ಹಾಸನದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಮಾಸ್ಟರ್ ಸ್ಟ್ರೋಕ್ ಕೊಡುವುದಕ್ಕೆ ಬಿಜೆಪಿ ಪ್ರ್ಯಾನ್ ಮಾಡಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಾವಗಲ್ ಶ್ರೀನಾಥ್ ಅಥವಾ ಕ್ಯಫ್ಟನ್ ಗೋಪಿನಾಥ್ ಕಣಕ್ಕಿಳಿಸಲು ಕಮಲ ಪಕ್ಷದ ವರಿಷ್ಟರು ತಂತ್ರರೂಪಿಸಿದ್ದಾರೆ.
ದೇವೇಗೌಡರ ಬದಲು ಪ್ರಜ್ವಲ್ ಸ್ಪರ್ದೆ ಮಾಡಿದರೆ ಈ ಪ್ಲ್ಯಾನ್ ಪ್ರಯೋಗಿಸಲು ವರಿಷ್ಠರು ಚರ್ಚೆ ನಡೆಸಿದ್ದಾರೆ. ಹಾಸನದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಬಗ್ಗೆ ಕಾರ್ಯಕರ್ತರಲ್ಲಿರೊ ಅಸಮಧಾನದ ಲಾಭ ಪಡೆಯಲು ರಣತಂತ್ರ ರೂಪಿಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನ ಮಾಜಿ ಸಚಿವರುಗಳಾದ ಎ.ಮಂಜು,ಅಥವಾ ಬಿ.ಶಿವರಾಂ ರನ್ನ ಪಕ್ಷಕ್ಕೆ ಸೆಳೆಯೋ ಬಗ್ಗೆಯೂ ಮಾತುಕತೆ ನಡೆದಿದೆ. ಈ ಮೂಲಕ ಕಾಂಗ್ರೆಸ್-ಜೆಡಿಎಸ್ ದುರ್ಬಲಗೊಳಿಸಲು ರಣತಂತ್ರ ರೂಪಿಸುತ್ತಿದೆ.ಜೆಡಿಎಸ್ ಕಾಂಗ್ರೆಸ್ ಮೈತ್ರಿಬಗ್ಗೆ ಅಸಮಧಾನ ಇರೋ ನಾಯಕರುಗಳನ್ನ ಬಿಜೆಪಿಗೆ ಸೆಳೆದು ಮೈತ್ರಿ ಪಕ್ಷಗಳನ್ನ ವೀಕ್ ಮಾಡಲು ಚಿಂತನೆ…
ಜೆಡಿಎಸ್ ವರಿಷ್ಠರ ತವರಿನಲ್ಲೇ ಮೈತ್ರಿ ಪಕ್ಷಕ್ಕೆ ಬಿಗ್ ಶಾಕ್ ಕೊಡಲು ಅಮಿತ್ ಶಾ ರಣತಂತ್ರ.
ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಬರದಿದ್ದರೆ ಸೆಲೆಬ್ರೆಟಿಗಳನ್ನ ಕಣಕ್ಕಿಳಿಸಿ ಟಫ್ ಫೈಟ್ ನೀಡೋ ಬಗ್ಗೆ ಚರ್ಚೆ.ತೀವೃ ಕುತೂಹಲ ಮೂಡಿಸಿರೊ ಬಿಜೆಪಿ ವರಿಷ್ಠರ ನಡೆ.
ಚುನಾವಣೆ ಆರು ತಿಂಗಳು ಬಾಕಿ ಇರುವಾಗಲೆ ಹಾಸನದ ಅಭ್ಯರ್ಥಿ ಆಯ್ಕೆ ಬಗ್ಗೆ ತಲೆ ಕೆಡಿಸಿಕೊಂಡಿರೊ ಬಿಜೆಪಿ ವರಿಷ್ಠರು. ಈ ಬಗ್ಗೆ ಬಿಜೆಪಿ ರಾಜ್ಯ ನಾಯಕರೊಂದಿಗೆ ಚರ್ಚಿಸಿರೊ ವರಿಷ್ಠರು…