Home District BJP ವಿರುದ್ಧ ಮುನಿಸಿಕೊಂಡ ಕತ್ತಿ ಸಹೋದರರು..!? ಕಾಂಗ್ರೆಸ್‌ನತ್ತ ಮುಖ ಮಾಡ್ತಾರಾ ಉಮೇಶ್ ಮತ್ತು ರಮೇಶ್..!?

BJP ವಿರುದ್ಧ ಮುನಿಸಿಕೊಂಡ ಕತ್ತಿ ಸಹೋದರರು..!? ಕಾಂಗ್ರೆಸ್‌ನತ್ತ ಮುಖ ಮಾಡ್ತಾರಾ ಉಮೇಶ್ ಮತ್ತು ರಮೇಶ್..!?

2362
0
SHARE

ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿರುವ ಚಿಕ್ಕೋಡಿ ಲೋಕಸಭೆ ಚುನಾವಣಾ ರಾಜಕಾರಣ ಏಕಾಏಕಿ ಭಾರೀ ತಿರುವು ಪಡೆದಿದೆ. ಚಿಕ್ಕೋಡಿ ಲೋಕಸಭೆಯ ಬಿಜೆಪಿ ಆಕಾಂಕ್ಷಿಯಾಗಿದ್ದ ರಮೇಶ ಕತ್ತಿ ಇದೀಗ ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ನ ಅಭ್ಯರ್ಥಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಚಿಕ್ಕೋಡಿಯ ಹಾಲಿ ಸಂಸದರಾಗಿರೋ ಪ್ರಕಾಶ್ ಹುಕ್ಕೇರಿ ಬೆಳಗಾವಿಗೆ ಶಿಫ್ಟ್ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು ಇಡೀ ರಾಜಕೀಯ ಚಿತ್ರಣವೇ ಬದಲಾಗುವ ಲಕ್ಷಣಗಳು ಎದುರಾಗಿದ್ದು,ಮಾಜಿ ಸಂಸದರಾಗಿರೋ ರಮೇಶ ಕತ್ತಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ರು, ಈ ಹಿಂದೆ ಬಿಜೆಪಿಯಿಂದಲೇ ಗೆದ್ದು ಸಂಸದರಾಗಿದ್ದ ರಮೇಶ ಕತ್ತಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಎದುರು ಕೇವಲ ಮೂರು ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ರು.

ಹೀಗಾಗಿ ಈ ಭಾರೀಯೂ ತಮಗೆ ಟಿಕೆಟ್ ಸಿಗುತ್ತದೆ ಎಂದು ಕತ್ತಿ ಸಹೋದರರು ಭಾವಿಸಿದ್ದರು. ಆದ್ರೆ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಚಿಕ್ಕೋಡಿ ಬಿಜೆಪಿ ಟಿಕೆಟ್ ಕತ್ತಿ ಕುಟುಂಬದ ಕೈ ತಪ್ಪಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಯವ್ರ ಪತಿ ಅಣ್ಣಾಸಾಹೇಬ್ ಜೊಲ್ಲೆಗೆ ಲಭಿಸಿದ್ದರಿಂದ ಚಿಕ್ಕೋಡಿ ಬಿಜೆಪಿಯಲ್ಲಿ ಸುನಾಮಿ, ಸುಂಟರಗಾಳಿ ಬೀಸತೊಡಗಿವೆ.

ಚಿಕ್ಕೋಡಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ ಕತ್ತಿ ಇದೀಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತಿದ್ದು ರಮೇಶ ಕತ್ತಿ ಕಾಂಗ್ರೆಸ್ ಎಂಟ್ರಿಗೆ ಮಾಜಿ ಸಿಎಂ ಸಿದ್ದರಾಮಯ್ಯನವ್ರೇ ಪೀಠಿಕೆ ಹಾಕಿದ್ದಾರೆ.ಇನ್ನೂ ಈಗಾಗಲೇ ಕಾಂಗ್ರೆಸ್ ಪಕ್ಷ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನ ಘೋಷಿಸಿದೆ.

