ಬ್ರೇಕಿಂಗ್: ಗುರೂಜಿ ಕೊಲೆ ಪ್ರಕರಣ: ಆರೋಪಿಗಳು ಕೋರ್ಟ್ ಗೆ ಹಾಜರು

ಬೆಂಗಳೂರು

ಹುಬ್ಬಳ್ಳಿ: ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಮಹಾಂತೇಶ ಶಿರೂರ್ ಹಾಗೂ ಮಂಜುನಾಥ ಮೆರೆವಾಡನನ್ನು ಹುಬ್ಬಳ್ಳಿಯ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.

ಹೌದು… ಈ ಹಿಂದೇ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದು, ಇಂದು ಪೊಲೀಸ್ ಕಸ್ಟಡಿಯ ಅವಧಿ ಪೂರ್ಣಗೊಂಡ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ನ ವಿದ್ಯಾನಗರದ ಪೊಲೀಸರಿಂದ ಬೀಗಿ ಬಂದೋಬಸ್ತ್ ಮೂಲಕ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.

ಈಗಾಗಲೇ ಆರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಈಗಲೂ ಕೂಡ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಿದೆ.

Leave a Reply

Your email address will not be published.