ಬ್ರಿಟನ್ ಪ್ರಧಾನಿ ಹುದ್ದೆಗೆ ರೇಸ್: 3ನೇ ಸುತ್ತಿನಲ್ಲೂ ಭಾರತೀಯ ಮೂಲದ ರಿಶಿ ಸುನಕ್ ಮುಂದೆ

ಅಂತರಾಷ್ಟ್ರೀಯ

ಲಂಡನ್: ಭಾರತ ಮೂಲದ ಮಾಜಿ ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಾಕ್ 4 ನೇ ಸುತ್ತಿನ ಮತದಾನದಲ್ಲಿ 118 ಮತಗಳನ್ನು ಪಡೆಯುವ ಮೂಲಕ ಬ್ರಿಟಿಷ್ ಪ್ರಧಾನಿ ಹುದ್ದೆಗೆ ಇನ್ನೂ ಹತ್ತಿರವಾಗಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕನಾಗುವ ಸ್ಪರ್ಧೆಯಲ್ಲೂ ಸುನಾಕ್ ಮುನ್ನಡೆ ಸಾಧಿಸಿದ್ದಾರೆ.

ಮಂಗಳವಾರ ನಡೆದ ಕನ್ಸರ್ವೇಟಿವ್ ಪಕ್ಷದ 4 ನೇ ಸುತ್ತಿನ ಮತದಾನದಲ್ಲಿ ಸುನಾಕ್ 118 ಮತಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಕಳೆದ 3 ನೇ ಸುತ್ತಿನ ಮತದಾನದಲ್ಲಿ ಸುನಾಕ್ 115 ಮತಗಳನ್ನು ಪಡೆದಿದ್ದರು. ಇದೀಗ 118 ಮತಗಳನ್ನು ಪಡೆಯುವ ಮೂಲಕ ತಮ್ಮ ಸ್ಥಾನದ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ವ್ಯಾಪಾರದ ಸಚಿವ ಪೆನ್ನಿ ಮೊರ್ಡಾಂಟ 92 ಮತ ಹಾಗೂ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 68 ಮತಗಳನ್ನು ಪಡೆಯುವ ಮೂಲಕ 2ನೇ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಮಾಜಿ ಸಚಿವ ಬಡೆನೊಚ್ 59 ಮತಗಳನ್ನು ಪಡೆಯುವ ಮೂಲಕ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಬುಧವಾರ 5ನೇ ಸುತ್ತಿನ ಮತದಾನ ನಡೆಯಲಿದ್ದು, ಬ್ರಿಟಿಷ್ ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ ನಡೆಸಲಿರುವ ಅಂತಿಮ ಸುತ್ತಿನ ಇಬ್ಬರು ಅಬ್ಯರ್ಥಿಗಳು ಯಾರು ಎಂಬುದು ತಿಳಿದುಬರಲಿದೆ

Leave a Reply

Your email address will not be published.