Home District BJP ನಾಯಕರಿಂದ ಮತ್ತೆ ಆಪರೇಷನ್ ಕಮಲದ ಪ್ರಯತ್ನ? 30 ಕೋಟಿ ಹಣ ನೀಡಿ ಶಾಸಕರ ಖರೀದಿಗೆ...

BJP ನಾಯಕರಿಂದ ಮತ್ತೆ ಆಪರೇಷನ್ ಕಮಲದ ಪ್ರಯತ್ನ? 30 ಕೋಟಿ ಹಣ ನೀಡಿ ಶಾಸಕರ ಖರೀದಿಗೆ ಯತ್ನದ ಆರೋಪ..! ಕುದುರೆ ವ್ಯಾಪಾರಕ್ಕೆ ನಿಂತ ಬಿಜೆಪಿ ಅಂತ ಸಿದ್ದರಾಮಯ್ಯ ಕಿಡಿ..1

1559
0
SHARE

ರಾಜ್ಯ ರಾಜಕಾರಣದಲ್ಲಿ ಮತ್ತೆ ಒಂದಿಷ್ಟು ಕಂಪನಗಳು ಸಂಭವಿಸುವ ಲಕ್ಷಣಗಳು ಕಾಣುತ್ತಿವೆ.. ಬಿಜೆಪಿ ನಾಯಕರು ಮತ್ತೆ ಆಪರೇಷನ್ ಕಮಲಕ್ಕೆ ಚಾಲನೆ ನೀಡಿರುವ ಬಗ್ಗೆ ಅನುಮಾನ ದಟ್ಟವಾಗುತ್ತಿದೆ.. ಆಪರೇಷನ್ ಕಮಲದ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿದ ಬಳಿಕ ಕಾಂಗ್ರೆಸ್ ನಾಯಕರು ಜಾಗ್ರತರಾಗಿದ್ದಾರೆ.. ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ 25 ಕೋಟಿಯಿಂದ 30 ಕೋಟಿ ಹಣ ನೀಡಿ ಖರೀದಿಸಲು ಮುಂದಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ..

ಶಾಸಕರ ಸೆಳೆಯುವ ಬಿಜೆಪಿ ಪ್ರಯತ್ನದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರೂ ಕೂಡ ಹೇಳಿಕೆ ನೀಡಿದ್ದಾರೆ.. ಇನ್ನು ಆಪರೇಷನ್ ಕಮಲ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಹೇಳಿದ್ದಾರೆ ಅಂದರೆ ಸತ್ಯಾಂಶ ಇದ್ದೇ ಇರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.ರಾಜ್ಯದಲ್ಲಿ ಸರ್ಕಾರ ರಚನೆಗೆ ಮತ್ತೆ ಬಿಜೆಪಿ ನಾಯಕರು ಪ್ರಯತ್ನ ಆರಂಭಿಸಿದ್ದಾರೆಯೇ ಎಂಬ ಅನುಮಾನ ದಟ್ಟವಾಗುತ್ತಿದೆ..ಆಡಳಿತಾರೂಢ ಮೈತ್ರಿ ಪಕ್ಷಗಳ ಶಾಸಕರನ್ನು ಸೆಳೆಯಲು ಆಪರೇಷನ್ ಕಮಲಕ್ಕೆ ಮತ್ತೆ ಚಾಲನೆ ನೀಡಿದೆ ಎಂಬ ಮಾಹಿತಿಗಳು ಹರಿದಾಡುತ್ತಿವೆ..

ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರೆಲ್ಲ ದೆಹಲಿಯಲ್ಲೇ ಬೀಡು ಬಿಟ್ಟಿರುವುದು ಮತ್ತೊಂದೆಡೆ ಕಾಂಗ್ರೆಸ್ ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲ ಶಾಸಕರು ಸಂಪರ್ಕಕ್ಕೆ ಸಿಗದಿರುವುದು ಅನುಮಾನಗಳಿಗೆ ಪುಷ್ಠಿ ನೀಡುತ್ತಿವೆ..ಈ ಬಾರಿ ತುಂಬಾ ಹುಷಾರಾಗಿಯೇ ಬಿಜೆಪಿ ನಾಯಕರು ಪ್ಲಾನ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಮೈತ್ರಿ ಪಕ್ಷಗಳ ನಾಯಕರಿಗೆ ಸಿಕ್ಕಿದೆ..

ಹೀಗಾಗಿಯೇ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಟ್ವೀಟ್ ಕೂಡ ಮಾಡಿದ್ದಾರೆ..ಟ್ವಿಟರ್ ನಲ್ಲಿ ನೇರವಾಗಿಯೇ ಆಪರೇಷನ್ ಕಮಲದ ಬಗ್ಗೆ ಅವರು ಗಂಭೀರ ಆರೋಪ ಮಾಡಿದ್ದಾರೆ..ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ, ಪ್ರತಿ ಶಾಸಕರಿಗೆ 25ರಿಂದ 30 ಕೋಟಿ ಹಣ ನೀಡಿ ಖರೀದಿಸಲು ಮಂದಾಗಿದೆ ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ..ಅಂದರೆ ಸಿದ್ದರಾಮಯ್ಯನವರಿಗೆ ಬಿಜೆಪಿಯವರ ಕಾರ್ಯತಂತ್ರಗಳ ಬಗ್ಗೆ ಪಕ್ಕಾ ಮಾಹಿತಿ ಎಂಬುದು ದೃಢವಾಗಿದೆ..

ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕರಿಗೆ 25 ಕೋಟಿ, 30 ಕೋಟಿ ಆಫರ್ ಮಾಡ್ತೀವಿ ಅಂತಾರಲ್ಲ, ಎಲ್ಲಿಂದ ಬರುತ್ತೆ ಕೋಟಿ ಕೋಟಿ ಹಣ ಎಂದು ಪ್ರಶ್ನಿಸಿದ್ದಾರೆ..ಇವರೆಲ್ಲ ಭ್ರಷ್ಟರು, ಅದಕ್ಕೆ ಇಂತಹ ಪ್ರಯತ್ನ ಮಾಡ್ತಾ ಇದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ..ಬಿಜೆಪಿ ಆಪರೇಷನ್ ಬಗ್ಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ..

ಲೋಕಸಭೆ ಚುನಾವಣೆಗೆ ಮುನ್ನವೇ ಬಿಜೆಪಿ ಸರ್ಕಾರ ಬರುತ್ತದೆ ಅಂತ ಬಿಂಬಿಸಿಕೊಳ್ಳುತ್ತಿದ್ದಾರೆ.. ನಮ್ಮ ಶಾಸಕರನ್ನು ಸೆಳೆಯುವಂತಹ ಪ್ರಯತ್ನ ನಡೆದಿದೆ..ಆದ್ರೆ ಅದರಲ್ಲಿ ಯಶಸ್ವಿಯಾಗಲ್ಲ.. ಸರ್ಕಾರ ಗಟ್ಟಿಯಾಗಿದೆ ಎಂದು ಹೇಳಿದ್ದಾರೆ…ಇನ್ನು ದೆಹಲಿಯಲ್ಲಿ ಬೀಡು ಬಿಟ್ಟಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿರೋದೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ..ನಾವು ಬಂದಿರೋದು ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಅಂತ ಹೇಳುತ್ತಿದ್ದಾರೆ..ಆದ್ರೆ ಬಿಜೆಪಿ ನಾಯಕರು ಮೈತ್ರಿ ಪಕ್ಷಗಳ ನಾಯಕರ ಅನುಮಾನಕ್ಕಂತೂ ಗುರಿಯಾಗಿದ್ದಾರೆ…

LEAVE A REPLY

Please enter your comment!
Please enter your name here