ಬೆಳಗಾವಿ ಲೋಕಸಭೆಯಿಂದ ಡಾ.ವಿರುಪಾಕ್ಷಿ ಸಾಧುನವರ ಹೆಸರು ಘೋಷಣೆಯಾಗಿದ್ದರೆ ಅತ್ತ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಹೆಸರು ಘೋಷಿಸಲಾಗಿದೆ. ಇವರಲ್ಲಿ ಡಾ.ಸಾಧುನವರ ಈಗಾಗಲೇ ಕಾಂಗ್ರೆಸ್ ಬಿ ಫಾರಂ ಅಂಟಿಸಿ ನಾಮಪತ್ರ ಸಲ್ಲಿಸಿಯೂ ಆಗಿದೆ. ಆದ್ರೆ ಸಿದ್ದರಾಮಯ್ಯ ರಾಜಕೀಯ ಲೆಕ್ಕಾಚಾರವೇ ಬೇರೆಯಾಗಿದ್ದು ಬೆಳಗಾವಿ ಭಾಗದಲ್ಲಿ ಪ್ರಬಲರಾಗಿರೋ ಕತ್ತಿ ಸಹೋದರರನ್ನ ಕಾಂಗ್ರೆಸ್ ಗೆ ಸೆಳೆಯುವುದರಿಂದ ಕಾಂಗ್ರೆಸ್ ನ ಬಲ ಹೆಚ್ಚಾಗಲಿದೆ ಎಂಬ ಹಿನ್ನೆಲೆಯಲ್ಲಿ ಈ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.ಇನ್ನೂ ಈ ಹಿಂದೆ ಬೆಳಗಾವಿ ಲೋಕಸಭೆ ಟಿಕೆಟ್ ನೀಡಿ ಅಂತ ಪಟ್ಟು ಹಿಡಿದಿದ್ದ ಸಂಸದ ಪ್ರಕಾಶ ಹುಕ್ಕೇರಿಯವರನ್ನ ಬೆಳಗಾವಿ ಲೋಕಸಭೆಗೆ ನಿಲ್ಲಿಸಿ ಡಾ.ಸಾಧುನವರ ಅವರಿಂದ ನಾಮಪತ್ರ ಹಿಂದಕ್ಕೆ ಪಡೆಯಿಸಿಕೊಳ್ಳುವುದು,

 ಹಾಗೂ ರಮೇಶ ಕತ್ತಿಯವರನ್ನ ಚಿಕ್ಕೋಡಿಗೆ ನಿಲ್ಲಿಸುವುದು ಸಿದ್ದರಾಮಯ್ಯ ಅವ್ರ ಸದ್ಯದ ಲೆಕ್ಕಾಚಾರವಾಗಿದೆ.ಒಟ್ಟಿನಲ್ಲಿ ಸಿದ್ದರಾಮಯ್ಯ ತಂತ್ರಗಾರಿಕೆ ಬೆಳಗಾವಿ ರಾಜಕಾರಣದಲ್ಲಿ ಸುಂಟರಗಾಳಿಯನ್ನ ಬೀಸುವಂತೆ ಮಾಡಿದ್ದು, ಜಾರಕಿಹೊಳಿ ಸಹೋದರರ ಮುಂದಿನ ನಡೆ ಏನಿರಲಿದೆ ಎಂಬುದು ಮಾತ್ರ ನಿಗೂಢವಾಗಿದೆ. ಆದ್ರೆ ಕತ್ತಿ ಸಹೋದರರ ಕಾಂಗ್ರೆಸ್ ಸೇರ್ಪಡೆಯಿಂದ ಬೆಳಗಾವಿ ರಾಜಕಾರಣದಲ್ಲಿ ಕಾಂಗ್ರೆಸ್ ಬಾಹುಬಲ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ…

LEAVE A REPLY

Please enter your comment!
Please enter your name here