Home KARNATAKA ಬೌನ್ಸ್ ಬೈಕ್ ಸವಾರರಿಗೆ ಶಾಕ್ ; ಬೌನ್ಸ್ ಬೈಕ್ ನಿಂದ ಕೊರೊನಾ ಹರಡುತ್ತೆ ಎನ್ನುವ ಭಯಾನಕ...

ಬೌನ್ಸ್ ಬೈಕ್ ಸವಾರರಿಗೆ ಶಾಕ್ ; ಬೌನ್ಸ್ ಬೈಕ್ ನಿಂದ ಕೊರೊನಾ ಹರಡುತ್ತೆ ಎನ್ನುವ ಭಯಾನಕ ವಿಚಾರ ಬೆಳಕಿಗೆ

365
0
SHARE

ಬೆಂಗಳೂರು. ಕೊರೊನಾ ಸದ್ಯ ಬೆಂಗಳೂರನ್ನ ಬೆಚ್ಚಿ ಬೀಳಿಸುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಾ ಇದೆ. ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್ ಗಳು ಇಲ್ಲದಷ್ಟರ ಮಟ್ಟಿಗೆ ಕೊರೊನಾ ನೃತ್ಯ ತಾಂಡವಾಡುತ್ತಿದ್ದು, ಸಿಲಿಕಾನ್ ಸಿಟಿ ಮಂದಿ ಆತಂಕಕ್ಕೀಡಾಗಿದ್ದಾರೆ. ಈ ನಡುವೆ ಸಾರ್ವಜನಿಕ ಸಾರಿಗೆ ಬಿಟ್ಟು ಬೌನ್ಸ್ ಬೈಕ್ ಯೂಸ್ ಮಾಡೋರಿಗೊಂದು ಶಾಕ್.

ಬೌನ್ಸ್ ಬೈಕ್ ನಿಂದ ಕೊರೊನಾ ಹರಡುತ್ತೆ ಎನ್ನುವ ಭಯಾನಕ ವಿಚಾರವೀಗ ಬೆಳಕಿಗೆ ಬಂದಿದೆ. ಈಗಾಗ್ಲೇ ಬೆಂಗಳೂರಿನಲ್ಲಿ ಕೊರೊನಾ ಸಮೂಹಕ್ಕೆ ಹರಡಿದ್ದು, ಯಾವ ಸಂದರ್ಭದಲ್ಲಿ ಯಾರು ಈ ಬೈಕ್ನ್ನ ಯೂಸ್ ಮಾಡ್ತಾರೋ ಗೊತ್ತಿಲ್ಲ. ಜೊತೆಗೆ ಬೌನ್ಸ್ ಬೈಕ್ ಯೂಸ್ ಮಾಡಿದವರು ಬಳಸಿದ ಹೆಲ್ಮೆಟ್ಟನ್ನೇ ಪದೇ ಪದೇ ಬಳಸುತ್ತಾರೆ.

ಅಷ್ಟೇ ಅಲ್ಲದೇ ಸದ್ಯ ನಾವು ಬಳಸೋ ಯಾವುದೇ ವಸ್ತುವಾಗಲಿ ಸ್ಯಾನಿಟೈಸ್ ಮಾಡಿ ಮತ್ತೆ ಯೂಸ್ ಮಾಡಬೇಕಾದ ಸಂದರ್ಭ ಒದಗಿ ಬಂದಿದೆ. ಆದ್ರೆ ಬೌನ್ಸ್ ಬೈಕ್ ನ್ನ ಯಾರೂ ಸ್ಯಾನಿಟೈಸ್ ಮಾಡೋದಿಲ್ಲ. ಸ್ಯಾನಿಟೈಸರ್ ಅಂತೂ ಬಳಸೋದೆ ಇಲ್ಲ. ಮತ್ತೊಂದಡೆ ಸಿಕ್ಕ ಸಿಕ್ಕ ಜಾಗದಲ್ಲಿ ಬೌನ್ಸ್ ಬೈಕನ್ನ ನಿಲ್ಲಿಸಿ ಹೋಗ್ತಾರೆ. ಅದರಲ್ಲೂ ಸೀಲ್ ಡೌನ್ ಏರಿಯಾಗಳಲ್ಲೂ ಬೌನ್ಸ್ ಬೈಕನ್ನ ನಿಲ್ಲಿಸಿ ಹೋಗ್ತಾರೆ. ಹೀಗಾಗಿ ಬೌನ್ಸ್ ಬೈಕ್ ಹತ್ತಿ ಒಡಾಟ ನಡೆಸೋರಿಗೆ ಕೊರೊನಾ ಆತಂಕ ಎದುರಾಗಿದೆ.

LEAVE A REPLY

Please enter your comment!
Please enter your name here