Home District BJP ಮತ್ತು ರಾಮುಲು ವಿರುದ್ಧ ಸಿದ್ದರಾಮಯ್ಯ ವೀರಾವೇಶ..!? “ಅಸೆಂಬ್ಲಿ ಒಳಗೆ ಬಾಯಿ ಬಿಡದಿರೋರು, ಲೋಕಸಭೆಯಲ್ಲಿ...

BJP ಮತ್ತು ರಾಮುಲು ವಿರುದ್ಧ ಸಿದ್ದರಾಮಯ್ಯ ವೀರಾವೇಶ..!? “ಅಸೆಂಬ್ಲಿ ಒಳಗೆ ಬಾಯಿ ಬಿಡದಿರೋರು, ಲೋಕಸಭೆಯಲ್ಲಿ ಬಾಯಿ ಬಿಡ್ತಾರಾ”…

1059
0
SHARE

ಬಳ್ಳಾರಿ ಕಾಂಗ್ರೆಸ್ ಪ್ರಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಶ್ರೀರಾಮುಲು ರಾಜೀನಾಮೆ ಕೊಟ್ಟಿದ್ದರಿಂದ ಉಪಚುನಾವಣೆ ನಡೆಯುತ್ತಿದೆ. ಜನರಿಗೆ ತಿಳಿಸದೇ ರಾಜೀನಾಮೆ ಕೊಟ್ಟಿದ್ದು ಮತದಾರರಿಗೆ ಅಗೌರವ ತೋರಿಸಿದ್ದಾರೆ. ಶ್ರೀರಾಮಲು ಪಾರ್ಲಿಮೆಂಟ್‌ನಲ್ಲಿ ತುಟಿಕ್ ಪಿಟಿಕ್ ಅಂದಿಲ್ಲ..

ಅಸೆಂಬ್ಲಿಯೊಳಗೆ ಬಾಯಿ ಬಿಡದೇ ಇರೋರು ಇನ್ನು ಲೋಕಸಭೆಯಲ್ಲಿ ಬಾಯ್ ಬೀಡ್ತಾರಾ? ಅಸೆಂಬ್ಲಿಗೆನೇ ಬರ್ತಿರಲಿಲ್ಲ. ಹೀಗಾಗಿ ಏನ್ ಮಾಡ್ತಿದ್ದೀಯಾ ಅಂತ ದಾಖಲೆಗಳನ್ನು ಕೇಳಿದ್ದೀನಿ ಅಂತ ಹೇಳಿದ್ದಾರೆ. ಶ್ರೀರಾಮುಲುಗೆ ೩೭೧ಜೆ ಬಗ್ಗೆ ಕೇಳಿದ್ಕೆ ಅವಮಾನ ಮಾಡಿದಂಗೆನಾ? ರೆಡ್ಡಿಗಳು ಜಿಲ್ಲೆಯಲ್ಲಿ ಭಯದ ವಾತಾವರಣ ಮೂಡಿಸಿದ್ರು.

ಆಗ ನಾನು ವಿರೋಧ ಪಕ್ಷದ ನಾಯಕನಾಗಿದ್ದ ವೇಳೆ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಯಾತ್ರೆ ಮಾಡಿದ್ದೆ ಎಂದು ಹೇಳಿದ್ದಾರೆ. ನಾನು ಭಾಗ್ಯಗಳ ಸರದಾದರು. ರೆಡ್ಡಿಗಳು ಜೈಲಿಗೆ ಹೋಗಿದ್ದು ಸುಳ್ಳಾ ಅಂತ ಪ್ರಶ್ನಿಸಿದ್ದಾರೆ.ನಾವು ಭಾಗ್ಯಗಳ ಸರದಾರರು.. ಸಾಲ ಮನ್ನಾ , ಇಂದಿರಾ ಕ್ಯಾಂಟಿನ್ ನಾವು ಮಾಡಿದ್ದು, ರಾಮುಲು ಮಾಡಿದ್ರಾ?

ಬಡವರ ಬಗ್ಗೆ ಕಾಳಜಿ ಇದೇನಾ ಇವರಿಗೆ.. ರೆಡ್ಡಿ ಜೈಲಿಗೊಗಿದ್ದು ಸುಳ್ಳಾ.. ಅದಕ್ಕೆ ನಾನು ಹೇಳೋದು ಅವರಿಗೆ ಫೋರ್ಟ್ಂಟಿ ಕೇಸ್ ಮಾತ್ರ ಗೊತ್ತು.. ೩೭೧ ಜೆ ಗೊತ್ತಿಲ್ಲ ಅವರಿಗೆ. ಜಾತಿ ಹೆಸರು ಹೇಳಿ ರಾಜಕಾರಣ ಮಾಡ್ತಿರೇನ್ರಿ ನೀವು ಎಂದು ರೆಡ್ಡಿ ರಾಮುಲು ಗೆ ಚಾಟಿ ಬೀಸಿದ ಸಿದ್ದರಾಮಯ್ಯ.

ನಮ್ಮ ಅಭ್ಯರ್ಥಿ ಉಗ್ರಪ್ಪ ಗೆ ಆರ್ಥಿಕ ಪರಿಸ್ಥಿತಿ, ವಿದೇಶಾಂಗ ನೀತಿ , ಸಂವಿಧಾನ ಗೊತ್ತಿದೆ. ಇದೆಲ್ಲಾ ಶಾಂತ, ಶ್ರೀರಾಮುಲು ಗೆ ಗೊತ್ತಿದೆನಾ. ಮೋದಿ ಕೈ ಬಲಪಡಿಸಲು ಶಾಂತಗೆ ಓಟ್ ಹಾಕಿ ಅಂತಾರೆ, ನಾವು ಬಡವರ ಸಮಸ್ಯೆಗಳ ಪರಿಹಾರಕ್ಕೆ ಓಟ್ ಕೋಡಿ ಅಂತ ಹೇಳ್ತಿವಿ.

ಅಚ್ಚೆ ದೀನ್ ಯಾರಿಗೆ ಬಂದಿದೆ. ಕ್ರೂಡ್ ಆಯಿಲ್ ಬೆಲೆ ಎಷ್ಟಿದೆ- ಅಂತ ಅವರಿಗೆ ಗೊತ್ತಾ. ಬೆಲೆ ಇಳಿಕೆ ಆಗಬೇಕಾದ್ರೆ ಕಾಂಗ್ರೆಸ್ ಗೆಲ್ಲಿಸಿ, ಮುಂದೆನೂ ಕಾಂಗ್ರೆಸ್ ಗೆಲ್ಲುತ್ತೆ, ರಾಹುಲ್ ಗಾಂಧಿ ಪ್ರಧಾನಿ‌ ಆಗ್ತಾರೆ.

LEAVE A REPLY

Please enter your comment!
Please enter your name here