Home Latest ಪ್ರಪಂಚದ ಕ್ರಿಕೆಟ್ ದೈತ್ಯ ಡಾನ್ ಬ್ರಾಡ್ಮನ್ ಹೆದರಿದ್ದು ಒಬ್ಬನೇ ಒಬ್ಬ ಬೌಲರ್ ಗೆ, ಇವರೆ ಆ...

ಪ್ರಪಂಚದ ಕ್ರಿಕೆಟ್ ದೈತ್ಯ ಡಾನ್ ಬ್ರಾಡ್ಮನ್ ಹೆದರಿದ್ದು ಒಬ್ಬನೇ ಒಬ್ಬ ಬೌಲರ್ ಗೆ, ಇವರೆ ಆ ಬೌಲರ್

349
0
SHARE

ಯುವಿಷ್ಕಾ ರವಿಕುಮಾರ್

ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟ್ಸ್ಮನ್ ಡಾನ್ ಬ್ರಾಡ್ಮನ್ ಹೆದರಿದ್ದು ಕೇವಲ  ಒಬ್ಬನೇ ಒಬ್ಬ  ಬೌಲರ್‌ಗೆ ಆತ ಇಂಗ್ಲೆಂಡ್ ಕಂಡ ಶತಮಾನದ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರು. ಅವರೆ  ಹೆರಾಲ್ಡ್ ಲಾರ್ ವುಡ್

ಕ್ರಿಕೆಟ್ ಜಗತ್ತು ಏನೆಲ್ಲ ಮ್ಯಾಜಿಕ್ ಗಳನ್ನು ಜೊತೆಗೆ ಸಾಧನೆಗಳನ್ನು ಕಂಡಿದೆ ಅದರಲ್ಲಿ ಒಂದು ‘ಬಾಡಿ ಲೈನ್ ‘ ಇಷ್ಟಕ್ಕೂ ಈ ಬಾಡಿಲೈನ್ ಎಂದಾಗ ನಮಗೆ ನೆನಪಾಗುವುದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ 1932-33 ರಲ್ಲಿ ನಡೆದ ಆಸೀಸ್ ಟೆಸ್ಟ್ ಸರಣಿ .

ಈ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ನ ನಾಯಕ ಡಗ್ಲಾಸ್ ಜಾರ್ಡಿನ್ ಆಜ್ಞೆಯನ್ನು ಮೀರಲಾಗದೆ ಮಾರಕವಾದ ಬೌಲಿಂಗ್ ಮಾಡಿದ ಲಾರಾ ವುಡ್  ಮೈದಾನದಲ್ಲಿ ಭೀತಿಯ ಹೊಳೆಯನ್ನೇ ಹರಿಸಿ ಕ್ರಿಕೆಟ್ ಇತಿಹಾಸದಲ್ಲಿ ತಾನೊಬ್ಬ ಖಳನಾಯಕನಾಗಿ ರೂಪುಗೊಂಡಿದ್ದು ಸುಳ್ಳಲ್ಲ ಇದರ ರೋಚಕ ಸ್ಟೋರಿಯನ್ನು ಈಗ ಹೇಳುತ್ತೇನೆ

ಈ ಲಾರ ವುಡ್  ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ನಂತರ  ಇಂಗ್ಲೆಂಡ್ ನ ವೃತ್ತಿಪರ ಕ್ರಿಕೆಟ್  ಕೌಂಟಿಗೆ ಆಟಗಾರನಾಗುವ ಬಯಕೆಯಿಂದ ಹಗಲಿರುಳು ಶ್ರಮಿಸಿ ಶ್ರಮಿಸಿ ನಾಟಿಂಗ್ ಹ್ಯಾಮ್ ಕುಂಟಿಯ ಆಟಗಾರನಾದ. 1926ರ ಆಸೀಸ್ ಟೆಸ್ಟ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಲಾರ್ ವುಡ್  ಆಗಾಗ ತನ್ನ ಲೇನ್ and ಲೆಂತ್ ಥಿಯರಿ ಮತ್ತು ಅತಿ ವೇಗವಾದ ಎಸೆತಗಳಿಂದ ಬ್ಯಾಟ್ಸ್ಮನ್ಗಳನ್ನು ತಬ್ಬಿಬ್ಬು ಗೊಳಿಸುತ್ತಿದ್ದರು .

