Home District BJP ಪಾಳೆಯದಲ್ಲಿ ನೀರವ ಮೌನ..! ರಾಜ್ಯ ಚುನಾವಣಾ ಇತಿಹಾಸದಲ್ಲೇ ಇಂತಹದೊಂದು ಬೆಳವಣಿಗೆ ಇದೇ ಮೊದಲು…ಕುತೂಹಲ ಕಳೆದುಕೊಂಡ...

BJP ಪಾಳೆಯದಲ್ಲಿ ನೀರವ ಮೌನ..! ರಾಜ್ಯ ಚುನಾವಣಾ ಇತಿಹಾಸದಲ್ಲೇ ಇಂತಹದೊಂದು ಬೆಳವಣಿಗೆ ಇದೇ ಮೊದಲು…ಕುತೂಹಲ ಕಳೆದುಕೊಂಡ ರಾಮನಗರ ಚುನಾವಣೆ…

1567
0
SHARE

ರಾಮನಗರ ಉಪಚುನಾವಣೆ ಕಣದಲ್ಲಿ ಉಪಚುನಾವಣೆ ಕುತೂಹಲ ಕಳೆದುಕೊಂಡಿದೆ. ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್ ಮಾತೃ ಪಕ್ಷ ಕಾಂಗ್ರೆಸ್ ಗೆ ಮರಳಿ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಬೆಂಬಲಕ್ಕೆ ನಿಂತಿದ್ದು, ಬಹುತೇಕ ಅನಿತಾ ಗೆಲುವು ನಿಶ್ಚಿತ ಎಂಬ ಗುಸುಗುಸು ಕೇಳಿಬರುತ್ತಿದೆ. ಇಷ್ಟೆಲ್ಲಾ ಬೆಳವಣಿಗೆಗಳಿಂದ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರು ಈಗಲೇ ಸಂಭ್ರಮಾಚರಣೆಯಲ್ಲಿದ್ದಾರೆ.ರಾಮನಗರ ಉಪಸಮರಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಶಸ್ತ್ರ ತ್ಯಜಿಸಿ ಮರಳಿ ಮಾತೃಪಕ್ಷ ಕಾಂಗ್ರೆಸ್ ಗೆ ಹಿಂತಿರುಗಿದ್ದಾರೆ..

ಹೀಗಾಗಿ ರಾಮನಗರ ಚುನಾವಣೆ ಕುತೂಹಲ ಕಳೆದುಕೊಂಡಿದೆ . ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಕಣದಲ್ಲಿದ್ದಾರೆ… ಆದ್ರೆ ಅವರಿಗೆ ಪ್ರಬಲ ಎದುರಾಳಿಯೇ ಇಲ್ಲ ಕಣದಲ್ಲಿ… ಈ ಬೆಳವಣಿಗೆ ಖುದ್ದು ರಾಮನಗರ ಕ್ಷೇತ್ರದ ಜನರಿಗೆ ಶಾಕ್ ನೀಡಿದೆ.ಬಹಿರಂಗ ಪ್ರಚಾರಕ್ಕೆ ನಿನ್ನೆ ತೆರೆಬಿದ್ದ ಬಳಿಕ ಮನೆ ಮನೆಗೆ ತೆರಳಿ ಮತ ಕೇಳಲು ದೋಸ್ತಿ ಪಕ್ಷಗಳಲ್ಲಿ ಮತ್ತು ಬಿಜೆಪಿಯಲ್ಲಿ ಅಷ್ಟು ಉತ್ಸಾಹ ಕಾಣಲಿಲ್ಲ. ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದೇ ಅನಿತಾಕುಮಾರಸ್ವಾಮಿ ಅವರ ಗೆಲುವು ಖಚಿತ ಅನ್ನೋ ಭಾವನೆ ಮತ್ತು ಲೆಕ್ಕಾಚಾರ ಕ್ಷೇತ್ರದಲ್ಲಿದೆ..

