶಾಸಕನಿಗೆ 30 ಕೋಟಿ ಆಮಿಷವೊಡ್ಡಿದ ಬಿಜೆಪಿ.ಕರ್ನಾಟಕಕ್ಕೆ ನೀವು ಮತ್ತೆ ಹೋಗಬೇಡಿ.ನಿಮ್ಮನ್ನು ಮಹಾರಾಷ್ಟ್ರದಲ್ಲೇ ಎಂಎಲ್‌ಸಿ ಮಾಡುತ್ತೇವೆ.ಹೇಗಿದ್ದರೂ ನಿಮ್ಮ ವ್ಯಾಪಾರ ವಹಿವಾಟು ಇರುವುದು ಮುಂಬೈನಲ್ಲಿ.ನಿಮ್ಮ ಹೋಟೆಲ್ ಉದ್ಯಮಕ್ಕೆ ಬಿಜೆಪಿ ಬೆಂಬಲ ನೀಡುತ್ತೆ.ಕೆ.ಆರ್.ಪೇಟೆ ಶಾಸಕಗೆ ಆಮಿಷವೊಡ್ಡಿದ್ದ ಬಿಜೆಪಿ.

LEAVE A REPLY

Please enter your comment!
Please enter your name here