Home Health ಕಾಮಿಡಿ ಲಾಕ್ ಡೌನ್ ಗೆ ಮೊದಲ ದಿನ ಗಡಿಜಿಲ್ಲೆಯಲ್ಲಿ ಹೇಗಿತ್ತು ಜನತೆ ಸ್ಪಂದನೆ?

ಕಾಮಿಡಿ ಲಾಕ್ ಡೌನ್ ಗೆ ಮೊದಲ ದಿನ ಗಡಿಜಿಲ್ಲೆಯಲ್ಲಿ ಹೇಗಿತ್ತು ಜನತೆ ಸ್ಪಂದನೆ?

ಕಾಮಿಡಿ ಲಾಕ್ ಡೌನ್ ಗೆ ಮೊದಲ ದಿನ ಗಡಿಜಿಲ್ಲೆಯಲ್ಲಿ ಹೇಗಿತ್ತು ಜನತೆ ಸ್ಪಂದನೆ?

339
0

ಚಾಮರಾಜನಗರ: ಕೋರೊನಾ ಸೋಂಕಿ ಅತೀ ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ 14 ದಿನಗಳ ಲಾಕ್ ಡೌನ್ ಗೆ ಜಿಲ್ಲೆಯ ಜನತೆ ಬೆಳ್ಳಂ ಬೆಳಗ್ಗೆ ಸ್ಪಂಧಿಸುತ್ತಿದ್ದಾರೆ.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸದಾ ಜನದಟ್ಟಣೆಯಿಂದ ಕೂಡಿದ್ದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿಯಲ್ಲಿ ದಿನಸಿ ಅಂಗಡಿಗಳ ಮುಂದೆ ಬೆರಳೇಣಿಯಷ್ಟು ಗ್ರಾಹಕರು ಅಗತ್ಯ ವಸ್ತುಗಳ ಖರೀಧಿಯಲ್ಲಿ ತೊಡಗಿದ್ದರು.

ತಳ್ಳುಗಾಡಿಯಲ್ಲಿ ತರಕಾರಿಗಳನ್ನು ಹಾಕಿಕೊಂಡಿರುವ ವ್ಯಾಪಾರಸ್ಥರು ಗ್ರಾಹಕರಿಗಾಗಿ ಕಾಯುತ್ತಿದ್ದರು. ಒಂದೆರಡು ಗ್ರಾಹಕರು ರಸ್ತೆಗೆ ಬಂದು ತರಕಾರಿ ಖರೀದಿಸುವುದೇ ಹೆಚ್ಚಾಗಿತ್ತು.ಸರ್ಕಾರದ ಸೂಚನೆಯಂತೆ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಹೆಚ್ಚಾಗಿ ಸಂಚಾರ ಮಾಡುತ್ತಿರಲಿಲ್ಲ. ಆದರೂ ಒಂದೆರಡು ವಾಹನಗಳು ಸಂಚಾರ ಮಾಡುತ್ತಿದ್ದವು.

ನಿತ್ಯ ಅಗತ್ಯ ವಸ್ತುಗಳ ಖರೀದಿಗೆ ವಾಹನದಲ್ಲಿ ತೆರಳಬಾರದು ಎನ್ನುವ ಕಟ್ಟಾಜ್ಞೆಗೆ ಜನತೆ ಸ್ಪಂಧನೆ ನೀಡುತ್ತಿದ್ದು, ತಾವು ಖರೀದಿಸಿದ ವಸ್ತುಗಳನ್ನು ಹೆಗಲ ಮೇಲಿಟ್ಟುಕೊಂಡೇ ನಡೆದು ಸಾಗುತ್ತಿದ್ದದ್ದು ಕಂಡು ಬಂತು.

ಸಾರ್ವಜನಿಕರು ತುರ್ತು ಸಂಧರ್ಭದಲ್ಲಿ ಮಾತ್ರ ವಾಹನ ಸಂಚಾರ ಮಾಡುತ್ತಿದ್ದದ್ದು ಕಂಡು ಬಂತಾದರೂ ಹೆಚ್ಚಿನ ಜನ ದಟ್ಟಣೆಯಾಗಲಿ ಅಥವಾ ವಾಹನ ಸಂಚಾರವಾಗಿ ಇಲ್ಲದೆ ಅಘೋಷಿತ ಬಂದ್ ನ ವಾತಾವರಣ ಸೃಷ್ಟಿಯಾಗಿತ್ತು.

ಸಾರ್ವಜನಿಕರು ಎಲ್ಲಿ ದ್ವಿಚಕ್ರವನ್ನು ರಸ್ತೆಗಿಳಿಸಿದರೆ ಪೊಲೀಸ್ ಇಲಾಖೆಯವರು ಸೀಜ್ ಮಾಡುವರೋ ಎನ್ನುವ ಭಯದಿಂದಾಗಿ ಹೆಚ್ಚಿನ ಜನತೆ ವಾಹನದಲ್ಲಿ ಅಂಗಡಿ ಬಳಿ ನಿಲ್ಲಿಸದೆ ಬೇರೆಲ್ಲೋ ಕಡೆ ನಿಲ್ಲಿಸಿದ ಪ್ರಸಂಗ ಕಂಡು ಬರುತ್ತಿತ್ತು. ಎಂದಿನಂತೆ ಹಾಲಿನ ವ್ಯಾಪಾರಕ್ಕೆ ತೊಂದರೆಯಾಗಲಿಲ್ಲ.

VIAಕಾಮಿಡಿ ಲಾಕ್ ಡೌನ್ ಗೆ ಮೊದಲ ದಿನ ಗಡಿಜಿಲ್ಲೆಯಲ್ಲಿ ಹೇಗಿತ್ತು ಜನತೆ ಸ್ಪಂದನೆ?
SOURCEಕಾಮಿಡಿ ಲಾಕ್ ಡೌನ್ ಗೆ ಮೊದಲ ದಿನ ಗಡಿಜಿಲ್ಲೆಯಲ್ಲಿ ಹೇಗಿತ್ತು ಜನತೆ ಸ್ಪಂದನೆ?
Previous articleಸೋಂಕಿಗೆ ಹೆದರಿದ ಜನ ಏಣಿಯಲ್ಲಿ ಶವ ಸಾಗಣೆ!
Next articleಭಗವದ್ಗೀತೆ ಪುಸ್ತಕ ಮಾರಾಟ ಮಾಡುತ್ತಿರುವ ರಷ್ಯನ್ ಪ್ರಜೆ!

LEAVE A REPLY

Please enter your comment!
Please enter your name here