BREAKING NEWS.. ಖ್ಯಾತ ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಬೆಂಗಳೂರು

ಬೆಂಗಳೂರು: ಖ್ಯಾತ ಗಾಯಕ, ವಕೀಲ ಶಿವಮೊಗ್ಗ ಸುಬ್ಬಣ್ಣ(83) ಕಳೆದ ರಾತ್ರಿ ಹೃದಯಸ್ತಂಬನದಿಂದ ವಿಧಿವಶರಾಗಿದ್ದಾರೆ. ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಶಿವಮೊಗ್ಗ ಸುಬ್ಬಣ್ಣನವರ ಮಗ ಶ್ರೀರಂಗ ಮಾತಾಡಿ, ನಿನ್ನೆ ಸಂಜೆ ಸಂಜೆ ಐದರ ಸುಮಾರಿಗೆ ಹುಷಾರಿರಲಿಲ್ಲ. ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಅಲ್ಲಿಂದ ಜಯದೇವಕ್ಕೆ ಶಿಫ್ಟ್ ಮಾಡುವಷ್ಟರಲ್ಲಿ ಹೃದಯಘಾತವಾಯ್ತು. ಬೆಂಗಳೂರಿನಲ್ಲೇ ಇವತ್ತು ಅಂತ್ಯಕ್ರಿಯೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕಾಡು ಕುದುರೆ ಸಿನಿಮಾದ `ಕಾಡು ಕುದುರೆ ಓಡಿಬಂದಿತ್ತಾ’ ಹಾಡಿಗೆ 1979ರಲ್ಲಿ ಸುಬ್ಬಣ್ಣ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಇದು ಹಿನ್ನೆಲೆ ಗಾಯನದಲ್ಲಿ ಕನ್ನಡಕ್ಕೆ ಒಲಿದ ಮೊದಲ ರಾಷ್ಟ್ರಪ್ರಶಸ್ತಿಯಾಗಿದೆ. ರಜತ ಕಮಲ, ಶಿಶುನಾಳ ಷರಿಫ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸುಬ್ಬಣ್ಣ ಅವರಿಗೆ ಲಭಿಸಿದೆ. ನೋಟರಿ ಪಬ್ಲಿಕ್ ಅಲ್ಲೂ ಅಪಾರ ಸೇವೆ ಸಲ್ಲಿಸಿದ್ದ ಶಿವಮೊಗ್ಗ ಸುಬ್ಬಣ್ಣ ಗಾಯಕರಾಗಿ ಜೊತೆಗೆ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. ಗಾಯನ ಲೋಕದ ದಿಗ್ಗಜರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಆನಂದಮಯ ಈ ಜಗ ಹೃದಯ ಏತಕೆ ಭಯಮಾನೋ, ಮೊದಲು ಮಾನವನಾಗು ಸೇರಿದಂತೆ ಹಲವಾರು ಜನಪ್ರಿಯ ಹಾಡುಗಳಿಗೆ ಸುಬ್ಬಣ್ಣ ದನಿಯಾಗಿದ್ದಾರೆ.

Leave a Reply

Your email address will not be published.