Home District BJP ಸೇರ್ಪಡೆಗೆ BSY ಜತೆ ಎ.ಮಂಜು ಚೌಕಾಸಿ..!? ಚುನಾವಣಾ ಖರ್ಚಿಗೆ 15 ಕೊಟಿ ರೂ.ಗೆ ಡಿಮಾಂಡ್...

BJP ಸೇರ್ಪಡೆಗೆ BSY ಜತೆ ಎ.ಮಂಜು ಚೌಕಾಸಿ..!? ಚುನಾವಣಾ ಖರ್ಚಿಗೆ 15 ಕೊಟಿ ರೂ.ಗೆ ಡಿಮಾಂಡ್ ಇಟ್ಟಿರುವ ಎ.ಮಂಜು..!? ಗೆಲ್ಲುವ ಕ್ಷೇತ್ರಗಳಲ್ಲಿ ಮಾತ್ರ 10 ಕೋಟಿ ವರೆಗೆ ಖರ್ಚು ಮಾಡಲು ಬಿಜೆಪಿ ಸಜ್ಜು..!?

1423
0
SHARE

ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಆಗಬೇಕಾದರೆ, 15 ಕೋಟಿ ರೂ. ಬೇಕಂತೆ. ಹೌದು, ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿರುವ ಮಾಜಿ ಸಚಿವ ಎ.ಮಂಜು ಹಾಗಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದೆ ಡಿಮಾಂಡ್ ಇಟ್ಟಿದ್ದಾರೆ.

ಶುಕ್ರವಾರ, ಹಾಸನ ಶಾಸಕ ಪ್ರೀತಂಗೌಡ ಜತೆ ಯಡಿಯೂರಪ್ಪ ನಿವಾಸಕ್ಕೆ ಬಂದಿದ್ದ ಎ.ಮಂಜು ಮಾತುಕತೆ ವೇಳೆಯಲ್ಲಿ 15 ಕೋಟಿ ರೂ.ಗೆ ಡಿಮಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಹಾಸನದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ನಿಂತಿರೋದು ಪ್ರಜ್ವಲ್ ರೇವಣ್ಣ. ಪ್ರಜ್ವಲ್ ಗೆಲುವಿಗಾಗಿ ದೇವೇಗೌಡರ ಕುಟುಂಬ ಫುಲ್ ಫೋರ್ಸ್ ಹಾಕುತ್ತಿದೆ.

ಹಾಸನ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರಂತೂ ಮಗನ ಗೆಲುವನ್ನು ಪ್ರಸ್ಟೀಜ್ ಇಷ್ಯೂ ಮಾಡಿಕೊಂಡಿದ್ದಾರೆ. ಈಗಾಗಲೇ ಹಾಸನ ಜಿಲ್ಲೆಯಾದ್ಯಂತ ಹಣದ ಹೊಳೆಯೇ ಹರಿಸಲಾಗುತ್ತಿದೆ. ಇದರ ಜತೆಗೆ ರೇವಣ್ಣ, ರಾಜ್ಯ ಸರ್ಕಾರದ ಬಹುತೇಕ ಯೋಜನೆಗಳನ್ನು ಹಾಸನಕ್ಕೆ ಸ್ಯಾಂಕ್ಷನ್ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಪ್ರಜ್ವಲ್ ರೇವಣ್ಣರನ್ನು ಎದುರಿಸೋದು ಸುಲಭದ ಮಾತಲ್ಲ.

ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ತಮ್ಮ ಬಳಿ, ಚುನಾವಣೆಯಲ್ಲಿ ಖರ್ಚು ಮಾಡೋದಕ್ಕೆ ಹಣವಿಲ್ಲ. ಹಾಗಾಗಿ ಬಿಜೆಪಿಯಿಂದ ಕನಿಷ್ಟ 15 ಕೋಟಿ ರೂ. ಪಾರ್ಟಿ ಫಂಡ್ ಕೊಡಿಸಿದ್ರೆ, ದೇವೇಗೌಡರ ಕುಟುಂಬವನ್ನು ಮಣಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ ಮಂಜು. ಹಾಸನದಲ್ಲಿ ಏನೇ ಮಾಡಿದ್ರೂ, ಬಿಜೆಪಿ ಗೆಲ್ಲೋದು ಕಷ್ಟ ಅನ್ನೋದು ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗೂ ಸ್ಪಷ್ಟವಾಗಿ ಗೊತ್ತು.

ಹಾಗಾಗಿಯೇ ಕರ್ನಾಟಕದಲ್ಲಿ ಗೆಲ್ಲುವುದು ನಿಶ್ಚಿತ ಎನ್ನಬಹುದಾದ ಕೆಲವು ಪ್ರಮುಖ ಕ್ಷೇತ್ರಗಳಿಗೆ 10 ಕೋಟಿ ರೂ. ವರೆಗೂ ಖರ್ಚು ಮಾಡಬಹುದು ಎಂಬ ಉದ್ದೇಶವೂ ಬಿಜೆಪಿ ಹೈ ಕಮಾಂಡ್ ಗೆ ಇದೆಯಂತೆ. ಆದರೆ, ಹಾಸನದಂತಹಾ ಸೋಲುವ ಕ್ಷೇತ್ರಕ್ಕೆ ಏನು ಮಾಡುವುದು.. ಈಗ ಎ.ಮಂಜು ಜತೆ ಬಿಜೆಪಿ ಪ್ರಮುಖರು ಚೌಕಾಶಿಗೆ ಇಳಿದಿದ್ದಾರೆ. ವ್ಯಾಪಾರ ಗಿಟ್ಟಿದ್ರೆ, ಮಾರ್ಚ್ 18 ರಂದು ಎ.ಮಂಜು ಬಿಜೆಪಿ ಸೇರ್ಪಡೆಯಾಗುತ್ತಾರೆ.

ಹಾಸನದಿಂದ ಕಣಕ್ಕೂ ಇಳಿಯುತ್ತಾರೆ. ಅದಕ್ಕೂ ಮೊದಲು ಮಾರ್ಚ್ 17 ರಂದು ನಡೆಯುವ ಕೋರ್ ಕಮಿಟಿ ಸಭೆಯಲ್ಲೂ ಯಡಿಯೂರಪ್ಪ ಈ ವಿಷಯ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ. ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ತಿಳಿದು ಬಳಿಕ ಹೈ ಕಮಾಂಡ್ ಗೆ ವಿಷಯ ಮುಟ್ಟಿಸುತ್ತಾರಂತೆ.

LEAVE A REPLY

Please enter your comment!
Please enter your name here