ಕಾಡು ಕೊತ್ತಂಬರಿ ಸೊಪ್ಪು ಬಗ್ಗೆ ನಿಮಗೆಷ್ಟು ಗೊತ್ತು..? ಇದರಲ್ಲಿದೆ ಈ ಔಷಧೀಯ ಗುಣಗಳು

ಲೈಫ್ ಸ್ಟೈಲ್

ನಮ್ಮ ಸುತ್ತಮುತ್ತ ಹಲವಾರು ಗಿಡಮೂಲಿಕೆಗಳಿರುತ್ತವೆ ಆದರೆ ನಮಗೆ ಅದರ ಸರಿಯಾದ ಉಪಯೋಗ ತಿಳಿದಿರುವುದಿಲ್ಲ. ಅಂತಹ ಒಂದು ವಿಶಿಷ್ಟ ಸಸ್ಯದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಕೊತ್ತಂಬರಿಯಲ್ಲಿ ಹಲವಾರು ವಿಧಗಳಿವೆ ಅದರಲ್ಲಿ ಕಾಡು ಕೊತ್ತಂಬರಿ ಕೂಡ ಒಂದು ನಾವಿಂದು ಕಾಡು ಕೊತ್ತಂಬರಿಯನ್ನು ಯಾವುದಕ್ಕೆ ಉಪಯೋಗಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಕೆಲವರಿಗೆ ಚರ್ಮವ್ಯಾದಿ ಸಮಸ್ಯೆ ಇರುತ್ತದೆ ಅದರಲ್ಲಿ ಕೆಲವರಿಗೆ ಬಿಳಿ ತೊನ್ನುಗಳಾಗುತ್ತವೆ. ತೊನ್ನು ಆದವರನ್ನು ಬೇರೆಯವರು ಇಷ್ಟಪಡುವುದಿಲ್ಲ ಅವರೊಡನೆ ಬೆರೆಯುವುದಿಲ್ಲ ಅವರಿಂದ ಎನನ್ನಾದರು ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಅವರಿಗೆ ಬೈಯುತ್ತಾರೆ ಅದು ಅವರು ಮಾಡಿರುವ ಕರ್ಮ ಹಾಗೆ ಹೀಗೆ ಹೇಳುತ್ತಾರೆ.

ಆದರೆ ಪಾಪ ತೊನ್ನು ಇರುವವರಿಗೆ ಅದು ಯಾಕಾಗಿ ಬರುತ್ತದೆ ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ. ಸಾಮಾನ್ಯವಾಗಿ ಹಾರ್ಮೋನುಗಳ ಸಮಸ್ಯೆಯಿಂದ ತೊನ್ನು ಕಾಣಿಸಿಕೊಳ್ಳುತ್ತದೆ. ನೀವು ಎಷ್ಟೇ ಚಿಕಿತ್ಸೆ ಪಡೆದರು ತೊನ್ನು ಕಡಿಮೆಯಾಗುವುದಿಲ್ಲ. ಅಂತವರು ಈ ಕಾಡು ಕೊತ್ತಂಬರಿಯನ್ನು ಬಳಸಬಹುದಾಗಿದೆ ಐದರಿಂದ ತೊನ್ನು ಸಂಪೂರ್ಣವಾಗಿ ವಾಸಿ ಆಗುತ್ತದೆ.

ತೊನ್ನು ಇರುವವರು ಕೆಲವು ಆಹಾರ ಪಥ್ಯಗಳನ್ನು ಮಾಡಬೇಕು ಕಾಫಿ ಟೀ ಕುಡಿಯುವುದನ್ನು ಬಿಡಬೇಕು ಹೆಚ್ಚು ಹುಳಿ ಇರುವ ಪದಾರ್ಥಗಳನ್ನು ಸೇವಿಸಬಾರದು. ಚಟಗಳಿದ್ದರೆ ಅದನ್ನು ಸಂಪೂರ್ಣವಾಗಿ ಬಿಡಬೇಕು. ತ್ರಿಫಲಾ ಚೂರ್ಣವನ್ನು ಸೇವಿಸಬೇಕು. ಲೋಳೆಸರದ ರಸವನ್ನು ತೆಗೆದು ಅದಕ್ಕೆ ಅದಕ್ಕೆ ಒಂದು ಚಿಟಿಕೆ ತ್ರಿಫಲಾ ಚೂರ್ಣವನ್ನು ಹಾಕಿ ಅದನ್ನು ಪ್ರತಿನಿತ್ಯ ತಿನ್ನಬೇಕು. ಇನ್ನು ಚರ್ಮದ ಮೇಲೆ ಲೇಪನ ಮಾಡುವುದಕ್ಕೆ ಕಾಡು ಕೊತ್ತಂಬರಿಯನ್ನು ಬಳಸಬೇಕು.

