ಬಿಜೆಪಿಯಲ್ಲಿ ನಾನು ಸಂಪೂರ್ಣ ಸಕ್ರಿಯವಾಗಿ ಇದ್ದೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,ಕಳೆದ ಚುನಾವಣೆಯಲ್ಲಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾರಣಾಂತರಗಳಿಂದ ಅಧಿಕಾರ ಕೈ ತಪ್ಪಿದೆ. ಮುಂದೆ ಕಾಲವೇ ಇದಕ್ಕೆ ಉತ್ತರ ನೀಡಲಿದೆ.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬುದು ಜನರ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.ಇನ್ನು, ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ನೂರು ದಿನ ಪೂರೈಕೆ ಮಾಡಿದೆ. ಜನ ಅವರ ಅಧಿಕಾರ ಶೈಲಿಯನ್ನು ನೋಡುತಿದ್ದಾರೆ. ಇನ್ನು ಸ್ವಲ್ಪ ದಿನಗಳ ಕಾಲ ಅವಕಾಶ ಕೊಟ್ಟು ನೋಡೋಣ ಎಂದಿದ್ದಾರೆ.
ಸಮ್ಮಿ ಸರ್ಕಾರದಲ್ಲಿ ಅವರವರೇ ಬಡಿದಾಡಿಕೊಂಡಿ ಸಾಯ್ತಿದಾರೆ. ಯಾವೊಬ್ಬ ಸಚಿವರು ಜಿಲ್ಲಾ ಪ್ರವಾಸ ಕೈಗೊಂಡು ಜನರ ಸಮಸ್ಯೆಗಳನ್ನ ಆಲಿಸುತ್ತಿಲ್ಲ ಅಂತಾ ಬಿಜೆಪಿ ರಾಜ್ಯದ್ಯಾಕ್ಚ ಬಿಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಕಷ್ಟಪಟ್ಟು ಸಮನ್ವಯ ಸಮಿತಿ ಸಭೆ ಕರೆದಿದ್ದಾರೆ.. ಅವರಿಗೆ ಅಭಿವೃದ್ದಿ ಬೇಕಾಗಿಲ್ಲ, ನಮ್ಮ ಕುರ್ಚಿ ಸೆಫ್ ಇದ್ದರೆ ಸಾಕು ಅನ್ನೊ ಲೆವಲ್ಗೆ ಇಳಿದಿದ್ದಾರೆ ಎಂದಿದ್ದಾರೆ. ಅತ್ತ ನೀರಾವರಿ ಹಾಗೂ ಪಿಡಬ್ಲ್ಯೂಡಿ ಸಚಿವರು ಕಮಿಷನ್ ಕೇಳ್ತಿದಾರೆ,
ಕಮಿಷನ್ ಕೊಡದೇ ಇದ್ದರೆ ಗುತ್ತಿಗೆದಾರರಿಗೆ ಕೆಲಸ ಮಾಡಲು ಬಿಡುತ್ತಿಲ್ಲ ಅಂತಾ ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನಿರೀಕ್ಷೆಗೂ ಮೀರಿ ಸಾಧನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.