Home District BJP ಭದ್ರಕೋಟೆಯನ್ನು ಉಳಿಸಿಕೊಂಡ BSY..! ತೀವ್ರ ಪೈಪೋಟಿ ನೀಡಿದ್ದ ಮಧು ಬಂಗಾರಪ್ಪ ಪರಾಭವ..!! “ನಾನ್ ಹೆದರೊಲ್ಲ,...

BJP ಭದ್ರಕೋಟೆಯನ್ನು ಉಳಿಸಿಕೊಂಡ BSY..! ತೀವ್ರ ಪೈಪೋಟಿ ನೀಡಿದ್ದ ಮಧು ಬಂಗಾರಪ್ಪ ಪರಾಭವ..!! “ನಾನ್ ಹೆದರೊಲ್ಲ, BJP ಯವರು ಹೆದರಬೇಕು ಅಷ್ಟೇ”-ಮಧು ಬಂಗಾರಪ್ಪ

928
0
SHARE

ದೇಶದ ಗಮನ ಸಳೆದಿದ್ದ ಶಿವಮೊಗ್ಗ ಲೋಕಸಭೆ ಉಪಚುನಾವಣೆಯಲ್ಲಿ ಕೊನೆಗೂ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ 52142 ಮತಗಳ ಅಂತರದಿಂದ ಪ್ರತಿಸ್ಪರ್ಥಿ ಕಾಂಗ್ರೇಸ್ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಮದು ಬಂಗಾರಪ್ಪ ಎದುರು ಬರ್ಜರಿ ಗೆಲುವು ಸಾಧಿಸಿದ್ದಾರೆ.ಶಿವಮೊಗ್ಗ ಲೋಕಸಭೆ ಕ್ಷೇತ್ರದ ಒಟ್ಟು 16,45,059 ಮತದಾರರಲ್ಲಿ 10,71.099 ಮತದಾರರು ಮತದಾನ ಮಾಡುವ ಮೂಲಕ ಇಬ್ಬರು ಅಬ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಮುನ್ನುಡಿ ಬರೆದಿದ್ದರು.

ಇಂದು ಮತದಾರನ ತೀರ್ಪು ಹೊರಬಂದಿದ್ದು,ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ 5,43,283 ಮತಗಳನ್ನು ಪಡೆದರೆ,ಮಧು ಬಂಗಾರಪ್ಪ 4,91,141 ಮತಗಳನ್ನು ಪಡೆದಿದ್ದು,52,142 ಮತಗಳ ಅಂತರದಿಂದ ರಾಘವೇಂದ್ರ ಗೆಲುವು ಸಾಧಿಸಿದ್ದಾರೆ.ಒಟ್ಟು 14 ಸುತ್ತಿನಲ್ಲಿ ನಡೆದ ಮತ ಎಣಿಕೆಯಲ್ಲಿ ಆರಂಭದ ನಾಲ್ಕು ಸುತ್ತಿನಲ್ಲಿ ಮಧು ಬಂಗಾರಪ್ಪ ,ಬಿಜೆಪಿಗೆ ತೀವೃ ಪೈಪೋಟಿಯನ್ನೇ ನೀಡಿದ್ದರು.ಫಲಿತಾಂಶ ನೆಕ್ ಟು ನೆಕ್ ಎಂದೇ ಅರ್ಥೈಸಲಾಗಿತ್ತು.

ಆದರೆ ಮತ ಎಣಿಕೆ ಐದು ಸುತ್ತು ದಾಟಿದ ನಂತರ ಬಿಜೆಪಿ ಮತಗಳನ್ನು ಪಡೆಯುವ ವೇಗ ಹೆಚ್ಚಿತು. ಅಂತಿಮವಾಗಿ 14 ಸುತ್ತಿಗೆ ಬರುವಾಗ ಮಧು ಬಂಗಾರಪ್ಪ ಎದುರು ರಾಘವೇಂದ್ರ 52 ಸಾವಿರ ಅಂತರದ ಗೆಲುವು ಸಾಧಿಸಿದರು.ಗೆಲುವು ಸಾಧಿಸಿದ ನಂತರ ರಾಘವೇಂದ್ರ ವಿಜಯದ ನಗೆ ಬೀರಿದರು.ನಂತರ ಮತದಾರರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಇನ್ನು ಚುನಾವಣೆಯಲ್ಲಿ ಸೋಲನುಭವಿಸಿದ,ಮಧು ಬಂಗಾರಪ್ಪ ಸೋಲನ್ನು ನೈತಿಕ ಗೆಲುವೆಂದು ಹೇಳಿದ್ದಾರೆ.ಚುನಾವಣೆ ಸಂದರ್ಭದಲ್ಲಿ ನಮಗೆ ಕಡಿಮೆ ಅವದಿ ಸಿಕ್ಕಿದ್ದು, ಮತದಾರರನ್ನು ತಲುಪಲು ಸಾಧ್ಯವಾಗಲಿಲ್ಲ.ಗೆಲ್ಲುವ ವಿಶ್ವಾಸವಿತ್ತು.ಆದರೆ ಮತದಾರರ ತೀರ್ಪಿಗೆ ತಲೆಬಾಗುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ.ಜನರು ಕಳೆದ ಚುನಾವಣೆಯ ಫಲಿತಾಂಶ ನೋಡಿದರೆ.ಈ ಬಾರಿ ಹೆಚ್ಚಿನ ಮತಗಳನ್ನು ನೀಡಿದ್ದಾರೆ.ಸೋಲನ್ನು ಒಪ್ಪಿಕೊಂಡು,ಚುನಾವಣೆಗೆ ಮತದಾರರಿಗೆ ನೀಡಿದ ಅಶ್ವಾಸನೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಓಡಾಡುತ್ತೇನೆ.ಮುಂದಿನ ಲೋಕಸಭೆ ಚುನಾವಣೆಗೆ ಅಣಿಯಾಗುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಬಿಜೆಪಿ ಪಕ್ಷದ ವತಿಯಿಂದ ಗೆಲುವು ಸಾಧಿಸಿದ ಬಿ.ವೈ ರಾಘವೇಂದ್ರಗೆ ಸಂಭ್ರಮದ ಸಭೆಯನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಕೆ|ಎಸ್.ಈಶ್ವರಪ್ಪ ಪಾಲ್ಗೊಂಡಿದ್ದರು.ನಂತರ ಮಾತನಾಡಿದ ಯಡಿಯೂರಪ್ಪ,ಈ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದ ಕಾಂಗ್ರೇಸ್ ಜೆಡಿಎಸ್ ನಾಯಕರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.ಬಳ್ಳಾರಿ ಮತ್ತು ಜಮಖಂಡಿ ಸೋಲು ನಮಗೆ ನೋವು ತಂದಿದೆ.ಮಂಡ್ಯದಲ್ಲಿ ಹಣ ಮತ್ತು ತೋಳ್ಬಲದಿಂದ ಚುನಾವಣೆ ನಡೆಸಿದ್ರೂ,ನಮ್ಮ ಅಭ್ಯರ್ಥಿ ಉತ್ತಮ ಮತಗಳಿಸಿರುವುದು ಸಂತೋಷ ತಂದಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here