
ಮೇಕೆದಾಟು ಯೋಜನೆ ಜಾರಿಗೆ ಬಂದರೆ ಅದರ ಕ್ರೆಡಿಟ್ ಬಿಜೆಪಿ ತೆಗೆದುಕೊಳ್ಳಲಿ: ಡಿ.ಕೆ. ಶಿವಕುಮಾರ್
ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಬಂದರೆ ಅದರ ಶ್ರೇಯಸ್ಸೆಲ್ಲ ಬಿಜೆಪಿ ತೆಗೆದುಕೊಳ್ಳಲಿ, ನಮಗ್ಯಾವುದೇ ಕ್ರೆಡಿಟ್ ಬೇಕಿಲ್ಲ, ಎಲ್ಲವನ್ನು ಅವರೇ ತೆಗೆದುಕೊಳ್ಳಲಿ, ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನಾನೂ ಹೋಗ್ತೀನಿ, ಎಂದು ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹೇಗಿದ್ರೂ ಬಿಜೆಪಿಯವರದ್ದು ಡಬಲ್ ಎಂಜಿನ್ ಸರ್ಕಾರ. ಡಿಪಿಆರ್ ಈಗಾಗಲೇ ಅಪ್ರೂವ್ ಆಗಿದೆ. ಯೋಜನೆಗೆ ಪರಿಸರ ಇಲಾಖೆಯಿಂದ ಅನುಮೋದನೆ ಪಡೆದುಕೊಂಡು ಶಂಕುಸ್ಥಾಪನೆ ನೇರವೇರಿಸುವಾಗ ಕಾಂಗ್ರೆಸ್ ಬಾಜ ಬಜಂತ್ರಿ ತೆಗೆದುಕೊಂಡು ಹೋಗಿ ಅವರನ್ನು ಅಭಿನಂದಿಸುತ್ತೇವೆ ಎಂದು ಶಿವಕುಮಾರ್ ವ್ಯಂಗ್ಯವಾಡಿದರು.