
Britain queen elizabeth…ಹೊಸ ವಿಶ್ವದಾಖಲೆ ಸೃಷ್ಠಿಸಿದ ಬ್ರಿಟನ್ ರಾಣಿ ಎಲಿಜಬೆತ್
ಲಂಡನ್: ಬ್ರಿಟನ್ನ ಹಾಲಿ ರಾಣಿ 2ನೇ ಎಲಿಜಬೆತ್ (96), ವಿಶ್ವದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಎರಡನೇ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಇದುವರೆಗೂ 2ನೇ ಸ್ಥಾನದಲ್ಲಿದ್ದ ಥಾಯ್ಲೆಂಡ್ನ ರಾಜ ಭೂಮಿಬೋಲ್ ಅದ್ಯುಲ್ದೇಜ್ ಅವರನ್ನು 3ನೇ ಸ್ಥಾನಕ್ಕೆ ತಳ್ಳಿದ್ದಾರೆ.
1953ರಲ್ಲಿ ಪಟ್ಟಾಭಿಷೇಕವಾಗಿ ಅಧಿಕಾರದ ಗದ್ದುಗೆಯೇರಿದ ರಾಣಿ 2ನೇ ಎಲಿಜಬೆತ್ 2015ರಲ್ಲಿಯೇ ರಾಣಿ ವಿಕ್ಟೋರಿಯಾ ಆಳ್ವಿಕೆಯ ಅವಧಿಯನ್ನು ಮೀರಿಸಿ, ಅತಿ ಹೆಚ್ಚು ಅವಧಿ ಬ್ರಿಟನ್ ಅನ್ನು ಆಳಿದ ರಾಣಿ ಎನಿಸಿಕೊಂಡಿದ್ದರು. ರಾಣಿ ಅಧಿಕರಕ್ಕೇರಿ 70 ವರ್ಷಗಳಾದ ಹಿನ್ನೆಲೆಯಲ್ಲಿ ಬ್ರಿಟನ್ನಲ್ಲಿ ಪ್ಲಾಟಿನಂ ಜ್ಯುಬಿಲಿ ಕಾರ್ಯವನ್ನು ಆಯೋಜಿಸಲಾಗಿದೆ. ಥೈಲೆಂಡಿನ ರಾಜ ಭೂಮಿಬೋಲ್ ಅದುಲ್ಯದೇಜ್ ಅವರ ದಾಖಲೆಯನ್ನು ಮೀರಿಸಿ ರಾಣಿ ಎಲಿಜಬೆತ್ 2ನೇ ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ರಾಣಿಯೆನಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.