ವಿಶ್ವಕ್ಕೆ ‘ಬಾಡಿ ಲೈನ್ ‘ ಆಟಗಾರ ಎಂದು ಗುರುತಿಸಿಕೊಳ್ಳುವುದಕ್ಕಿಂತ ಮುಂಚೆ ಲಾರಾ ವುಡ್  ಮೊದಲು ಆಡಿದ್ದು ಹದಿನಾರು ಟೆಸ್ಟ್ ಗಳು . ಇದರಲ್ಲಿ  45 ವಿಕೆಟ್ ಗಳನ್ನು ಪಡೆದಿದ್ದರೂ ಕೂಡ ತಂಡದ ಖಾಯಂ ಸದಸ್ಯರಾಗಿರಲಿಲ್ಲ .

1930 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ತಾಯಿ ನೆಲದಲ್ಲಿ ಅನುಭವಿಸಿದ 2-1 ಅಂತರದ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಬೇಕು ಎಂಬುದು ನಾಯಕ ಡಾಗ್ಲಸ್ ಜಾರ್ಡ್ನ್ನನ ರ ಹಠವಾಗಿತ್ತು. ಆ ಸರಣಿಯಲ್ಲಿ ಡಾನ್ ಬ್ರಾಡ್ಮನ್ 139.1 ಸರಾಸರಿಯಲ್ಲಿ 974ರನ್ ಹೊಡೆದಿದ್ದರು . ಆ ಸಂದರ್ಭದಲ್ಲಿ ಬ್ರಾಡ್ಮನ್ ಸರಾಸರಿಯನ್ನು ಹಿಮ್ಮೆಟ್ಟಿಸಬಲ್ಲ ಬೌಲರ್ ತಂಡದಲ್ಲಿ ಇಲ್ಲವೇ ? ಎಂದು ಇಂಗ್ಲೆಂಡ್ ತಂಡದಲ್ಲಿ  ತಲಾಶ್ ನಡೆದಿತ್ತು

ಆಸ್ಟ್ರೇಲಿಯಾದ ಮಧ್ಯಮ ಸರದಿಯನ್ನು ಮುರಿಯುವ ಮುಖ್ಯವಾಗಿ ಬ್ರಾಡ್ಮನ್ ಸರಾಸರಿಯನ್ನು ಹಿಮ್ಮೆಟ್ಟಿ ಸುವುದಕ್ಕಾಗಿ ‘ಜಾರ್ಡಿನ್’  ಬಾಡಿ ಲೈನ್ ಎಂಬ ಹೊಸ ತಂತ್ರವನ್ನು ಪ್ರಯೋಗಿಸಿದರು ಇದಕ್ಕೆ ಬಲಿಪಶುವಾದವರು ಬೇರೆ ಯಾರೂ ಅಲ್ಲ ಹೆರಾಲ್ಡ್  ಲಾರಾ ವುಡ್.  ಲಾರಾ ವು ಡ್ ಗೆ  ಇಂಗ್ಲೆಂಡ್ ತಂಡದಲ್ಲಿ ಸ್ಥಾನ ದೊರಕಿಸಿಕೊಟ್ಟ ಜಾರ್ಡಿನ್ ..’ಪಿಕೆ ಡೇಲಿ’ ಹೋಟೆಲ್  ನಲ್ಲಿ ವಿಶೇಷ ಭೋಜನ ಕೂಟವೊಂದನ್ನು ಏರ್ಪಡಿಸಿ. ಆತನಿಗೆ ‘ಬಾಡಿಲೈನ್’  ತಂತ್ರವನ್ನು ವಿವರಿಸಿದರು .

ಲೆಗ್ ಸೈಡ್ನಲ್ಲಿ  ಏಳೆಂಟು ಮಂದಿ ಫೀಲ್ಡರ್ ಗಳನ್ನು ನಿಲ್ಲಿಸಿ. ಸತತವಾಗಿ ವೇಗದ ಶಾರ್ಟ್ ಪಿಚ್ ಗಳ ಎಸೆತಗಳನ್ನು ಬ್ಯಾಟ್ ಮನ್ ನ ಮೇಲೆ ಆಯಾ ಬಿಡುವುದೇ   “ಬಾಡಿ ಲೈನ್” ತಂತ್ರ .*

ಎದೆ, ತಲೆಗಳ ಮಟ್ಟಕ್ಕೆ ಹಠಾತ್ತಾಗಿ ಎಗರಿ ಬರುವ ಚೆಂಡನ್ನು ತಡೆಯುವ ಯತ್ನದಲ್ಲಿ ಬ್ಯಾಟ್ಸ್ ಮನ್ ರಕ್ಷಣಾತ್ಮಕ ಆಟಕ್ಕೆ ಇಳಿದರೆ ಚೆಂಡು ಆತನ ದೇಹಕ್ಕೆ ಬಂದು ಅಪ್ಪಳಿಸುತ್ತಿತ್ತು . ಹುಕ್  ಅಥವಾ ಫುಲ್ ಮಾಡಲು ಹೊರಟರೆ ಲೇಗ್  ಸೈಡ್ ನಲ್ಲಿ ಇರುತ್ತಿದ್ದ ಫೀಲ್ಡರ್ ಗಳಿಗೆ ಕ್ಯಾಚ್ ಕೊಡಬಹುದಾಗಿದ್ದ ಅಪಾಯಕಾರಿ ಎಸೆತ ಅದು .