ಈ ಕಾಡು ಕೊತ್ತಂಬರಿ ಸೊಪ್ಪನ್ನು ಮಿಕ್ಸಿ ಅಥವಾ ಒರಳು ಕಲ್ಲಿಗೆ ಹಾಕಿ ರುಬ್ಬಿಕೊಳ್ಳಬೇಕು. ಅದನ್ನು ರುಬ್ಬಿದ ನಂತರ ಬಟ್ಟೆಯಲ್ಲಿ ಹಾಕಿ ಹಿಂಡಿ ರಸ ತೆಗೆದುಕೊಳ್ಳಬೇಕು. ಎಷ್ಟು ಪ್ರಮಾಣದ ರಸವನ್ನು ತೆಗೆದಿರುತ್ತಿರೋ ಅಷ್ಟೇ ಪ್ರಮಾಣದ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಈ ಎರಡನ್ನೂ ಗಾಜಿನ ಬಾಟಲಿಯಲ್ಲಿ ಹಾಕಿ ಒಂದು ಐದು ನಿಮಿಷ ಚೆನ್ನಾಗಿ ಕಲುಕಬೇಕು ಅವೆರಡು ಚೆನ್ನಾಗಿ ಮಿಶ್ರಣ ಆಗುವಂತೆ ಮಾಡಬೇಕು. ನಂತರ ಇದನ್ನು ಇಪ್ಪತ್ತು ದಿನಗಳ ಕಾಲ ಮಾಡಿನ ಮೇಲೆ ಇಡಬೇಕು ಅಂದರೆ ಸೂರ್ಯೋದಯ ಆದಾಗ ಅದನ್ನು ಹೊರಗಿಟ್ಟು ಸಂಜೆ ಆದಾಗ ಒಳಗೆ ತೆಗೆದುಕೊಂಡು ಬರಬೇಕು.ಅದರ ಮೇಲೆ ಹಿಮ ಬೀಳದಂತೆ ನೋಡಿಕೊಳ್ಳಬೇಕು.

ಇಪ್ಪತ್ತು ಇಪ್ಪತ್ತೈದು ದಿನಗಳವರೆಗೆ ಅದರ ಬುರುಡೆಯನ್ನು ಬಿಚ್ಚಬಾರದು. ಇಪ್ಪತ್ತೈದು ದಿನಗಳ ನಂತರ ತೊನ್ನು ಇರುವವರು ಅದನ್ನು ಯಾವ ಯಾವ ಭಾಗದಲ್ಲಿ ತೊನ್ನು ಇದೆ ಅಲ್ಲಿ ಇದನ್ನು ಹಚ್ಚಿಕೊಳ್ಳಬೇಕು. ಒಂದು ದಿನವೂ ಬಿಡದೆ ಮೂರು ತಿಂಗಳುಗಳ ಕಾಲ ಹಚ್ಚಬೇಕು. ಮಧ್ಯ ಒಂದು ದಿನ ತಪ್ಪಿಸಿದರೂ ಅದು ವಾಸಿಯಾಗುವುದು ಮೂರು ದಿನ ಮುಂದೆ ಹೋಗುತ್ತದೆ. ಬೆಳಿಗ್ಗೆ ಎದ್ದು ಸ್ನಾನ ಮಾಡಿ ಇದನ್ನು ಹಚ್ಚಬೇಕು ಮಾಮೂಲಿ ಕೆಲಸ ಕಾರ್ಯಗಳನ್ನು ಮಾಡಬಹುದು

Leave a Reply

Your email address will not be published.