Home District BJP ನನಗೆ 30 ಕೋಟಿ ಆಫರ್ ಕೊಟ್ಟಿತ್ತು, ಲಕ್ಷ್ಮೀ ಹೆಬ್ಬಾಳ್ಕರ್ “ಆಪರೇಶನ್ ಕಮಲ” ಬಾಂಬ್.! “ನಿಮ್ಮನ್ನ...

BJP ನನಗೆ 30 ಕೋಟಿ ಆಫರ್ ಕೊಟ್ಟಿತ್ತು, ಲಕ್ಷ್ಮೀ ಹೆಬ್ಬಾಳ್ಕರ್ “ಆಪರೇಶನ್ ಕಮಲ” ಬಾಂಬ್.! “ನಿಮ್ಮನ್ನ ಮಂತ್ರಿ ಮಾಡ್ತೀವಿ”…

476
0
SHARE

ಬಿಜೆಪಿ ಆಪರೇಶನ್ ಕಮಲ ವಿಚಾರ…ಬಿಜೆಪಿಯವರು ನನಗೆ 30 ಕೋಟಿ ಹಣದ ಆಮಿಷ ಒಡ್ಡಿದ್ದಾರೆ ಎಂದ ಲಕ್ಷ್ಮಿ ಹೆಬ್ಬಾಳ್ಕರ್… ಕಾಂಗ್ರೆಸ್‌ ಶಾಸಕರು ಗಟ್ಟಿಯಾಗಿರುತ್ತಾರೆ ಎಂದು ಬಿಜೆಪಿಗೆ ಟಾಂಗ್…ಬಿಜೆಪಿಯವರು ನನಗೂ ಮೂವತ್ತು ಕೋಟಿ ಹಣ ಮತ್ತು ಸಚಿವ ಸ್ಥಾನ ನೀಡ್ತಿನಿ ಅಂತಾ ಆಮಿಷ ಒಡ್ಡಿದ್ದರು ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಾಂಬ್ ಸಿಡಿಸಿದ್ದಾರೆ..

ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯಿಂದ ಕೈ ಶಾಸಕರಿಗೆ ಆಮಿಷ ಒಡ್ಡಿರುವ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. ನನ್ನನ್ನೂ ಸೇರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರುಗಳಿಗೆ ಬಿಜೆಪಿಯವರು ಹಣದ ಆಮಿಷ ಒಡ್ಡಿದ್ದಾರೆ..

ಮೂವತ್ತು ಕೋಟಿ ಹಣದ ಆಮಿಷ ಮತ್ತು ಸಚಿವ ಸ್ಥಾನ ನೀಡ್ತಿನಿ ಅಂತಾ ಬಿಜೆಪಿಯವರು ಕರೆದಿದ್ರು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಬಾಂಬ್ ಸಿಡಿಸಿದ್ದಾರೆ. ಆದರೆ, ನಾನು ಬಿಜೆಪಿ ಹೋಗಲಿಲ್ಲ.
ನನಗೆ ಬಂದ ಮೆಸೇಜ್ ಗಳನ್ನು ಪೋನ ಕಾಲ್ ಗಳನ್ನು ಪಕ್ಷದ ಮುಖಂಡರಿಗೆ ತೋರಿಸಿದ್ದೇನೆ.
ನಮ್ಮ ಶಾಸಕರು ಗಟ್ಟಿಯಾಗಿದ್ದಾರೆ. ಎಲ್ಲಿಯೂ ಹೊಗಲ್ಲ. ಸರ್ಕಾರ ಸುಭದ್ರವಾಗಿರುತ್ತೆ. ಅಂತಾ ಹೇಳಿದ್ದಾರೆ..

LEAVE A REPLY

Please enter your comment!
Please enter your name here