ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅಭ್ಯರ್ಥಿಯಾಗಿದ್ದೇ ಅಚ್ಚರಿ.. ಅಭ್ಯರ್ಥಿಯಾದ ಮೇಲೆ ಸ್ಥಳೀಯ ಶಾಸಕರು ಬಿಜೆಪಿ ಮುಖಂಡರನ್ನು ಕ್ಯಾರೇ ಅನ್ನದ ಸೂರ್ಯ..
ಈಗಾಗಲೇ ಗೆದ್ದು ಬಿಟ್ಟಿದ್ದೇನೆ ಎಂಬ ರೀತಿಯಲ್ಲಿ ವರ್ತಿಸುತ್ತಿರುವುದು ಬಿಜೆಪಿ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ ..ಹಿರಿಯ ನಾಯಕ ವಿ.ಸೋಮಣ್ಣ ,ಶಾಸಕರಾದ ಸತೀಶ್ ರೆಡ್ಡಿ ,ಉದಯ್ ಗರುಡಾಚಾರ್ ಅಲ್ಲದೇ ಯಾವ ಸ್ಥಳಿಯ ಕಾರ್ಪೋರೆಟರ್ ಗಳನ್ನು ತೇಜಸ್ವಿ ಸೂರ್ಯ ಗಣನೆಗೆ ತೆಗೆದುಕೊಳ್ಳುತ್ತಿಲ್ಲ…
ನಮಗೆ ಯಾರು ಸಪೋರ್ಟ್ ಮಾಡ್ತಾರೊ ಬಿಡ್ತಾರೊ ಅದು ಮುಖ್ಯವೇ ಅಲ್ಲ ಅಂತ ತೇಜಸ್ವಿ ಸೂರ್ಯ ಭಾಷಣ ಹೊಡೆದಿರುವುದು ಈಗ ಬಿಜೆಪಿ ವಲಯದಲ್ಲೇ ವೈರಲ್ ಆಗಿದೆ…ಇದು ಸ್ಥಳೀಯ ಬಿಜೆಪಿ ಮುಖಂಡರನ್ನು ಕೆರಳಿಸಿದೆ. ಇನ್ನು ಮಂಗಳವಾರ ಆಯೋಜಿಸಲಾಗಿರುವ ಅಮಿತ್ ಷಾ ರೋಡ್ ಶೋ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳಲ್ಲೂ ಶಾಸಕರ ,ಕಾರ್ಪೋರೇಟರ್ ಗಳ ಭಾವಚಿತ್ರವನ್ನೂ ಹಾಕಿಸಿಲ್ಲ…
ತೇಜಸ್ವಿನಿ ಅನಂತ ಕುಮಾರ್ ಅವರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗೋಜಿಗೂ ಹೋಗಲಿಲ್ಲ. ಬಿಜೆಪಿ ಗೆಲ್ಲಿಸಲು ಈಗಾಗಲೇ ಜನ ತೀರ್ಮಾನ ಮಾಡಿದ್ದಾರೆ ಅಂತ ಹೇಳಿ ಕೊಂಡು ಎಲ್ಲೆಡೆ ಓಡಾಡುತ್ತಿರುವುದು ಸ್ಥಳೀಯ ನಾಯಕರನ್ನು ಕೆರಳಿಸಿದೆ. ನಾನು ಬರುತ್ತಿರುವುದೇ ನ್ಯೂ ಬೆಂಗಳೂರಿಗಾಗಿ ಅನ್ನೋ ತೇಜಸ್ವಿ ಮಾತು ಕಾರ್ಪೋರೇಟರ್ ಗಳು ,ಶಾಸಕರನ್ನು ಇನ್ನಷ್ಟು ಸಿಟ್ಟಾಗಿಸಿದೆ…
ಇಷ್ಟು ವರ್ಷ ನಾವೇನೂ ಮಾಡೇ ಇಲ್ಲ ಅನ್ನೋ ರೀತಿಯಲ್ಲಿ ತೇಜಸ್ವಿ ಮಾತನಾಡುತ್ತಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ತೇಜಸ್ವಿ ಸೂರ್ಯ ಫಾರ್ ನ್ಯೂ ಬೆಂಗಳೂರು ಎಂಬ ಘೋಷವಾಕ್ಯ ಬಿಜೆಪಿ ಹಿರಿಯರನ್ನು ಇನ್ನಷ್ಟು ಕೆರಳಿಸಿದೆ..ಈ ಘೋಷವಾಕ್ಯ ನೋಡಿ ತೇಜಸ್ವಿನಿ ಅನಂತಕುಮಾರ್ ಬೇಸರಗೊಂಡಿದ್ದಾರೆ…
ಕಳೆದ 6 ಬಾರಿ ಇದೇ ಕ್ಷೇತ್ರವನ್ನು ಪ್ರತಿನಿಧಿಸಿಧದ್ದ ಅನಂತ ಕುಮಾರ್ ಅವರ ಹೆಸರನ್ನೇ ಮರೆಸುವ ರೀತಿಯಲ್ಲಿ ತೇಜಸ್ವಿ ಸೂರ್ಯ ಬಿಂಬಿಸಿಕೊಳ್ಳುತ್ತಿರುವುದು ಮತ್ತು ಹಿಂದೆ ಅನಂತಕುಮಾರ್ ಏನೂ ಕೆಲಸ ಮಾಡಿಯೇ ಇರಲಿಲ್ಲವೇನೊ ಎಂಬ ಭಾವನೆ ಮೂಡಿಸಲು ಪ್ರಯತ್ನಿಸುತ್ತಿರುವುದು ಅವರಿಗೆ ಇಷ್ಟವಾಗುತ್ತಿಲ್ಲ…