ಕಾಂಗ್ರೆಸ್-ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಯುದ್ಧಕ್ಕೂ ಮುನ್ನ ಗೆದ್ದ ಸಂಭ್ರಮದಲ್ಲಿದ್ದಾರೆ … ಆದ್ರೆ ಬಿಜೆಪಿ ಪಾಳೆಯದಲ್ಲಿ ನೀರವ ಮೌನ ಆವರಿಸಿದೆ…ಪರಿಸ್ಥಿತಿ ಬಿಜೆಪಿಗೆ ಪೂರಕವಾಗಿಲ್ಲದಿದ್ದರೂ ಕಮಲದ ಗುರುತಿಗೆ ಮತದಾನ ಮಾಡುವಂತೆ ವಿನೂತನವಾಗಿ ಮಾದರಿ ಮತಪತ್ರ ಹೊರಡಿಸುವ ಮೂಲಕ ಮತದಾರರಲ್ಲಿ ಮನವಿ ಮಾಡುತ್ತಿದೆ. ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಸ್ಪರ್ಧೆಯಿಂದ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಪಕ್ಷವು ಕಮಲದ ಗುರುತಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡುತ್ತಿದೆ.

ಆ ಮೂಲಕ ನಂಬಿಕೆ ದ್ರೋಹಿಗಳಿಗೆ, ಸ್ವಹಿತಾಸಕ್ತಿಗಾಗಿ ಸಮಾಜದ ದಾರಿ ತಪ್ಪಿಸುವವರಿಗೆ ರಾಮನಗರದ ಜನತೆ ತಕ್ಕ ಪಾಠ ಕಲಿಸಬೇಕೆಂದು ವಿನಂತಿಸಿರುವ ಸಾಲುಗಳನ್ನು ಮುದ್ರಿಸಿ ಹೊಸ ಮಾದರಿ ಮತಪತ್ರ ಮುದ್ರಿಸಲಾಗಿದೆ.ಈ ಬೆಳವಣಿಗೆಗಳ ನಡುವೆ ರಾಮನಗರ ಚುನಾವಣೆಯನ್ನು ತಡೆ ಹಿಡಿಯಬೇಕೆಂದು ಒತ್ತಾಯಿಸಿ ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ, ಎಸ್ ಸಿ ಮೋರ್ಚಾದ ಚಿ.ನಾ.ರಾಮು ಹಾಗೂ ಹಿರಿಯ ವಕೀಲ ವಿವೇಕ್ ರೆಡ್ಡಿಯವರನ್ನು ಒಳಗೊಂಡ ಬಿಜೆಪಿ ನಿಯೋಗ ರಾಜ್ಯದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತು.

ಚುನಾವಣೆಗೆ ಕೇವಲ 24 ಗಂಟೆಗಳು ಬಾಕಿ ಇರುವ ಸಂದರ್ಭದಲ್ಲಿ ಅಭ್ಯರ್ಥಿಯೇ ಪಕ್ಷಾಂತರ ಮಾಡಿ, ಚುನಾವಣಾ ಕಣದಿಂದ ಹಿಂದೆ ಸರಿದಿರುವುದು ರಾಜ್ಯದ ಚುನಾವಣಾ ಇತಿಹಾಸದಲ್ಲೇ ಇದೇ ಮೊದಲು. ಚುನಾವಣಾ ಅಕ್ರಮದ ಆರೋಪದ ಮೇಲೆ ಚುನಾವಣಾ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಇನ್ನೂ ಚಂದ್ರಶೇಖರ್ ಕೊನೆ ಘಳಿಗೆಯಲ್ಲಿ ಬಿಜೆಪಿ ಕೈ ಕೊಡಲು ಕಾರಣ ಕೋಟಿ ಕೋಟಿ ಹಣ ಅನ್ನೋ ಗುಸು ಗುಸು ರಾಮನಗರದಲ್ಲಿ ಕೇಳಿ ಬರುತ್ತಿದೆ… ಚುನಾವಣಾ ಕಣದಿಂದ ಹಿಂದೆ ಸರಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಚಂದ್ರಶೇಖರ್ ಗೆ 5ಕೋಟಿ ಹಣ ನೀಡಿದೆ ಎಂಬ ಆರೋಪ ಇದೆ.. ಏನೇ ಇರಲಿ ರಾಜ್ಯ ಚುನಾವಣಾ ಇತಿಹಾಸದಲ್ಲೇ ಇಂತಹದೊಂದು ಬೆಳವಣಿಗೆ ಇದೇ ಮೊದಲು…

LEAVE A REPLY

Please enter your comment!
Please enter your name here