ಈ ತಂತ್ರವನ್ನು ಆಸ್ಟ್ರೇಲಿಯನ್ನರ ಮೇಲೆ ಪ್ರಯೋಗಿಸಿದ ಜಾರ್ಡಿನ್ ಅದರಲ್ಲಿ ಯಶಸ್ವಿಯೂ ಆದರು ಲಾರ   ಮಾರಕ ದಾಳಿ ಎದುರು  ಆಸ್ಟ್ರೇಲಿಯಾ ತಂಡ ನಡುಗಿ ಹೋಗಿತ್ತು ಆ ತಂಡದ ಘಟಾನುಘಟಿ ದಾಂಡಿಗರೆಲ್ಲರೂ ಬೆವರು ಸುರಿಸುತ್ತಾ ಹೀಲ್ಡ್ ಗೆ ಇಳಿಯಬೇಕಾಯಿತು ಈ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 4-1 ರ ಅಂತರದಲ್ಲಿ ಗೆದ್ದುಕೊಂಡಿತು .

ಬ್ರಾಡ್ಮನ್ ನಿರೀಕ್ಷಿಸಿದಂತೆ ರನ್ ಗಳಿಸಲಾಗದೆ ಅವರ ಸರಾಸರಿ 56.57 ಇಳಿದಿತ್ತು. ಹೆರಾಲ್ಡ್ ಲಾರಾ ಹುಡ್  ಈ ಟೆಸ್ಟ್ ಸರಣಿಯಲ್ಲಿ 19.23 ಸರಾಸರಿಯಲ್ಲಿ  33 ವಿಕೆಟ್ ಉರುಳಿಸಿದರು .ಈ ಸರಣಿಯ ನಂತರ ಅವರಿಗೆ ದೂರವಾಣಿಯಲ್ಲಿ ಬೆದರಿಕೆ ಕರೆಗಳು, ಮನೆಯ ಮೇಲೆ ಕಲ್ಲಿನ ಸುರಿ ಮಳೆಗಳು ಆರಂಭವಾದವು . ಇಂಗ್ಲೆಂಡ್ ಆಯ್ಕೆ ಮಂಡಳಿಯು ಲಾರಾ ವುಡ್ ಕ್ಷಮೆಯಾಚಿಸಬೇಕೆಂದು ಒತ್ತಾಯಪಡಿಸಿತು ಆದರೆ ಅದಕ್ಕೆ ಒಪ್ಪಲಿಲ್ಲ . ನನ್ನ ನಾಯಕ ಹೇಳಿದಂತೆ ನಾನು ಮಾಡಿದೆ ನಾನೇಕೆ ಕ್ಷಮೆ ಕೇಳಲಿ? ಎಂದರು.  ಮತ್ತೆಂದೂ ಹಿರಾಲ್ ಟೆಸ್ಟ್ ಪಂದ್ಯಗಳನ್ನು ಆಡಲಿಲ್ಲ ಅವರು1926 ರಿಂದ 1933 ವರೆಗಿನ ಏಳು ವರ್ಷದ ಕ್ರಿಕೆಟ್ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡು ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ಭಯಾನಕ “ಬಾಡಿ ಲೈನ್” ಬೌಲರ್ ಎಂದು ವಿಶ್ವ ವಿಖ್ಯಾತಿ ಪಡೆದರು .

ನಂತರ 1950ರಲ್ಲಿ  ಕ್ರಿಕೆಟ್ ನಿಂದ ನಿವೃತ್ತಿಗೊಂಡ  20 ವರ್ಷಗಳ ನಂತರ  . ಪತ್ನಿ ವಾಯ್ಸ್ ಹಾಗೂ ಐವರು ಪುತ್ರಿಯರೊಂದಿಗೆ ವೈರಿ ರಾಷ್ಟ್ರವಾದ  ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬಂದು ನೆಲೆಸಿದ ಲಾರಾ  ಹುಡ್ ರನ್ನು    ಆಸ್ಟ್ರೇಲಿಯನ್ನರು ಗೌರವದಿಂದ ಕಂಡರು .

LEAVE A REPLY

Please enter your comment!
Please enter your name here